ಮುಂಬೈ: ನಟಿ ಕತ್ರಿನಾ ಕೈಫ್ ಅವರು ಮದುವೆ ಮೂಲಕವಾಗಿ ಬಾಲಿವುಡ್ ಅಂಗಳದಲ್ಲಿ ಕಳೆದ ಒಂದು ತಿಂಗಳಿನಿಂದ ತುಂಭಾ ಸುದ್ದಿಯಲ್ಲಿದ್ದರು. ಇದೀಗ ವಜ್ರದ ಖಚಿತವಾಗಿರುವ ಮಾಂಗಲ್ಯ ಸರದ ಬೆಲೆ ಸುದ್ದಿ ಎಲ್ಲರನ್ನು ನಿಬ್ಬೆರಗಾಗಿಸಿದೆ.
ಕತ್ರಿನಾ ಕೈಫ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು. ನಟ ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ಅದ್ದೂರಿ ಆಗಿ ನಡೆದಿದೆ. ಕತ್ರಿನಾ ತಮ್ಮ ಮನೆಯಲ್ಲಿ ಕೂತಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಆ ಫೋಟೋಗಳಲ್ಲಿ ಕತ್ರಿನಾ ಕೈಫ್ ಅವರ ಮಾಂಗಲ್ಯ ಸರ ಎಲ್ಲರ ಗಮನ ಸೆಳೆಯುತ್ತಿದೆ ಚಿನ್ನದ ಗುಂಡು ಹಾಗೂ ಕರಿಮಣಿಗಳನ್ನು ಹೊಂದಿರುವ ಈ ಮಂಗಳಸೂತ್ರ ವಜ್ರಗಳು ಇವೆ. ಸರದ ಬೆಲೆ ಬರೋಬ್ಬರಿ ೫ ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಪಂಜಾಬಿ ಸಂಪ್ರದಾಯದಂತೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆ ನಡೆದಿತ್ತು. ಮದುವೆಯಲ್ಲಿ ಧರಿಸಿದ್ದ ಕೆಂಪು ಬಣ್ಣದ ಲೆಹೆಂಗಾದ ಬೆಲೆ ಬರೋಬ್ಬರಿ ೧೭ ಲಕ್ಷ ರೂಪಾಯಿ ಎನ್ನಲಾಗಿದೆ.