ಅಚ್ಚ ಕನ್ನಡಿಗ ಹೊನ್ನಪ್ಪ ಭಾಗವತರ್ ‘ಅಂಬಿಕಾಪತಿ’ ತಮಿಳು ಫ಼ಿಲಂ ಮೂಲಕ ಸಿನಿಮಾರಂಗ ಪ್ರವೇಶ ಮಾಡಿ, ಈ ಮೊದಲೇ ಕಾಲಿವುಡ್‌ನಲ್ಲಿ ಖ್ಯಾತರಾಗಿದ್ದ ತಮಿಳು ನಟ ತ್ಯಾಗರಾಜ ಭಾಗವತರ್‌ಗೆ ನೇರ ಸ್ಫರ್ಧಿಯಾದರು! ತದನಂತರ, ಸುಭದ್ರ್ರಾ ಕನ್ನಡ ಫ಼ಿಲಮ್ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು.  ಆ ಕಾಲಕ್ಕೆ ಸ್ಫುರದ್ರೂಪಿ ನಾಯಕನಟನಾಗಿದ್ದ ಇವರು ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾ ವಿಶೇಷವಾಗಿ ಭಕ್ತಿಪ್ರಧಾನ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿದ್ದ ಸೌಮ್ಯ ಕಲಾವಿದ. ತಮಿಳು ಚಿತ್ರರಂಗದ ಅಂದಿನ ದಿಗ್ಗಜ ನಟ ತ್ಯಾಗರಾಜಭಾಗವತರ್‌ಗೆ ರೈವಲ್ ಆದರು. ದ.ಭಾರತದ ಇಬ್ಬರು ಭಾಗವತರ್ & ಭಾಗವತರ್ ನಟರಿಂದಾಗಿ, ಸಿನಿಮಾಕ್ಕೆಂದು ಹೊರಟ ಪ್ರೇಕ್ಷಕರು ಎಷ್ಟೋಸಲ ಕನ್‌ಫ಼್ಯುಸ್‌ಆಗಿ, ತ್ಯಾಗರಾಜರ ಫ಼ಿಲಂ ಅಂದುಕೊಂಡು ಹೊನ್ನಪ್ಪನವರ ಫ಼ಿಲಂ [ಮತ್ತು ವೈಸ್-ವರ್ಸ] ನೋಡಿದ ಅನೇಕ ಉದಾಹರಣೆ ಉಂಟು! 

