ರಾಜ್ ಪ್ರಾರಂಭದ ದಿನಗಳಲ್ಲಿ ಅವರ ಕಾಲ್‌ಶೀಟ್ ಸುಲಭವಾಗಿ ಸಿಗುತ್ತಿತ್ತು. ಕಾಲಕ್ರಮೇಣ ಕ್ಯುನಲ್ಲಿ ವರ್ಷಗಟ್ಟಲೆ ಕಾಯುವ ಸ್ಥಿತಿ ತಲುಪಿತು! ಹಾಗಿದ್ದರೂ ತಮ್ಮ ಹಿಂದಿನ ನೊಂದ ದಿನಗಳನ್ನು ಮರೆಯದೆ ತಮಗೆ ಸಿನಿ ಜೀವ[ನ]ನೀಡಿದ, ತಾವು ಕಷ್ಟದಲ್ಲಿದ್ದಾಗ ಕಾಪಾಡಿದ, ಹಿರಿಯನಿರ್ಮಾಪಕ-ನಿರ್ದೇಶಕರಿಗೆ ಸಹಾಯಮಾಡುವ ಸಹಕಾರನೀಡುವ ಕೃತಜ್ಞತಾಗುಣವನ್ನು ರಕ್ತಗತವಾಗಿಸಿಕೊಂಡರು. ಕೆಲವು ಹಂಚಿಕೆದಾರರು ಇವರ ಫ಼ಿಲಂನಿಂದ ನಷ್ಟವಾಯಿತೆಂದು ನಿರ್ಮಾಪಕರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದರಲ್ಲದೆ ಬಾಕ್ಸಾಫ಼ೀಸ್ ರೆಕಾರ್ಡ್ ಮಾಡಿದಾಗಲು ಸಹ ಗಲ್ಲಾಪೆಟ್ಟಿಗೆ ಲಾಭಾಂಶದಲ್ಲಿ ಕೃಷ್ಣನ್‌ಲೆಕ್ಕ ತೋರಿಸಿ ನಾಯಕನಟ-ನಿರ್ಮಾಪಕ-ನಿರ್ದೇಶಕ ಎಲ್ಲರಿಗೂ ವಂಚಿಸಿ ಸಿಂಹಪಾಲು ತಿಂದು ತೇಗುತ್ತಿದ್ದರು? ಇದು ಎಷ್ಟರ ಮಟ್ಟಿಗಿತ್ತು ಎಂದರೆ, ೧೯೫೦ರ ದಶಕದಲ್ಲಿ ೨೨ ವಯಸ್ಸಿನ ಕರಪ್ಪುಅಣ್ಣಾತೆ ಬಿಳಿ [ಕೊಳೆ]ಪಂಚೆ [ಹರಿದ]ಶರ್ಟ್ ಧರಿಸಿ ಮದ್ರಾಸಿಂದ ಬಂದು ಗಾಂಧಿನಗರದಲ್ಲಿ ಚಪ್ರಾಸಿಯಾಗಿ ಸೇರಿ ಗಂಗಪ್ಪನ ಕೃಪಾಕಟಾಕ್ಷದಿಂದ ಕೇವಲ ೧೦ವರ್ಷದಲ್ಲಿ[೧೯೬೦ರದಶಕ] ಅಣ್ಣಾವ್ರ ಚಿತ್ರಗಳ ಉಪಹಂಚಿಕೆದಾರನಾಗಿ (ಅ)ನ್ಯಾಯವಾಗಿ ಸಂಪಾದಿಸಿ ಅದೇ ಗಾಂಧಿನಗರದಲ್ಲಿ ಸ್ವಂತ ಸಂಸ್ಥೆಯನ್ನೂ ರಾಜಾಜಿನಗರದಲ್ಲಿ ಸ್ವಂತ ಮನೆಯನ್ನೂ ಮಾಡಿಕೊಂಡು ೧೯೭೦ರ ದಶಕದಲ್ಲಿ ಅಣ್ಣಾವ್ರ ಚಿತ್ರಕ್ಕೇ ನಿರ್ಮಾಪಕನಾದ [ಅ]ಕ್ರಮ ಚರಿತ್ರೆ?

