
ಚಾಮರಾಜನಗರ: ನಗರಸಭೆ ವ್ಯಾಪ್ತಿಯ ೧೦ನೇ ವಾರ್ಡ್ ಕರಿನಂಜನಪುರದಲ್ಲಿ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯ ನಡೆಯಿತು.
ವಾರ್ಡಿನಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಗ್ರಾಮದ ಪಕ್ಷ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದಸ್ಯತ್ವ ನೋಂದಣಿ ಮಾಡಿಸಿದರು.
ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್( ಮುನ್ನಾ) ಮಾತನಾಡಿ, ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಪಕ್ಷದಸಂಘಟನೆಗೆ ಅಗತ್ಯವಾಗಿದ್ದು, ಪಕ್ಷದ ಬಲವರ್ಧನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಡಿಜಿಟಲ್ ಸದಸ್ಯತ್ವ ನೋಂದಣಿ ಆರಂಭಿಸಿದೆ. ಪ್ರತಿಬೂತ್‌ಗಳಲ್ಲಿ ಕನಿಷ್ಠ ೧೦೦ ಮಂದಿಸದಸ್ಯರು, ಪ್ರತಿವಿಧಾನಸಭೆ ಕ್ಷೇತ್ರದಲ್ಲಿ ೨೫ ಸಾವಿರಸದಸ್ಯರಂತೆ ೧ಲಕ್ಷ ಸದಸ್ಯತ್ವ ಹೊಂದುವ ಗುರಿಹೊಂದಲಾಗಿದೆ ಎಂದರು.
ಅಸಂಘಟಿತ ಕಾರ್ಮಿಕ ವಿಭಾಗದ ಬ್ಲಾಕ್ ಅಧ್ಯಕ್ಷ ಎಂ.ಸ್ವಾಮಿ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಸಯ್ಯದ್ ಮುಜಾಯಿಬ್, ಬ್ಲಾಕ್ ಅಧ್ಯಕ್ಷ ಮಹೇಶ್, ವಿನೋದ್, ನಗರಸಭೆ ಸದಸ್ಯ ಮಹದೇವಯ್ಯ, ಮುಖಂಡ ಬಸವಣ್ಣ, ಮಹೇಶ್, ಮಹದೇವೇಗೌಡ, ಗುರುಮೂರ್ತಿ, ಯುವಕಾಂಗ್ರೆಸ್ ನಗರಘಟಕದ ಉಪಾಧ್ಯಕ್ಷರಾದ ಮಣಿಕಂಠ, ಲೋಕನಾ ಥ್, ಮರಿಸ್ವಾಮಿ, ಗುರುಸ್ವಾಮಿ ಇತರರು ಹಾಜರಿದ್ದರು.
