ಮೈಸೂರು: ಜಾನಪದ ಕಲೆಯನ್ನು ನಂಬಿ ಬದುಕುತ್ತಿರುವ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಬೇಸಿಗೆ ದಿನಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರಿಂಧ ಬರುವ ಸಂಭಾವನೆಯಿಂದ ಜೀವನ ಸಾಗಿಸುತ್ತಿದ್ದ ನೂರಾರು ಜಾನಪದ ಕಲಾವಿದರು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ.

ಇಂತಹ ಕಲಾವಿದರನ್ನು ಹುಡುಕಿ ಅವರಿಗೆ ಜೀವನ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಆಹಾರ ಕಿಟ್ ಗಳನ್ನು ಭಗತ್ ಸಿಂಗ್ ಯುವಕರ ಬಳಗವು ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ. ನಗರದ ಕಲಾಮಂದಿರ ಆವರಣದಲ್ಲಿ ಜಾನಪದದ ವಿವಿಧ ಪ್ರಕಾರಗಳನ್ನು ಬಳಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಸುಮಾರು 300 ಜಾನಪದ ಕಲಾವಿದರು ಹಾಗೂ ಸಹ ಕಲಾವಿದರ ಕುಟುಂಬಕ್ಕೆ ದಿನಬಳಕೆಯ ಆಹಾರ ಕಿಟ್ ವಿತರಿಸಲಾಯಿತು.

ಇದೇ ಸಂದರ್ಭ ಭಗತ್ ಸಿಂಗ್ ಯುವಕರ ಬಳಗದ ಸದಸ್ಯರಾದ ಜಗ್ಗು ಗೌಡರು, ನಂದನ್ ಚಕ್ರವರ್ತಿ, ಮನೋ, ಉಮೇಶ್, ಚೆಲುವ, ಶರತ್, ನಂದೀಶ್, ಶಿವಕುಮಾರ್  ಹಾಗೂ ಇನ್ನಿತರರು ಇದ್ದರು.

By admin