      ತಮಿಳ್ ಚಿತ್ರರಂಗದ ತ್ಯಾಗರಾಜ ಭಾಗವತರ್ ಮೀರಿಸುವಂತೆ ಕನ್ನಡ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಹೀರೋಆಗಿ ದಾಖಲೆ ಮಾಡಿದ್ದರು. ಅನೇಕಬಾರಿ ತ್ಯಾಗರಾಜ ಭಾಗವತರ್ ಅವರಿಂದಲೇ ಸಾರ್ವಜನಿಕ ಸಮಾರಂಭ/ ಕಾರ್ಯಕ್ರಮದಲ್ಲಿ ಹೊಗಳಿಸಿಕೊಂಡ ಅಪರೂಪ ಕಲಾವಿದ.  ಹೊನ್ನಪ್ಪ ಭಾಗವತರ್ ನಟಿಸಿದ ಪ್ರತಿಯೊಂದು ಸಿನಿಮಾದ ಅವರ ಹಾಡಿನ ದೃಶ್ಯಕ್ಕೆ ಅವರೇ ಹಿನ್ನೆಲೆಗಾಯಕ-ಸಂಗೀತನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಶಿಷ್ಟ ಹೀರೊ!  ತ್ರಿಭಾಷಾ ಚಿತ್ರರಂಗದ ಪ್ರಪ್ರಥಮ ಭಕ್ತಿರಸ ನಾಯಕನಟ-ಕಂ-ಗಾಯಕ ಎಂಬುದು ಅವತ್ತಿನ ನೂತನ ದಾಖಲೆ! ಸುಮಾರು ೫೦ ವರ್ಷಕಾಲ ‘ಲಲಿತಕಲಾ ಫ಼ಿಲಂಸ್’ ಬ್ಯಾನರ್ ಅಡಿಯಲ್ಲಿ ಕನ್ನಡ-ತೆಲುಗು-ತಮಿಳು ೩ ಭಾಷೆಗಳ ಚಲನಚಿತ್ರ ನಿರ್ಮಾಪಕ-ನಿರ್ದೇಶಕ-ಸಂಗೀತನಿರ್ದೇಶಕರಾಗಿ ಒಟ್ಟು ೩೨ ಫ಼ಿಲಂಸ್ ಬೆಳ್ಳಿತೆರೆಗೆ ಅರ್ಪಿಸಿದ್ದ ಧೀಮಂತ ಕನ್ನಡಿಗ!  ಹೊನ್ನಪ್ಪ ಭಾಗವತರ್ ಬೆಂಗಳೂರಿನ ನೆಲಮಂಗಲ ಬಳಿಯ ಚೌಡಸಂದ್ರದಲ್ಲಿ ೧೪ನೇ ಜನವರಿ ೧೯೧೫ರಂದು ಜನಿಸಿದ್ದರು.  ರಂಗ ಕಲಾವಿದನಾಗಿ ವೃತ್ತಿ ಪ್ರಾರಂಭಿಸಿ ನಾಟಕ-ಸಿನಿಮ ಎರಡೂ ಕ್ಷೇತ್ರದಲ್ಲಿ ಪ್ರಭುದ್ಧ ನಟ ಎನಿಸಿದ್ದರು. ಶ್ರೀಮನ್ ಮಹಾರಾಜರಿಂದ ಗೌರವ ಸಂಪಾದಿಸಿದ್ದ, ೩ರಾಜ್ಯಗಳಲ್ಲಿ ಜನಪ್ರಿಯತೆ ಗಳಿಸಿದ್ದ, ಸಕಲಕಲಾವಲ್ಲಭ!

ಇವರಿಗೆ ಸಂದ ಪದವಿ ಪ್ರಶಸ್ತಿ ಬಿರುದು ಬಹುಮಾನ ಸನ್ಮಾನ:-

* ೧೯೫೫ : ಮಹಾಕವಿ ಕಾಳಿದಾಸ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ [ನಿರ್ಮಾಪಕ-ನಟ-ಗಾಯಕ-ಸಂಗೀತ ನಿರ್ದೇಶಕ]

* ೧೯೫೬ : ಪಂಚರತ್ನ ಚಿತ್ರದ ಅಭಿನಯಕ್ಕೆ ಮದ್ರಾಸ್ ಚಲನಚಿತ್ರ ಅಭಿಮಾನಿ ಸಂಘದಿಂದ ‘ದ.ಭಾರತದ ಅತ್ಯುತ್ತಮ ನಟ’ ಪ್ರಶಸ್ತಿ

* ೧೯೫೯ : ಜಗಜ್ಯೋತಿ ಬಸವೇಶ್ವರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ [ರಾಜ್‌ಕುಮಾರ್ ಪೋಷಕ/ಅತಿಥಿನಟನಾಗಿ ಬಿಜ್ಜಳನ ಪಾತ್ರವಹಿಸಿದ್ದರು]

* ೧೯೬೦ : ನಾದಬ್ರಹ್ಮ ಸಂಗೀತ ವಿದ್ಯಾಲಯದ ಸಂಸ್ಥಾಪಕಅಧ್ಯಕ್ಷ ಹಾಗೂ ಪ್ರಾಚಾರ್ಯನಿರ್ದೇಶಕ

* ೧೯೬೧  : ಕನ್ನಡ ಫ಼ಿಲಂಸ್ ಸಲಹಾ ಸಮಿತಿ ಸದಸ್ಯರಾಗಿ ಅನುಪಮ ಸೇವೆ

* ೧೯೬೨ : ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಸದಸ್ಯರಾಗಿ ಅಮೋಘ ಸೇವೆ

