ಸಕಲೇಶಪುರ: ಕಾಡಾನೆ ತುಳಿದು ಕಾಫಿ ತೋಟದ ಮಾಲೀಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕಿರುಹುಣಸೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಕಾಫಿ ತೋಟದ ಮಾಲೀಕ ರಾಜಯ್ಯ (59)ಮೃತಪಟ್ಟ ದುರ್ದೈವಿ. ಇವರು ಎಂದಿನಂತೆ ಮನೆಯಿಂದ ಬೆಳಿಗ್ಗೆ ಆರು ಗಂಟೆಗೆ ಕಾಫಿ ತೋಟಕ್ಕೆ ಹೋದಾಗ ಅವರ ಮೇಲೆ ತೋಟದಲ್ಲಿದ್ದ ಕಾಡಾನೆ ಏಕಾಏಕಿ ಆನೆ ದಾಳಿ ಮಾಡಿ ತುಳಿದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ರಾಜಯ್ಯ ರವರು ಎರಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಕಲೇಶಪುರ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಂದಿ ಕಾಡಾನೆ ದಾಳಿಯಿಂದಲೇ ಸಾವಿಗೀಡಾಗುತ್ತಿದ್ದಾರೆ. ಇನ್ನು ಮುಂದೆಯಾದರೂ ಅರಣ್ಯ ಇಲಾಖೆ ಇತ್ತಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

By admin