ಬೂದಗೂರು ರಾಮಕೃಷ್ಣಯ್ಯ ಪಂತುಲು ಮೂಲತಃ ತ.ನಾಡು-ಕರ್ನಾಟಕ ಗಡಿನಾಡಿನ ಕನ್ನಡಾಭಿಮಾನಿ! ತೆಲುಗು ಮಾತೃ ಭಾಷೆಯಾದರೂ ಕನ್ನಡ ಸಂಭಾಷಣೆಯನ್ನು ಸ್ಫಷ್ಟವಾಗಿ ಸ್ವಚ್ಚವಾಗಿ ಸುಲಲಿತವಾಗಿ ಭಾವನಾತ್ಮಕವಾಗಿ ಅನುಭವಿಸಿ ಹೇಳುತ್ತಿದ್ದ ಏಕೈಕ ಅನ್ಯಭಾಷೆ ಚಿತ್ರೋದ್ಯಮಿ! ಕನ್ನಡನಾಡು,ನುಡಿ,ಜನತೆಯನ್ನು ಹೃದಯಪೂರ್ವಕವಾಗಿ ಪ್ರೀತಿಸಿ ಗೌರವಿಸುತ್ತಿದ್ದ ಉಚ್ಛಗುಣದ ಮಾನವ.ವಿ.ಶಾಂತರಾಂ,ಗುರುದತ್,ಬಿಆರ್‌ಛೋಪ್ರ,ಎನ್ಸಿ .ಸಿಪ್ಪಿ,ರಮಾನಂದಸಾಗರ್,

ಸ್ಯಾಂಡೊಚಿನ್ನಪ್ಪದೇವರ್,ಬಿ.ಎಸ್‌ರಂಗ,ನಾಗಿರೆಡ್ಡಿಚಕ್ರಪಾಣಿ,ಮುಂತಾದ ದಿಗ್ಗಜರಿಂದ ಹೊಗಳಿಸಿಕೊಂಡಿದ್ದರು. ಸ್ವಂತ ಸಂಸ್ಥೆ ಪದ್ಮಿನಿಪಿಕ್ಚರ್ಸ್ ಮೂಲಕ ಕನ್ನಡ,ಹಿಂದಿ,ತಮಿಳು,ತೆಲುಗು,ಮಲಯಾಳಂ ೪ಭಾಷೆಗಳಲ್ಲಿ ಸಿನಿಮಾ ತಯಾರಿಸುತ್ತಿದ್ದ ದೇಶದ ಏಕೈಕ ಬಹುಭಾಷಾ ನಟ-ನಿರ್ಮಾಪಕ-ನಿರ್ದೇಶಕ! ಇವತ್ತಿನವರೆಗೂ ಈ ದಾಖಲೆ ಮುರಿಯಲು ಸಾಧ್ಯವಾಗಿಲ್ಲ! ಭಾರತೀಯ ಚಿತ್ರರಂಗದಲ್ಲಿ ಬಿ.ಆರ್.ಪಂತುಲು ಹೆಸರು ಕೇಳಿರದವರಿಲ್ಲ! ದಿ.೨೬.೭.೧೯೧೦ರಂದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕ್ ಬುದ್ಗೂರಲ್ಲಿ ಜನಿಸಿ ಇಂಟರ್‌ಮಿಡಿಯೆಟ್ ನಂತರ ಶಿಕ್ಷಕ ವೃತ್ತಿಗೆ ಸೇರಿದರು. ಉಪಾಧ್ಯಾಯ ಸೇವೆ ಯಲ್ಲಿದ್ದಾಗ ಚಂದ್ರಕಲಾ ನಾಟಕ ಮಂಡಲಿ, ಗುಬ್ಬಿವೀರಣ್ಣ ಕಂಪನಿ ಹಾಗೂ ತಮ್ಮದೆ ಆದ ಕಲಾಸೇವಾ ನಾಟಕ ಮಂಡಲಿ ಮುಖೇನ ಸಂಸಾರನೌಕ ಸದಾರಮೆ ಶ್ರೀಕೃಷ್ಣಗಾರುಡಿ ಮುಂತಾದ ನಾಟಕಗಳಲ್ಲಿ ನಟಿಸಿ ಜನಪ್ರಿಯರಾದರು.  ಕಾಲಕ್ರಮೇಣ ನೌಕರಿಗೆ ರಾಜೀನಾಮೆ ನೀಡಿ ಸಿನಿಮಾಲೋಕದಲ್ಲಿ ಶಾಶ್ವತವಾಗಿ ತೊಡಗಿಸಿಕೊಂಡರು.

