ಮೈಸೂರು: ಇತ್ತೀಚಿಗೆ ಮಲೇಷ್ಯಾದ ಜೋಹ ಬಾರುವಿನಲ್ಲಿ (Johor Bahru) ನಡೆದ ಸ್ಟೂಡೆಂಟ್ ಒಲಿಂಪಿಕ್ ಇಂಟರ್ನ್ಯಾಷನಲ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾನಂದ ಕಶ್ಯಪ್ ಶಟಲ್ ಬ್ಯಾಡ್ಮಿಂಟನ್ನಲ್ಲಿ ಗಮನಾರ್ಹ ಗೆಲವು ಸಾಧಿಸಿ, ಚಿನ್ನದ ಪದಕ ಗೆದ್ದಿದ್ದಾರೆ, ಸುಮಾರು 25ಕ್ಕೂ ಹೆಚ್ಚು ದೇಶದ ಸ್ಪರ್ಧೆಗಳಿದ್ದರು.
“ಕಶ್ಯಪ್ ಈಗಾಗಲೇ, 2022-23ರ 9ನೇ ಸ್ಟೂಡೆಂಟ್ ಒಲಿಂಪಿಕ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ ” ಎಂದು ತಮ್ಮ ವಿದ್ಯಾರ್ಥಿಯ ಸಾಧನೆ ಬಗ್ಗೆ ಹೆಮ್ಮೆಯ ಮಾತುಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಸದಾಶಿವೇಗೌಡ ಹಂಚಿಕೊಂಡರು.
ವಿದ್ಯಾನಂದರ ಗೆಲುವು ಇಡೀ ರಾಜ್ಯಕ್ಕೆ ಹೆಮ್ಮೆ ತರುವುದಲ್ಲಾದೇ, ರಾಷ್ಟ್ರವ್ಯಾಪಿ ಉತ್ಸಾಹಿ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಇದು ಶೈಕ್ಷಣಿಕ ಮತ್ತು ಕ್ರೀಡೆ ಎರಡರಲ್ಲೂ ಪ್ರತಿಭೆಯನ್ನು ಪೋಷಿಸುವ ಕಾಲೇಜಿನ ಬದ್ಧತೆಯನ್ನು ತೋರಿಸುತ್ತದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪಿ. ವಿಶ್ವನಾಥ್ ತಿಳಿಸಿದರು.
ವಿದ್ಯಾನಂದ ಕಶ್ಯಪ್ ಕೆ ಆರ್ ನಗರದ ನಿವಾಸಿಗಳಾದ ಅಂಬರೀಶ ಮತ್ತು ಜಯಶ್ರೀ ದಂಪತಿಗಳ ಮಗನಾಗಿದ್ದು, ವಿವಿಸಿಇ ಕಾಲೇಜಿನಲ್ಲಿ ಇನ್ಫಾರ್ಮಶನ್ ಸೈನ್ಸ್ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ.