ಮೈಸೂರು, ಕರ್ನಾಟಕ – ಹಲವಾರು ಉದ್ಯಮಗಳಲ್ಲಿನ ವ್ಯವಹಾರಕ್ಕೆ ಮೈಸೂರು ನಗರ ಆದ್ಯತೆಯ ಸ್ಥಳವಾಗಿ ಸಿದ್ಧವಾಗುತ್ತಿದೆ. ಕರ್ನಾಟಕ ಸರ್ಕಾರ ಪ್ರಾಯೋಜಿಸಿರುವ ಉಪಕ್ರಮವಾದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆಡಿಇಎಂ) ಬೆಂಗಳೂರಿನಿಂದಾಚೆಗೆ ತಂತ್ರಜ್ಞಾನ ಮತ್ತು ನವೀನತೆಗೆ ಬದಲಿ ಗುರಿಯಾಗಿ ಸ್ಥಾನ ಪಡೆಯುವುದಕ್ಕೆ ಮೈಸೂರಿನ ಚಟುವಟಿಕೆಯ ವೇಗವನ್ನು ಹೆಚ್ಚಿಸಲು ನೆರವಾಗಲಿದೆ.
ಮೊದಲ ಹೆಜ್ಜೆಗಳಲ್ಲಿ ಕರ್ನಾಟಕ ಸರ್ಕಾರ ಪ್ರಮುಖ ಉದ್ಯಮ ನೇತಾರರಾದ, ಪವನ್ ರಂಗ, ನಿರ್ದೇಶಕರು, ಎನ್‍ಆರ್ ಗ್ರೂಪ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರಂಗ್‍ಸನ್ಸ್; ಸಂಜೀವ್‍ಕುಮಾರ್ ಗುಪ್ತಾ – ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಲಹರಿ; ಸಂಜಯ್ ಶ್ರೀನಿವಾಸಮೂರ್ತಿ, ವ್ಯವಸ್ಥಾಪಕ ನಿರ್ದೇಶಕರು, ಸಿಲಿಕಾನ್ ರೋಡ್ ಐಡಿಯೇಷನ್ ಲ್ಯಾಬ್ಸ್, ಕೃಷ್ಣದಾಸ್ ಉನ್ನಿ, ಕಾರ್ಯನಿರ್ವಾಹಕ ನಿರ್ದೇಶಕರು – ಕ್ಲೈಂಟ್ ಇನ್ನೋವೇಷನ್, ಐಬಿಎಂ ಮುಂತಾದ ಮೈಸೂರಿನ ಪ್ರಮುಖರನ್ನು ಒಳಗೊಂಡ ಸಮಿತಿಯನ್ನು ಕೆಡಿಇಎಂ(ಬಿಯಾಂಡ್ ಬೆಂಗಳೂರು)ನ ಮೈಸೂರು ಕ್ಲಸ್ಟರ್‍ಗೆ ನಿರ್ದಿಷ್ಟವಾದ ಚಟುವಟಿಕೆಗಳ ನೇತೃತ್ವ ವಹಿಸಲು ರಚಿಸಿತ್ತು. ಕೆಡಿಇಎಂ ಮೈಸೂರು ಕ್ಲಸ್ಟರ್‍ಗೆ ಟೈ ಮೈಸೂರು ಮತ್ತು ಕೆ-ಟೆಕ್ ಕೂಡ ಬೆಂಬಲಿಸಿದೆ.
ಕರ್ನಾಟಕ ಡಿಜಿಟಲ್ ಎಕಾನಮಿಯ ಪುನರಾರಂಭ ಕುರಿತಂತೆ ಚೇರ್ಮನ್ ಬಿ.ವಿ. ನಾಯ್ಡು ಅವರು ಮಾತನಾಡಿ, “ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಜ್ಞಾನ ಸೇತುವೆಯಾಗಿ ಕೆಡಿಇಎಂ ಕಾರ್ಯನಿರ್ವಹಿಸಲಿದೆ. ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ನೀತಿಗಳ ಅನುಷ್ಠಾನಗಳಲ್ಲಿ ಬೆಂಬಲ ಮತ್ತು ನೆರವು ನೀಡಲಿದೆ. ಕೆಡಿಇಎಂ ರಾಜ್ಯದ ಮಾಹಿತಿ ತಂತ್ರಜ್ಞಾನ ರಫ್ತನ್ನು 150 ಶತಕೋಟಿ ಅಮೇರಿಕನ್ ಡಾಲರ್ ಗುರಿ ತಲುಪಲು ಕರ್ನಾಟಕ ಸರ್ಕಾರಕ್ಕೆ ಬೆಂಬಲ ನೀಡಲಿದೆ’’ ಎಂದರು.