ಅಮಾಯಕರಾಗಿದ್ದ ರಾಜ್[ಅಣ್ಣ], ಎಲ್ಲರ[ಕಪಟಿಯ]ನ್ನೂ ನಂಬುತ್ತಿದ್ದ ವರದರಾಜ್[ತಮ್ಮ]! ನಿಜವಾದ ನಷ್ಟಕ್ಕೆ ಒಳಗಾದ ನಿರ್ಮಾಪಕರ ಮುಂದಿನಚಿತ್ರಕ್ಕೆ ಮುಂಗಡಹಣ ಪಡೆಯದೆ ಕಾಲ್‌ಶೀಟ್‌ನೀಡಿ ಫ಼ಿಲಂ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆ ಗಳಿಸಿದ ನಂತರವೆ ಸಂಭಾವನೆ ಪಡೆಯುತ್ತಿದ್ದ ಪರೋಪಕಾರಿ! ಹೀಗೇ ೩೦ ವರ್ಷಕಾಲ ‘ಎನ್ನಡ’ ಮತ್ತು ‘ಎಕ್ಕಡ’ ಡಿಸ್ಟ್ರಿಬ್ಯೂಟರ್‌ಗಳಿಂದ ಆಗುತ್ತಿದ್ದ ಶೋಷಣೆ ದ್ರೋಹ ಅಂತ್ಯಗೊಳಿಸಲೆಂದು ಹಿರಿಯರ ಆಶೀರ್ವಾದದಿಂದಲೊ ದೇವರ ಕೃಪೆಯಿಂದಲೊ ಪಾರ್ವತಮ್ಮ-ರಾಘಣ್ಣ ತಮ್ಮದೇ ವಜ್ರೇಶ್ವರಿ, ಮುಂತಾದ ಸಂಸ್ಥೆಗಳ ಮೂಲಕ ನಿರ್ಮಾಪಕ-ವಿತರಕರಾದರು. ರಾಜ್ ಕುಟುಂಬ ಮದ್ರಾಸ್ ತೊರೆದು ಬೆಂಗಳೂರಲ್ಲಿ ನೆಲೆ ಸುವಂತಾಯ್ತು! ರಾಜ್ ಬೆವರಿನ ದುಡಿಮೆ ಹಣದಿಂದ ಗಳಿಸಿದ ಸ್ವಂತ ಮನೆ-ಆಸ್ತಿ ವ್ಯರ್ಥವಾಗದೆ ಅವರ ಕುಟುಂಬಕ್ಕೇ ಸಂದಾಯವಾಗಿ ಸತ್ಯ ಧರ್ಮ ನ್ಯಾಯಕ್ಕೆ ಜಯ ದೊರಕಿತು! ಇದೆಲ್ಲಕ್ಕು ಮೂಲಕಾರಣ; ಪತಿಗೆ ಬೆಂಬಲವಾಗಿದ್ದ ಧೈರ್ಯ[ಗೃಹ]ಲಕ್ಷ್ಮಿ ಪಾರ್ವತಮ್ಮನವರು ಒಂದುವೇಳೆ ಬುದ್ಧಿವಂತ ಚಿತ್ರೋದ್ಯಮಿಯಾಗದೆ ಇದ್ದಿದ್ದರೆ ಇಡೀ ಕುಟುಂಬವೆ ನಯವಂಚಕರ ಜಾಲಕ್ಕೆ ಸಿಲುಕಿ ಆರ್ಥಿಕ ಹೀನಾಯ ಸ್ಥಿತಿ ತಲುಪುತ್ತಿತ್ತೇನೊ? ಅಣ್ಣಾವ್ರ ಮನೆತನ ಧನಕನಕ ಗೌರವಘನತೆ ಸ್ಥಾನಮಾನ ಉಳಿಸಿದ, ಕನ್ನಡದ ಕಂದನನ್ನು ಕನ್ನಡಮ್ಮನ ಮಡಿಲು ಸೇರಿಸಿದ ದೇವತೆಯಾದರು! ಕನ್ನಡಿಗರು ಕರುಣಾಮಯಿಗಳು ಎಂಬುದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ!