* ೧೯೭೬ : ‘ಗಾನಕಲಾಭೂಷಣ’ ಪ್ರಶಸ್ತಿ ಪ್ರದಾನ ಅದ್ಧೂರಿ ಸನ್ಮಾನ; ಪಿಟೀಲ್ ಚೌಡಯ್ಯ ಭವನ ಬೆಂಗಳೂರು

* ೧೯೭೮ : ‘ಗಾನಕಲಾಗಂಧರ್ವ’ ತಾಮ್ರ ಪತ್ರ ಮತ್ತು ನಗದು ಬಹುಮಾನ, ಕರ್ನಾಟಕ ಸಂಗೀತ ವಿದ್ವನ್ಮಣಿಗಳಿಂದ

* ೧೯೮೦ : ‘ಗಾನಾಭಿನಯಚಂದ್ರ’ ಬಿರುದು ಸನ್ಮಾನ, ಕನ್ನಡ ಚಲನಚಿತ್ರ ಅಭಿಮಾನಿಗಳು, ಮದ್ರಾಸ್

* ೧೯೮೬ : ‘ರಾಜ್ಯೋತ್ಸವ ಪ್ರಶಸ್ತಿ’ ಕರ್ನಾಟಕ ಸರ್ಕಾರ

* ೧೯೮೭ : ‘ನಟನಾಚಾರ್ಯ’ ಬಿರುದು ಸನ್ಮಾನ, ಸೌತ್ ಇಂಡಿಯನ್ ಫ಼ಿಲಂ ಫ಼್ಯಾನ್ಸ್ ಅಸೋಸಿಯೇಶನ್, ಹೈದ್ರಾಬಾದ್

* ೧೯೯೦ : ಭಾರತದ ರಾಷ್ಟ್ರಪತಿಗಳಿಂದ ಕೇಂದ್ರ ‘ಸಂಗೀತ ನಾಟಕ ಅಕ್ಯಾಡೆಮಿ’ ಪ್ರಶಸ್ತಿ

* ೧೯೯೧ : ‘ವರ್ಷದ ಅತ್ಯುತ್ತಮ ಸಂಗೀತಗಾರ’ ಪ್ರಶಸ್ತಿ, ರಾಷ್ಟ್ರೀಯ ಸಂಗೀತ&ನಾಟಕ ಅಕ್ಯಾಡೆಮಿ, ನವದೆಹಲಿ

         ಸರಸ್ವತಿಪುತ್ರ ಹೊನ್ನಪ್ಪ ಸಿ. ೨ನೆ ಅಕ್ಟೋಬರ್ ೧೯೯೨ರಂದು ೭೭ನೇ ವಯಸ್ಸಲ್ಲಿ ಬೆಂಗಳೂರಲ್ಲಿ ದೈವಾಧೀನರಾದರು!

                               ಹೊನ್ನಪ್ಪ ಭಾಗವತರ್ ಅಭಿನಯದ ಕನ್ನಡ ಚಲನಚಿತ್ರಗಳು:-

                        ಕ್ರ.ಸಂ.ಫ಼ಿಲಂ ಹೆಸರು/ಇಸವಿ 
ಸುಭದ್ರಾ [ಕನ್ನಡ+ತೆಲುಗು] / ೧೯೪೧ 
ಹೇಮರೆಡ್ಡಿ ಮಲ್ಲಮ್ಮ / ೧೯೪೫ 
ಭಕ್ತ ಕುಂಬಾರ / ೧೯೪೯ 
ಗುಣಸಾಗರಿ / ೧೯೫೩ 
ಮಹಾಕವಿ ಕಾಳಿದಾಸ / ೧೯೫೫ 
ಆಷಾಢಬೂತಿ / ೧೯೫೫ 
ಪಂಚರತ್ನ / ೧೯೫೬ 
ಜಗಜ್ಯೋತಿ ಬಸವೇಶ್ವರ / ೧೯೫೯ 
ಕಠಾರಿವೀರ / ೧೯೬೬ 
೧೦                                                      ಸದಾನಂದ / ೧೯೭೯

  ಕುಮಾರಕವಿ ನಟರಾಜ್[೯೦೩೬೯೭೬೪೭೧]

   ಬೆಂಗಳೂರು-೫೬೦೦೭೨