ಎನ್‍ಆರ್ ಗ್ರೂಪ್‍ನ ನಿರ್ದೇಶಕರು ಮತ್ತು ರಂಗ್‍ಸನ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಪವನ್ ರಂಗಾ ಅವರು ಈ ಉಪಕ್ರಮ ಕುರಿತು ಮಾತನಾಡಿ, “ನಮ್ಮ ರಾಜ್ಯವನ್ನು ಒಂದು ಬ್ರಾಂಡ್ ಆಗಿ ನಿರ್ಮಿಸುವತ್ತ ಮತ್ತು ಹಲವಾರು ವಿಭಾಗಗಳಲ್ಲಿ ನಾಯಕತ್ವ ಸ್ಥಾನವನ್ನು ವಿಸ್ತರಿಸುವತ್ತ ನಾವು ದೃಢನಿಶ್ಚಯ ಹೊಂದಿದ್ದೇವೆ. ಬೆಂಗಳೂರು ಈಗಾಗಲೇ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಸ್ಥಾಪನೆಗೊಂಡಿದೆ. ಜಾಗತಿಕ ವ್ಯವಹಾರಕ್ಕೆ ಮೈಸೂರನ್ನು ಮುಂದಿನ ಸ್ಥಳವಾಗಿ ಮಾಡಲು ನಾವು ಇಚ್ಛಿಸುತ್ತೇವೆ. ಜೊತೆಗೆ ಈ ಮೂಲಕ ನಮ್ಮ ರಾಜ್ಯದ ಆರ್ಥಿಕ ಸ್ಥಿತಿಗೆ ಚಾಲನೆ ನೀಡುವುದಲ್ಲದೆ, ದೇಶದ ಬೆಳವಣಿಗೆಗೆ ಕೊಡುಗೆ ಲಭಿಸಲಿದೆ. ಈ ಉಪಕ್ರಮದ ಮೂಲಕ ನಮ್ಮ ದೇಶದ ಡಿಜಿಟಲೀಕರಣದ ಕಡೆಗೆ ಕೊಡುಗೆ ನೀಡಲು ನಾವು ಇಚ್ಛಿಸುತ್ತೇವೆ. ಕೆಡಿಇಎಂ -ಬಿಯಾಂಡ್ ಬೆಂಗಳೂರು ಚಾಪ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರ್ದಿಷ್ಟ ಹೂಡಿಕೆ ವರದಿಗಳಲ್ಲಿ ಕರ್ನಾಟಕ ಉತ್ತಮ ಸ್ಥಾನ ಹೊಂದಲು ನೆರವಾಗಲಿದೆ. ಈ ಆರಂಭದೊಂದಿಗೆ ಮೂಲ ಸಮಿತಿಯು ನೂತನ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಎರಡು ದಶಲಕ್ಷ ಜನರಿಗೆ ಕೌಶಲ್ಯ ನೀಡುವತ್ತ ಗಮನ ಕೇಂದ್ರೀಕರಿಸಲಿದೆ. ಇದರೊಂದಿಗೆ 2025ರ ಹೊತ್ತಿಗೆ 5 ಟ್ರಿಲಿಯನ್ ಅಮೇರಿಕನ್ ಡಾಲರ್ ಆರ್ಥಿಕ ಸ್ಥಿತಿಯನ್ನು ಸಾಧಿಸಲು ದೇಶಕ್ಕೆ ನೆರವಾಗಲಿದೆ’’ ಎಂದರು.
ಸಿಲಿಕಾನ್ ರೋಡ್ ಐಡಿಯೇಷನ್ ಲ್ಯಾಬ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ಸಂಜಯ್ ಶ್ರೀನಿವಾಸಮೂರ್ತಿ ಅವರು ಈ ಉಪಕ್ರಮ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕೆಡಿಇಎಂ ಮೈಸೂರು ಕ್ಲಸ್ಟರ್‍ನ ಆರಂಭ, ಜೊತೆಗೆ ಕರ್ನಾಟಕ ಸರ್ಕಾರದ ಸ್ನೇಹಪೂರ್ಣ ನೀತಿಗಳು ಹಾಗೂ ಕೆಡಿಇಎಂನ ಟ್ಯಾಲೆಂಟ್ ಆಕ್ಸಲರೇಟರ್ ಕಾರ್ಯಕ್ರಮಗಳು ಮೈಸೂರಿನಲ್ಲಿ ಐಟಿ/ಜಿಸಿಸಿ/ಇಎಸ್‍ಡಿಎಂನಿಂದ ಬೇಡಿಕೆ ಹೆಚ್ಚಲು ಕಾರಣವಾಗಲಿದೆ’’ ಎಂದರು.