ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರದ ನಡುವೆ ಕಾಪು ಲೈಟ್ ಹೌಸ್ ಗಿಂತ ೧೫ ಕಿ.ಮೀ ದೂರದಲ್ಲಿ ಬಂಡೆಗೆ ಅಪ್ಪಳಿಸಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್ಪ್ರೆಸ್ ಪ್ರೆಸ್ ವೆಸೆಲ್ ಟಗ್ ನಲ್ಲಿ ಸಿಲುಕಿರುವ ಒಂಬತ್ತು ಮಂದಿ ಸಿಬ್ಬಂದಿಗಳನ್ನು ನೌಕಾಪಡೆ ರಕ್ಷಣೆ ಮಾಡಿದೆ.
ಬೋಟ್ ನಲ್ಲಿದ್ದ ಮುಲ್ಲಾ ಖಾನ್, ಗೌರವ್ ಕುಮಾರ್, ಶಂತನು, ಅಹಮ್ಮದ್ ರಾಹುಲ್, ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀನಾರಾಯಣ ಪ್ರಾಣಾಪಾಯದಿಂದ ಪಾರಾಗಿದ್ದರೆ. ಇವರನ್ನು ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ, ಕೋಸ್ಟ್ ಗಾರ್ಡ್ ನ ವರಾಹ ನೌಕೆಯ ಮೂಲಕ ದಡಕ್ಕೆ ಕರೆತರಲಾಗಿದೆ.
ಕಾರ್ಮಿಕರು ಎನ್‌ಎಂಪಿಟಿ ಬಂದರಿನ ಹೊರವಲಯದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ತೌಕ್ತೆ ಚಂಡಮಾರುತದ ಪರಿಣಾಮ ಆ ಂಕರ್ ತುಂಡಾಗಿ ತೇಲಿ ಬಂದು, ಕಾಪು ಬಳಿಯಲ್ಲಿ ಅಪಘಾತಕ್ಕೊಳಗಾಗಿದ್ದರಿಂದ ಕಾರ್ಮಿಕರು ಕೋರಮಂಡಲ ಎಕ್ಸ್ ಪ್ರೆಸ್ ವೆಸೆಲ್ ಟಗ್ ನಲ್ಲಿ ಸಿಲುಕಿಕೊಂಡಿದ್ದರು. ಇಲ್ಲಿನ ಮ್ಯಾನೇಜರ್ ತಮ್ಮನ್ನು ರಕ್ಷಣೆ ಮಾಡುವಂತೆ ವೀಡಿಯೋ ಮಾಡಿ ಅದನ್ನು ಕಳುಹಿಸಿಕೊಡುವ ಮೂಲಕ ಮನವಿ ಮಾಡಿದ್ದರು.

By admin