 ಮೈಸೂರಿನ ಮಗಳಾದ, ಭಾರತದ ಪ್ರಪ್ರಥಮ ಚಿತ್ರ ನಿರ್ಮಾಪಕಿ ಎಂಬ ಕೀರ್ತಿ-ದಾಖಲೆ ಪಡೆದ, ದ.ಭಾರತದ ನೂರಾರು ಚಿತ್ರಗಳಲ್ಲಿ ‘ನಾಯಕಿ’ ಹಾಗೂ ‘ತಾಯಿ’ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿದ್ದ ಖ್ಯಾತನಟಿ ಎಂ.ವಿ.ರಾಜಮ್ಮ ಇವರ[ತಾರಾ]ಪತ್ನಿ! ಈ ದಂಪತಿಗೆ ೨ಮಕ್ಕಳು ಬಿ.ಆರ್.ರವಿಶಂಕರ್ ಮತ್ತು ಬಿ.ಆರ್.ವಿಜಯಲಕ್ಷ್ಮಿ. ಸದೃಢರಾಗಿದ್ದ ಪಂತುಲು ದಿ.೮.೧೦.೧೯೭೪ರಂದು ಮದ್ರಾಸ್‌ನಲ್ಲಿ ಸ್ವರ್ಗಸ್ಥರಾದುದು ಚಂದನವನಕ್ಕೆ ಭರಿಸಲಾರದ ನ[ಕ]ಷ್ಟ ಉಂಟಾಯಿತು!

 ಅಖಿಲ ಭಾರತ ದಾಖಲೆ ನಿರ್ಮಿಸಿದ ರಾಷ್ಟ್ರಪ್ರಶಸ್ತಿ ವಿಜೇತ ಸ್ಕೂಲ್‌ಮಾಸ್ಟರ್ ಕನ್ನಡ ಚಿತ್ರವು ಹಿಂದಿ,ತಮಿಳ್,ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್/ರಿಮೇಕ್‌ಆಗಿ ಧೂಳೆಬ್ಬಿಸಿತು!  ಸ್ವಾತಂತ್ರ್ಯಸೇನಾನಿ ಕಿತ್ತೂರುಚೆನ್ನಮ್ಮ ಮತ್ತು ಕನ್ನಡದ/ಡಾ||ರಾಜ್‌ರ ಪ್ರಪ್ರಥಮ ಐತಿಹಾಸಿಕ ಕಲರ್‌ಚಿತ್ರ ‘ಶ್ರೀಕೃಷ್ಣದೇವರಾಯ’ ತೆರೆಗಿತ್ತ ಅಪ್ರತಿಮ ಸಾಧಕ! ಈ ಚಿತ್ರದ ಮಹಾಮಂತ್ರಿ ತಿಮ್ಮರಸು ಪಾತ್ರಕ್ಕೆ ಅತ್ಯುತ್ತಮನಟ ರಾಜ್ಯಪ್ರಶಸ್ತಿ ದೊರೆತಾಗ ಅದನ್ನು ವಿನಮ್ರವಾಗಿ ತಿರಸ್ಕರಿಸಿ ಸರ್ಕಾರಕ್ಕೆ ವಿನಂತಿಸಿಕೊಂಡು ರಾಜ್‌ಕುಮಾರ್‌ಗೆ ಸದರಿ ಪ್ರಶಸ್ತಿ ದೊರಕಿಸಿಕೊಟ್ಟ ಮಹಾತ್ಯಾಗಿ. ಇದೂ ವಿಶ್ವದಾಖಲೆ! ರಾಜ್,ಕಲ್ಯಾಣ್,ಉದಯ್ ಕುಮಾರತ್ರಯರು; ಕಲ್ಪನ,ಭಾರತಿ,ಜಯಲಲಿತ ಜಯಂತಿ ಮುಂತಾದ ಅನೇಕ ನಟನಟಿಯರನ್ನು ಪರಿಚಯಿಸಿದ/ಪುನರ್ಜೀವ[ನ]ನೀಡಿದ ಗ್ರೇಟ್‌ಲೆಜೆಂಡ್! ಪದ್ಮಿನಿಪಿಕ್ಚರ್ಸ್ ಸಂಸ್ಥೆಯಲ್ಲಿ ಶಾಶ್ವತ ಕಥಾವಿಭಾಗ ಸಾಹಿತ್ಯವಿಭಾಗ ತಾಂತ್ರಿಕವಿಭಾಗ ಸಿಬ್ಬಂದಿವರ್ಗವಿತ್ತು.

