ಅದೊಂದು ಮಹಾಸುದಿನ
ಸಿಂ.ಪು.ಮುತ್ತುರಾಜ
ಸಿಂಹನ ಕೈಚಳಕದಿಂದಾಗಿ
ಪುನರ್ ಹೆಸರಿಸಿದ
ರಾಜಕುಮಾರ
ಬೇಡರಕಣ್ಣಪ್ಪ ಚಿತ್ರಿಸಿ
ಭವಿತವ್ಯ ನಾಂದಿಹಾಡಿ
ಭವ್ಯಶಿಲೆಯನ್ನ ರೂಪುಗೊಳಿಸಿ
ಶಿಲ್ಪಕಲಾಮೂರ್ತಿಯನ್ನಾಗಿಸಿ
ಲೋಕಾರ್ಪಣೆಯಾದ
ವರನಟ
ಅಂದಿನಿಂದ ಹಿಂದಿರುಗಿನೋಡದೆ
ಋತುವಿಂದ ಋತುವಿಗೆ
ಯುಗಾದಿಯಿಂದುಗಾದಿಗೆ
ಮುನ್ನುಗ್ಗಿ ಮುನ್ನಡೆದು
ಮುಹಾಮುನ್ನುಡಿ ಬರೆದು
ಮೆರೆದಾಡಿದ
ನಟಸಾರ್ವಭೌಮ
ಅಪರಿಚಿತನಿಂದ ಆಳರಸನವರೆಗೆ
ಆಬಾಲವೃದ್ಧರಾದಿ ಅಸಂಖ್ಯಾತರಿಗೆ
ಅದೃಷ್ಟವಂತನಿಂದ ನತದೃಷ್ಟನವರೆಗೆ
ಆರಾಧಕನಿಂದ ಅಷ್ಟಕಷ್ಟಾನಿಷ್ಟನವರೆಗೆ
ವಿದ್ಯಾವಿದ್ಯಾವಂತ ಕೋಟಿವರೆಗೆ
ಉದ್ಯೋಗಿ ನಿರುದ್ಯೋಗಿಯಿಂದ
ತಿರುಕಧನಿಕ ಪಂಡಿತಪಾಮರವರೆಗೆ
ಧರ್ಮಾತೀತ ಪಕ್ಷಾತೀತ ಪ್ರಶ್ನಾತೀತ
ಸರಳಸಜ್ಜನಿಕೆ ಪುರುಷೋತ್ತಮನಾಗಿ
ಕನ್ನಡದಕಂದನಾಗಿ ವಿಜೃಂಭಿಸಿದ
ಡಾಕ್ಟರ್ ರಾಜ್‌ಕುಮಾರ್
ಅಚ್ಚುಕಟ್ಟು ಸರ್ವಪಾತ್ರಾಭಿನಯದಿಂದ
ಸಕಲಕಲಾ ವಲ್ಲಭನಾದ
ಅಚ್ಚುಮೆಚ್ಚು ಅಭಿಮಾನಿದೇವರುಗಳಿಂದ
ಚಂದನವನ ಸಾಮ್ರಾಟನಾದ
ರಾಷ್ಟ್ರಪತಿಗಳಿಂದ ಗೌರವಿಸಲ್ಪಟ್ಟು
ರಾಷ್ಟ್ರಾದ್ಯಂತ ರಾರಾಜಿಸಿದ
ಪದ್ಮಭೂಷಣ
ಜನ ಜೈಕಾರದ
ಸ್ವರ ಝೇಂಕಾರದ
ಸುರಾಸುರ ಲೋಕದ
ಗಾನಗಂಧರ್ವ
ಸರಿ ಸೈ ಎನಿಸಿಕೊಂಡ
ಸ್ವಚ್ಚಕನ್ನಡದ ಅಚ್ಚಕನ್ನಡಿಗ
ಕನ್ನಡಕಂಠೀರವ
ಕೆಂಚುಕಿಕರ್ನಲ್
ದಾದಾಸಾಹೇಬಫಾಲ್ಕೆ
ಪ್ರಶಸ್ತಿ ಪುರಸ್ಕೃತ
ಕುಟುಂಬ ಬಂಧುಮಿತ್ರ
ಶತ್ರುಹಿತಶತ್ರು
ಸಹೋದ್ಯೋಗಿ ಎಲ್ಲರ
ಅಜಾತಶತ್ರು
ಖಳನಟ ನಾಸ್ತಿಕಾಸಿಕರೊಡನೆ
ಹೊಡೆದಾಡಿ
ನಲ್ವತ್ತೆಂಟು ನಾಯಕಿಯರೊಡನೆ
ನಲಿದಾಡಿದ
ರಸಿಕರರಾಜ
ಗೃಹಲಕ್ಷ್ಮಿ ಅಷ್ಟಲಕ್ಷ್ಮಿ
ಅವರೊಡಗೂಡಿ
ಯೋಗಾಯೋಗ ಸಂಯೋಗದಿಂದ
ಬಡಿದಾಡಿದ
ಬಂಗಾರದಮನುಷ್ಯ
ಪಂಚಸಂತಾನ ಪಿತನಾಗಿ
ಸಪ್ತಕೋಟಿ ಭಕ್ತರ
ಕನ್ನಡಾಂಭೆಗುಡಿ
ಅಂಗಳದಲ್ಲಿ
ಅಭಿಮಾನಿದೇವರುಗಳಿಂದ
ದೇವಾಲಯ ಕಟ್ಟಿಸಿಕೊಂಡ
ದೇವನಾಡಿ
ದೇವತಾಮನುಷ್ಯ
ಬಹು ಬಿರುದುಬಾವಲಿಗಳ ಬಿರಾದಾರ
೨೧೪ಸಿನಿಮಾಗಳ ಸರಮಾಲೆ ಸರ್ದಾರ
ಪುತ್ರರತ್ನ ತ್ರಯರನ್ನು ತನ್ನ ಬೆಳ್ಳಿತೆರೆ
ಉತ್ತರಾಧಿಕಾರಿಯಾಗಿಸಿ ಸ್ವರ್ಗಸ್ತರಾದರೂ
ಇಹ-ಪರ ಲೋಕದ ಅಭಿನಯಚಕ್ರವರ್ತಿ
ಸರ್ವಮಂಗಳ ರಾಜಕುಮಾರ
ನೀ..ಆಚಂದ್ರಾರ್ಕ ಅಜರಾಮರ

ಕುಮಾರಕವಿ ಬಿ.ಎನ್.ನಟರಾಜ
೯೦೩೬೯೭೬೪೭೧
ಬೆಂಗಳೂರು ೫೬೦೦೭೨