 'ರಾಜಕುಮಾರ್' ಎಂಬ ಮಹಾತ್ಮನ ಫ಼ಿಲಮ್-ನಿರ್ಮಾಣ-ಬಿಡುಗಡೆ-ವಾಲ್‌ಪೋಸ್ಟರ್-ಜಾಹೀರಾತು-ಪ್ರಚಾರ-ಬ್ಲಾಕ್‌ಟಿಕೆಟ್  ಪುಸ್ತಕ-ಆಡಿಯೊ-ವೀಡಿಯೊ-ಕ್ಯಾಲೆಂಡರ್-ಡೈರಿ-ಸ್ಟಾಂಪ್-ಸಂಘ/ಸಂಸ್ಥೆ-ಮ್ಯುಸಿಕಲ್‌ನೈಟ್ ಮುಂತಾದ ನೂರಾರು ದಾರಿಗಳ ಜತೆಗೆ ಮಿಮಿಕ್ರಿ-ಆರ್ಕೇಷ್ಟ್ರ ಕಲಾವಿದರಾಗಿ ಹುಟ್ಟಿಕೊಂಡ ಸಾವಿರಾರು ಜೂ||ರಾಜ್‌ಕುಮಾರ್‌ಗಳೂ ಲಕ್ಷಾಂತರ ಕುಟುಂಬಗಳೂ ಜೀವನ ಸಾಗಿಸುತ್ತಿದ್ದವು, ಸಾಗಿಸುತ್ತಿದ್ದಾರೆ! 'ರಾಜ್' ಹೆಸರನ್ನಷ್ಟೆ ಬಳಸಿಕೊಂಡು ಮನೆ ಕಟ್ಟಿಕೊಂಡವರ, ಮದುವೆ ಮಾಡಿಕೊಂಡವರ ತಲೆಮಾರು ಇಂದಿಗೂ ಬದುಕು ಸಾಗಿಸುತ್ತಿವೆ. ಪ್ರಪಂಚದ ಪ್ರತಿಯೊಬ್ಬ ಮನುಷ್ಯ[ಕಲಾವಿದ]ನಿಗೂ ಮಾದರಿಯಾದ ರಾಜ್, ಕಲಾ ಜಗತ್ತಿನ ಅದ್ಭುತ! 

  ಕಂಪನಿಯಲ್ಲಿ ಪುಟ್ಟಕಲಾವಿದನಿದ್ದಾಗ ನೋ ಪೇಮೆಂಟ್, ಓನ್ಲಿ ರೋಟಿ ಕಪ್ಡಾ ಮಖಾನ್ ಚಿತ್ರರಂಗದ ಬಾಲಕಲಾವಿದನಿದ್ದಾಗ ಇಡೀ ಫ಼ಿಲಮ್‌ಗೆ ೪-೫ರೂ. ಸಂಬಳ! ಬೇಡರಕಣ್ಣಪ್ಪದಿಂದ ಸತ್ಯಹರಿಶ್ಚಂದ್ರ ಚಿತ್ರದವರೆಗೂ ಪಂಡರೀಬಾಯಿಗಿಂತ ರಾಜಕುಮಾರ್‌ಗೆ ಕಡಿಮೆ ಹಣ ನೀಡಲಾಗುತ್ತಿತ್ತು!ಸತ್ಯಹರಿಶ್ಚಂದ್ರ ಚಿತ್ರದ ಸಿಲ್ವರ್‌ಜ್ಯುಬ್ಲಿ ಸಮಾರಂಭದಲ್ಲಿ ಪಂಡರೀಬಾಯಿ ಶಿಫ಼ಾರಸ್ಸಿಂದ [ಹೀರೊಯಿನ್‌ಗೆ ಹೀರೊಗಿಂತ ಹೆಚ್ಚುಸಂಭಾವನೆ ನ್ಯಾಯವೆ?ಎಂದು ನಗುತ್ತಲೆ ನಿರ್ಮಾಪಕರಾದ ನಾಗಿರೆಡ್ಡಿ-ಚಕ್ರಪಾಣಿಯನ್ನು ಪ್ರಶ್ನಿಸಿದ ಪ್ರತಿಫ಼ಲ] ರಾಜ್ ಸಂಭಾವನೆ ೩ರಿಂದ ೫ಸಾವಿರಕ್ಕೆ ಬಡ್ತಿ. ಸಂಧ್ಯಾ, ಎಂವಿ.ರಾಜಮ್ಮ, ಸಾಹುಕಾರ್‌ಜಾನಕಿ, ಜಮುನ, ಕೃಷ್ಣಕುಮಾರಿ ನಟಿಯರಿಗಿಂತ ಮತ್ತು ಕಲ್ಯಾಣಕುಮಾರ್, ಉದಯಕುಮಾರ್, ನರಸಿಂಹರಾಜು, ಬಾಲಕೃಷ್ಣರಿಗಿಂತ ಕಡಿಮೆ ಸಂಭಾವನೆ ರಾಜ್‌ಗೆ ನೀಡಲಾಗುತ್ತಿತ್ತು! ಆ ಕಾಲಕ್ಕೆ 'ಕ್ಲಾಸ್' ಪ್ರೇಕ್ಷಕರ, ವಿಶೇಷವಾಗಿ ಶಾಲಾಕಾಲೇಜ್ ವಿದ್ಯಾರ್ಥಿ[ನಿ]ಯರ ಆರಾಧ್ಯದೈವ, ಕನ್ನಡದ ಪ್ರಥಮ ಸೂಪರ್‌ಸ್ಟಾರ್ ಕಲ್ಯಾಣ್‌ಕುಮಾರ್‌ಗೆ ೧ನೇಸ್ಥಾನ; 'ಮಾಸ್' ಪ್ರೇಕ್ಷಕವರ್ಗದ ನೆಚ್ಚಿನ ನಟನಾಗಿದ್ದ ಉದಯಕುಮಾರ್ ೨ನೇಸ್ಥಾನ; ಕೆಂಪರಾಜ್‌ಅರಸು-ಹೊನ್ನಪ್ಪಭಾಗವತರ್‌ಗೆ ೩ನೇಸ್ಥಾನ; ಕಡಿಮೆ ಸಂಖ್ಯೆಯುಳ್ಳ ಭಕ್ತಿಪಂಥ/ಮಹಿಳಾ ಪ್ರೇಕ್ಷಕರ ಮೆಚ್ಚಿನನಟ ರಾಜ್‌ಕುಮಾರ್‌ಗೆ ೪ನೇಸ್ಥಾನ! 

