ಕಸ್ತೂರಿ ಸಿರಿಕನ್ನಡ ವೇದಿಕೆ(ರಿ) ರಾಜ್ಯ ಘಟಕ ಮಂಡ್ಯ. ಇವರಿಂದ “ಕಲಿಯುಗ”ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ ಮತ್ತು23 ನೇ ಕವಿ ಕಾವ್ಯ ಮೇಳ ಕಾರ್ಯಕ್ರಮವನ್ನು ೨೫ ಭಾನುವಾರ ಬೆಳಿಗ್ಗೆ ೧೦ ಘಂಟೆಗೆ ಸ್ಥಳ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಮಂಡ್ಯ ಜಿಲ್ಲೆ.ಇಲ್ಲಿ ಆಯೋಜಿಸಲಾಯಿತು.ಸಮ್ಮೇಳನದ ಅಧ್ಯಕ್ಷರಾಗಿ ಡಾ.ರಮೇಶ್ ಅಂಬಿಗೇರ ಸಾಹಿತಿಗಳು ಮುಂಡಗೋಡ.ಶ್ರಿಮತಿ ರಾಧಾಬಾಯಿ ಕೃಷ್ಣಶಿರಾಲಿ ರಾಜ್ಯ ಉಪಾಧ್ಯಕ್ಷರು ಮುಂಡಗೋಡ ಕ.ಸಿ.ವೆ.ಶ್ರೀಮತಿ ಮಂಜುಳಾ ರಮೇಶ್ ಜಿಲ್ಲಾಧ್ಯಕ್ಷರು ಮೈಸೂರು ಕ.ಸಿ.ವೆ. ಇವರುಗಳು ಮತ್ತು ಮತ್ತಿತ್ತರ ಗೌರವಾನ್ವಿತರುಸಮ್ಮೇಳನದ ಮುಖ್ಯರಾಗಿದ್ದರು.

ಪೋತೇರಾ ಮಹಾದೇವು ಅವರು ರಾಜ್ಯಮಟ್ಟದ ಆಯ್ದ ಕವನಗಳ ಸಂಪಾದಕರಾಗಿದ್ದರು.ಈ ರಾಜ್ಯಮಟ್ಟದ ಕವಿತೆಗಳ ಆಯ್ಕೆಗೆ ಮಂಜುನಾಥ ಬಿ.ಆರ್(ಚಿ.ಮ.ಬಿ.ಆರ್)ಯುವಸಾಹಿತಿ ಅವರು ಆಯ್ಕೆಯಾಗಿದ್ದು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಮಂಜುನಾಥ ಬಿ.ಆರ್ ಅವರು ಮೂಲತಃ ಹೆಚ್‌.ಡಿ ಕೋಟೆ ತಾ. ಮೈಸೂರು ಜಿಲ್ಲೆಯವರಾಗಿದ್ದು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ ಹಾಗೂ ಎರಡು ವರ್ಷದ ಬಿ.ಇ.ಡಿ ತರಬೇತಿ ಕೂಡ ಪರಿಪೂರ್ಣಗೊಳಿಸಿದ್ದಾರೆ.ಇವರ ಆಸಕ್ತಿ ವಲಯ ಸಾಹಿತ್ಯ ಕ್ಷೇತ್ರವಾಗಿದ್ದು ಈಗಾಗಲೇ ಹಲವು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.2019 ನೇ ಸಾಲಿನಲ್ಲಿ ಮೈಸೂರು ದಸರಾ ಚಿಗುರು ಕವಿಯಾಗಿ ಹಾಗೂ ಆಕಾಶವಾಣಿ ಸಮ್ಯುದ್ಯತಾ ಶೋತ್ರು ಸಂಸ್ಥೆಯು ಆಯೋಜಿಸಿದ್ದ ರಾಜ್ಯಮಟ್ಟದ ಕವಿತೆ ಸ್ಪರ್ದೆಯಲ್ಲಿ ಪ್ರಥಮ ಸ್ಥಾನದಲ್ಲಿ ಗೆದ್ದು ಗೌರವ ಭಾಜನರಾಗಿದ್ದಾರೆ.

By admin