ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ      ತಾಲ್ಲೂಕಿನ ಭೀಮ್ ಆರ್ಮಿ ಏಕತಾ ಮಿಷನ್ ವತಿಯಿಂದ  ತಾಲ್ಲೂಕು ಕಚೇರಿ ಆವರಣದಲ್ಲಿ ಜನವರಿ ