ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯವಲ್ಲ ಎಂಬ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಒಪ್ಪತ್ತಕ್ಕದ್ದಲ್ಲ ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಕರ್ನಾಟಕದ ಆಡಳಿತ ಭಾಷೆ ಮತ್ತು ಇಲ್ಲಿಯ ಜನರ ಮಾತೃ ಭಾಷೆ ಮತ್ತು ವ್ಯವಹಾರಿಕ ಭಾಷೆ ಕನ್ನಡವಾಗಿರುವುದರಿಂದ ಕರ್ನಾಟಕ್ಕೆ ವಿದ್ಯಾಭ್ಯಾಸಕ್ಕೆಂದು ಇತರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಲಿಯಬೇಕು.
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇದಕ್ಕೆ ಸಂಭಂದ ಪಟ್ಟ ಇತರ ಸಂಘ ಸಂಸ್ಥೆಗಳು ಹೈಕೋರ್ಟಿನಲ್ಲಿ ವಾದಿಸಲು ಸಮರ್ಥ ವಕೀಲರನ್ನು ನೇಮಕಮಾಡಬೇಕು ಮತ್ತುಈ ಬಗ್ಗೆ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು.ಎಂಬುದು ಕನ್ನಡ ರಾಷ್ಟ್ರೀಯಾ ಒಕ್ಕೂಟದ ಒತ್ತಾಸೆಯಾಗಿದೆ ಹಾಗೂ ಕರ್ನಾಟಕದ ಉನ್ನತ ಶಿಕ್ಷಣ ವಿದ್ಯಾಲಯಗಳಲ್ಲಿ ಕನ್ನಡ ಕಡ್ಡಾಯವಲ್ಲ ಎಂಬ ವಾದ ಸರಿಯಲ್ಲ ಇದನ್ನು ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಈ ಬಗ್ಗೆ ರಾಜ್ಯಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕೇಂದು ಒಕ್ಕೂಟ ದ ಅದ್ಯಕ್ಷರಾದ ತಗಡೂರು ನಾಗಲಿಂಗಸ್ವಾಮಿ ಪತ್ರಿಕಾ ಪಕಟಣೆಯಲ್ಲಿ ತಿಳಿಸಿದ್ದಾರೆ