  ೧೯೫೮ರಲ್ಲಿ ಭೂಕೈಲಾಸ ಚಿತ್ರೀಕರಣವೇಳೆ ನಾರದಪಾತ್ರಧಾರಿ ಕಲ್ಯಾಣ್‌ಕುಮಾರ್‌ರಿಂದ ಕೀಳರಿಮೆ, ೧೯೬೦ರ ದಶಾವತಾರದ ಶೂಟಿಂಗ್‌ನಲ್ಲಿ ಉದಯಕುಮಾರ್+ರಾಜಾಶಂಕರ್‌ರಿಂದ ಟೀಕೆಟಿಪ್ಪಣಿ, ರಣಧೀರಕಂಠೀರವ ಸಂದರ್ಭದಲ್ಲಿ ಸಂಧ್ಯಾಳ ಕುಚೋದ್ಯ ೧೯೬೨ರ ಭೂದಾನ ಚಿತ್ರದ ಸನ್ನಿವೇಶಗಳಲ್ಲಿ ನೇರಾನೇರವಾಗಿ 'ಕಳ್ಳನಿಗೊಂದು ಪಿಳ್ಳೆನೆಪ' ಎಂಬಂತೆ ಕಲ್ಯಾಣ್‌ಕುಮಾರ್-ಉದಯ ಕುಮಾರ್‌ರಿಂದ ವ್ಯಂಗ್ಯ. ಸಹೋದ್ಯೋಗಿಗಳಿಂದಲೆ ಅವಮಾನ,ಅವಹೇಳನ,ತೆಗಳಿಕೆ,ಉಪದ್ರವ,ನೋವು,ಮುಂತಾದ ಕುಹಕ,ಕುಚೋದ್ಯ ಸಹಿಸಿ ಭಂಡಾಟ ಅಭ್ಯಾಸ ಮಾಡಿಕೊಂಡಿದ್ದ ಸರಳ ಸಜ್ಜನ ಸಾಕಾರಮೂರ್ತಿ. ಸಾವಿರಾರು ಉಳಿಏಟು ತಿಂದು ಸಹನಾ ಶಿಲ್ಪವಾದರು, ತಾಳಿದವನು ಬಾಳಿಯಾನು ಎಂಬುದನ್ನು ರುಜುವಾತು ಪಡಿಸಿದರು. ಇಂಥ ಹಲವಾರು ಉದಾಹರಣೆ ಉಳ್ಳ ಕನ್ನಡದ ಪ್ರಪ್ರಥಮ ನಟ!

 ಆಕಾಲದಲ್ಲಿ ಯಾವುದೇ ನಟ-ನಟಿಯರ ಅಭಿಮಾನಿಗಳ ಸಂಘ ಅಥವ ಭಕ್ತರು ಇದಾವುದೂ ಇರಲಿಲ್ಲ?! 'ತಾನೊಂದು ಬಗೆದರೆ ದೈವವೊಂದು ಬಗೆಯಿತು' ನಾಣ್ಣುಡಿಯಂತೆ ದೈವಸಂಕಲ್ಪದ ಮುಂದೆ ಅಸೂಯಾಪರರ ಸಂಕಲ್ಪವು ಶೂನ್ಯ ಎಂಬುದಕ್ಕೆ ಸಾಕ್ಷಿಯಾಗಿ; ರಾಜ್ ಸಾವಕಾಶವಾಗಿ ಆದರೆ, ಶಾಶ್ವತವಾಗಿ ಬೆಳೆದು ಎವರೆಸ್ಟ್ ಎತ್ತರ ಏರಿದರು. ಸುಮಾರು ೪೦ ವರ್ಷಕಾಲ ಪ್ರಥಮ ಸ್ಥಾನ ಆಕ್ರಮಿಸಿ ಕೊಂಡಿದ್ದರು. ಇಂದಿಗೂ ನಟಸಾರ್ವಭೌಮನಾಗಿ ಏಕಮೇವಾದ್ವಿತೀಯ ಚಂದನವನ ಚಕ್ರವರ್ತಿಯಾಗಿ ಸಕಲಕಲಾವಲ್ಲಭನಾಗಿ ಅಜರಾ ಮರವಾಗಿದ್ದಾರೆ! ಇವರ ಬಗ್ಗೆ ಇನ್ನಷ್ಟು ರೋಮಾಂಚಕ ಮಾಹಿತಿ ಮುಂದಿನವಾರದ ಚಂದನವನ ಚರಿತ್ರೆಯಲ್ಲಿ ಮುಂದುವರಿಯಲಿದೆ....! 

ಕುಮಾರಕವಿ ನಟರಾಜ್[೯೦೩೬೯೭೬೪೭೧]
ಬೆಂಗಳೂರು ೫೬೦೦೭೨

This image has an empty alt attribute; its file name is image-2.png