೧೯೩೧ರಲ್ಲಿ ಹಾಲಿವುಡ್‌ನ ರಫ಼ೆಲ್‌ಅಲ್ಗೋಯೆಟ್ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಪ್ರಪಂಚದ/ಭಾರತದ ಪ್ರಪ್ರಥಮ ಸೈಲೆಂಟ್ ಮೂವೀ ?ಹಿಸ್‌ಲವ್‌ಅಫ಼ೇರ್? ಚಿತ್ರದ ನಿರ್ಮಾಪಕ ಹಾಗೂ ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಭಾರತದ/ಕನ್ನಡದ ಮೊಟ್ಟಮೊದಲ ಫ಼ಿಲಂ ?ಸತಿಸುಲೋಚನ? ಚಿತ್ರದ ನಿರ್ಮಾಪಕ! ಇಂಡಿಯ ದೇಶದ ನಾಟಕ-ಸಿನಿಮಾ ಪಿತಾಮಹ ವಿಖ್ಯಾತ ಗುಬ್ಬಿವೀರಣ್ಣನವರು ಕನ್ನಡಿಗ ಎಂಬುದು ಅತ್ಯಂತ ಹೆಮ್ಮೆಯ ಸಂಗತಿ!

೧೯೧೦ರಲ್ಲಿ ?ಗುಬ್ಬಿ ಶ್ರೀಚನ್ನಬಸವೇಶ್ವರ ನಾಟಕ ಕಂಪನಿ? ಸ್ಥಾಪಿಸಿ ಹತ್ತಾರು ನಾಟಕಗಳ ಸಾವಿರಾರು ಪ್ರದರ್ಶನ ನೀಡಿದರು. ತಾವು ಬೆಳೆಯುವುದರ ಜತೆಗೆ ಅನ್ಯರನ್ನೂ ಬೆಳೆಸುವಂಥ ಅಪರೂಪ ಗುಣವುಳ್ಳವರು. ದೇಶದಲ್ಲೆ ಮೊಟ್ಟಮೊದಲ ?ಚಿತ್ರ ನಿರ್ಮಾಣದ ಸಿಂಡಿಕೇಟ್ ಸಂಸ್ಥೆ? ಕರ್ನಾಟಕ ಫ಼ಿಲಂಸ್ ರೂವಾರಿ. ಪ್ರಪಂಚದಾದ್ಯಂತ ಕನ್ನಡ ನಾಡು, ನುಡಿ, ಕಲೆ, ಜನರನ್ನು ಪರಿಚಯಿಸಿದ ಪ್ರಥಮ ಕನ್ನಡಿಗ! ಇವತ್ತಿಗೂ ಸಹ ?ನಾಟಕ? ಇರುವೆಡೆಯಲ್ಲೆಲ್ಲ ಈ ?ರತ್ನ?ಂದೇ ಹೊಳಪು, ಅನವರತ ಜೀವಂತವಾಗಿರುವ ಕಲಾಧಾತು, ಕರ್ನಾಟಕದ ಮನೆಮಾತು. ಮೂಕಿಟಾಕಿ ಯುಗದಿಂದ ಮಾಡ್ರನ್ ಕಾಲದವರೆಗೆ ವಿಜೃಂಭಿಸಿದ ಈ ಕಲಾಜೀವಿಯ ಬದುಕು ಚಂದನವನ ಚರಿತ್ರೆಯ ಸುವರ್ಣ ಪುಟಗಳಲ್ಲಿ ಈಗಲೂ ಅಮರ! ಇವರ ಆಶ್ರಯದಲ್ಲಿ ಬೆಳೆದು ಹಣ-ಕೀರ್ತಿ ಸಂಪಾದಿಸಿದ ನೂರಾರು ಅತಿರಥ-ಮಹಾರಥ ಕಲಾವಿದರಲ್ಲಿ ಉದಾ: ಆರ್.ನಾಗೇಂದ್ರರಾವ್, ಸಿಂಗಾನಲ್ಲೂರುಪುಟ್ಟಸ್ವಾಮಯ್ಯ, ಢಿಕ್ಕಿಮಾಧವರಾವ್, ಕರಿಬಸಯ್ಯ, ರಾಜಯ್ಯಂಗಾರ್, ಕೆಂಪರಾಜಅರಸ್, ಹೊನ್ನಪ್ಪಭಾಗವತರ್, ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ಬಾಲಕೃಷ್ಣ, ನರಸಿಂಹರಾಜು, ಬಿವಿ.ಕಾರಂತ್, ಗಿರೀಶ್‌ಕಾರ್ನಾಡ್; ಕಮಲಬಾಯಿ, ಲಕ್ಷ್ಮಿಬಾಯಿ, ಅಶ್ವಥಮ್ಮ, ಬಿ.ಜಯಮ್ಮ, ಸಿಐಡಿ ಶಕುಂತಲ, ಮಳವಳ್ಳಿಸುಂದ್ರಮ್ಮ, ಪಾರ್ವತಿದೇವಿ, ಎಸ್‌ಕೆ.