ಉದಾ:-ಸಂಗೀತಕ್ಕೆ ಟಿ.ಜಿ.ಲಿಂಗಪ್ಪ, ಕ್ಯಾಮರಾಗೆ ಬಿ.ಎನ್. ಹರಿದಾಸ್! ಅರ್ಧಕ್ಕೆ ಸ್ಥಗಿತಗೊಂಡಿದ್ದ ಕಾಲೇಜುರಂಗ ಚಿತ್ರವನ್ನು ೧೯೭೬ರಲ್ಲಿ ಪೂರ್ಣಗೊಳಿಸಿದ್ದು ಪಂತುಲು ಶಿಷ್ಯ ಪುಟ್ಟಣ್ಣಕಣಗಾಲ್! ಒಟ್ಟು ೫ಭಾಷೆಗಳ ೫೨[೨೫ ಕನ್ನಡ] ಚಿತ್ರ ತಯಾರಿಸಿ ಪ್ರಧಾನಿ ನೆಹರು ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಮುಂತಾದ ಗಣ್ಯಾತಿಗಣ್ಯರಿಂದ ತಾಮ್ರಪತ್ರ, ರಾಷ್ಟ್ರ ಪ್ರಶಸ್ತಿ, ಅನೇಕ ರಾಜ್ಯ[ಗಳ] ಪ್ರಶಸ್ತಿ ಹಾಗೂ ಅಂತಾರಾಷ್ಟ್ರ ಪ್ರಶಸ್ತಿ ಪಡೆದಿದ್ದ ಪಂತುಲುರವರ ಕನ್ನಡ ಚಿತ್ರಗಳು:-      

ಬಿ.ಆರ್.ಪಂತುಲು ನಟಿಸಿದ/ನಿರ್ಮಿಸಿದ ಚಿತ್ರಗಳು

ಕ್ರ.ಸಂ. ಫ಼ಿಲಂ/ಇಸವಿ    ಕ್ರ.ಸಂ. ಫ಼ಿಲಂ/ಇಸವಿ   

ಸಂಸಾರನೌಕಾ/೧೯೩೬೧೪ದುಡ್ಡೇದೊಡ್ಡಪ್ಪ/೧೯೬೫ 
ರಾಧಾರಮಣ/೧೯೪೪೧೫ಎಮ್ಮೆತಮ್ಮಣ್ಣ/೧೯೬೬ 
ಜಲದುರ್ಗಾ/೧೯೫೪೧೬ಗಂಗೆಗೌರಿ/೧೯೬೭ 
ಮೊದಲತೇದಿ/೧೯೫೫೧೭ಬೀದಿಬಸವಣ್ಣ/೧೯೬೭ 
ಶಿವಶರಣೆನಂಬೆಕ್ಕ/೧೯೫೫೧೮ಚಿನ್ನಾರಿಪುಟ್ಟಣ್ಣ/೧೯೬೮ 
ರತ್ನಗಿರಿರಹಸ್ಯ/೧೯೫೭೧೯ಅಮ್ಮ/೧೯೬೮ 
ಸ್ಕೂಲ್‌ಮಾಸ್ಟರ್/೧೯೫೮೨೦ಗಂಡೊಂದುಹೆಣ್ಣಾರು/೧೯೬೯ 
ಅಬ್ಬಾ ಆ ಹುಡುಗಿ/೧೯೫೯೨೧ಶ್ರೀಕೃಷ್ಣದೇವರಾಯ/೧೯೭೦ 
ಮಕ್ಕಳರಾಜ್ಯ/೧೯೬೦೨೨ಅಳಿಯಗೆಳೆಯ/೧೯೭೧ 
೧೦ಕಿತ್ತೂರುಚೆನ್ನಮ್ಮ/೧೯೬೧೨೩ಮಾಲತಿಮಾಧವ/೧೯೭೧ 
೧೧ಗಾಳಿಗೋಪುರ/೧೯೬೨೨೪ಒಂದುಹೆಣ್ಣಿನಕಥೆ/೧೯೭೨ 
೧೨ಸಾಕುಮಗಳು/೧೯೬೩೨೫ಕಾಲೇಜುರಂಗ/೧೯೭೬ 
೧೩ಚಿನ್ನದಗೊಂಬೆ/೧೯೬೪೧೯೬೦ರಲ್ಲಿ ಆಫ಼್ರೋ-ಏಷಿಯನ್ ಫ಼ಿಲಂ ಫ಼ೆಸ್ಟಿವಲ್ ಪ್ರಶಸ್ತಿ ವಿಜೇತ  

ನಡಿಗರ್‌ತಿಲಗಂ ಶಿವಾಜಿಗಣೇಶನ್ ನಟಿಸಿದ್ದ ‘ವೀರಪಾಂಡ್ಯಕಟ್ಟಬೊಮ್ಮನ್’ ಮತ್ತು ‘ಕಪ್ಪಲೋಟ್ಟಿಯತಮಿಳನ್’ ಅಜರಾಮರ ಮಕ್ಕಳ್‌ತಿಲಗಂ ಎಂ.ಜಿ.ಆರ್. ನಟಿಸಿದ್ದ ‘ನಾಡೋಡಿ’ ಮತ್ತು ‘ಆಯಿರತ್ತಿಲ್‌ಒರುವನ್’ ತಮಿಳು ಚಿತ್ರಗಳು ಚಿರಸ್ಮರಣೀಯ!  

           

ಕುಮಾರಕವಿ ನಟರಾಜ್ [೯೦೩೬೯೭೬೪೭೧]

   ಬೆಂಗಳೂರು-೫೬೦೦೭೨