ಪದ್ಮಾದೇವಿ, ಸಂಧ್ಯಾ, ಮುಂತಾದವರು. ೨ನೇ ಮಹಾಯುದ್ಧ ಕಾಲದಲ್ಲಿ ಗುಬ್ಬಿಕಂಪನಿಯು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಧೃತಿಗೆಡದೆ ತಮ್ಮ ಒಡವೆ-ವಸ್ತ್ರ-ಆಸ್ತಿ ಗಿರವಿ ಇಟ್ಟು ಪ್ರತಿಯೊಬ್ಬರಿಗೂ ಸಂಬಳ ನೀಡಿದ ತ್ಯಾಗಿ, ನೂರಾರು ಕುಟುಂಬಗಳ ಮನೆದೇವರಾದರು! ದುರ್ಭಿಕ್ಷ ಕಾಲದಲ್ಲು ಯಾರೊಡನೆಯೂ ದುಃಖವನ್ನು ಹಂಚಿಕೊಳ್ಳದ ಸ್ವಾಭಿಮಾನಿ ವೀರಣ್ಣ; ಕಲೆಗಾಗಿಯೇ ಹುಟ್ಟಿ ಬೆಳೆದು ಬದುಕಿ ಗತಿಸಿದ ನಿಸ್ವಾರ್ಥ ವ್ಯಕ್ತಿ ಮಹಾನ್ ಶಕ್ತಿ!

೧೮೯೧ರಲ್ಲಿ ಗುಬ್ಬಿಯ ಗುಲಗಂಜಿಹಳ್ಳಿಯಲ್ಲಿ ಜನಿಸಿ, ೧೯೭೨ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು! ೧೯೭೬ರಿಂದ ಕರ್ನಾಟಕ ಸರ್ಕಾರ ಪ್ರತಿವರ್ಷವು ಗುಬ್ಬಿವೀರಣ್ಣ ಪ್ರಶಸ್ತಿ ಕೊಡಮಾಡುತ್ತಿದೆ. ಗುಬ್ಬಿವೀರಣ್ಣ ರಂಗಮಂದಿರ ಸ್ಮಾರಕ ಜ್ವಲಂತ ಸಾಕ್ಷಿಯಾಗಿದೆ. ಇವರ ಇಡೀ ಕುಟುಂಬವೆ ನಾಟಕ-ಸಿನಿಮಾ ಕಲಾವಿದರಿಂದ ತುಂಬಿ ತುಳುಕಿದೆ, ಗುಬ್ಬಿವೀರಣ್ಣ ಅಂಡ್ ಫ಼್ಯಾಮಿಲಿಯ ೪೮ಸದಸ್ಯರೆಂದರೆ ಗುಬ್ಬಿವೀರಣ್ಣ, ಪತ್ನಿಯರು ಸುಂದ್ರಮ್ಮ, ಭದ್ರಮ್ಮ ಹಾಗೂ ಬಿ.ಜಯಮ್ಮ, ೧೨ಮಕ್ಕಳಲ್ಲಿ ಪ್ರಮುಖರು ಜಿ.ವಿ.ಸ್ವರ್ಣಮ್ಮ, ಜಿ.ವಿ.ಮಾಲತಿ, ಜಿ.ವಿ.ಲತಾ ಮತ್ತು ಜಿ.ವಿ.ಶಿವರಾಜ್, ಜಿ.ವಿ.ಶಿವಾನಂದ್, ಜಿ.ವಿ. ಶಿವಕುಮಾರ್. ಒಟ್ಟು ೩೭ಮೊಮ್ಮಕ್ಕಳಲ್ಲಿ ಪ್ರಮುಖರು; ವೈಜಯಂತಿ, ಸುಂದರಶ್ರೀ ಹಾಗೂ ಬಿ.ಜಯಶ್ರೀ [ರಂಭೆ ನಾ ವಯ್ಯಾರದ..] ಚಿತ್ರಗೀತೆ ಮೂಲಕ ಫ಼ೇಮಸ್ ಆಗಿ ನಾಡಿನಾದ್ಯಂತ ಫ಼್ಯಾನ್ಸ್ ಹೊಂದಿದ ?ನಾಗಮಂಡಲ? ಚಿತ್ರದ ಜನಪ್ರಿಯ ನಟಿ-ಹಿನ್ನೆಲೆಗಾಯಕಿ. ಜಾನಪದ ಕ್ಷೇತ್ರದಲ್ಲಿ ಸಾಧನೆಗೈದು ದೇಶದಾದ್ಯಂತ ಕನ್ನಡದ ಕೀರ್ತಿಪತಾಕೆ ಹಾರಿಸಿದ ರಂಗಕರ್ಮಿಗಳು! ರವೀಂದ್ರ ಕಲಾಕ್ಷೇತ್ರ, ಮೈಸೂರು ರಂಗಾಯಣ, ಮುಂತಾದೆಡೆ ಉನ್ನತ ಹುದ್ದೆಗಳಲ್ಲಿ ಸೇವೆಗೈದು ತಾತನ ಹೆಸರುಳಿಸುವಂಥ ಎತ್ತರಕ್ಕೆ ಬೆಳೆದರು!
೧೯೨೫ರಿಂದ ೧೯೫೫ರವರೆಗೆ ?ಸದಾರಮೆ? ನಾಟಕ ಒಟ್ಟು ೮೭೮ ಪ್ರದರ್ಶನ ಕಂಡು ನೂತನ ದಾಖಲೆ ನಿರ್ಮಿಸಿತು. ಬ್ರಿಟಿಷ್ದೊರೆ, ಇಂಗ್ಲಿಷ್ಅಧಿಕಾರಿ, ರಾಜಮಹಾರಾಜ, ದಿವಾನ್, ಸಾಹುಕಾರ್, ಕುಟುಂಬ ಮೊದಲ್ಗೊಂಡು ನಾಟಕ ವೀಕ್ಷಿಸಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು! ಸಂಗೀತ–ನಾಟಕ ಅಕ್ಯಾಡೆಮಿ, ನಾಟಕರತ್ನ, ವಿನೋದರತ್ನಾಕರ, ಪದ್ಮಶ್ರೀ, ಮುಂತಾದ ಅನೇಕ ರಾಷ್ಟ್ರ–ರಾಜ್ಯ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದವು. ಹಲವು ಸರ್ಕಾರದಿಂದ ಸಂಘ ಸಂಸ್ಥೆಗಳಿಂದ ನೂರಾರು ಸನ್ಮಾನ ಬಹುಮಾನ ಬಿರುದು ಪಡೆದ ಮಾಣಿಕ್ಯದಂಥ ನಟ–ನಿರ್ಮಾಪಕ–ನಿರ್ದೇಶಕ ಗುಬ್ಬಿವೀರಣ್ಣ, ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಇತರೆ ಭಾಷೆಯಲ್ಲು ಸಿನಿಮಾ ತಯಾರಿಸಿದ್ದು ಅವರ ಘನತೆ ಗೌರವ ಇಮ್ಮಡಿಗೊಳಿಸಿತ್ತು! ?ಗುಬ್ಬಿಫ಼ಿಲಂಸ್? ಬ್ಯಾನರ್ ಅಡಿಯಲ್ಲಿ ಇವರು ನಿರ್ಮಿಸಿ, ನಟಿಸಿದ್ದ ಚಿತ್ರಗಳು:- ಹರಿಮಾಯ[ಮೂಕಿಚಿತ್ರ–೧೯೩೨], ಸದಾರಮೆ[೧೯೩೫], ಸುಭದ್ರಾ[೧೯೪೧], ಜೀವನನಾಟಕ[೧೯೪೨], ಹೇಮರೆಡ್ಡಿಮಲ್ಲಮ್ಮ[೧೯೪೪], ಗುಣಸಾಗರಿ[೧೯೫೩], ಬೇಡರಕಣ್ಣಪ್ಪ [ತೆಲುಗಿನಲ್ಲಿ ಕಾಳಹಸ್ತಿ ಮಹಾತ್ಯಂ–೧೯೫೪] ಹಾಗೂ ತಮಿಳ್ ಚಿತ್ರಗಳಾದ ಸತ್ಯಶೋಧನೈ[೧೯೫೩], ಸಗೋದರಿ[೧೯೫೯]. ಗುಬ್ಬಿವೀರಣ್ಣನವರು ಜೀವನಪರ್ಯಂತ ಯಾರನ್ನೂ ನೋಯಿಸದೆ ೮೧ ವರ್ಷದ ಸಾರ್ಥಕ ಜೀವನ ನಡೆಸಿ, ಅಮರರಾದರು!

ಕುಮಾರಕವಿ ನಟರಾಜ್ [೯೦೩೬೯೭೬೪೭೧]
ಬೆಂಗಳೂರು-೫೬೦೦೭೨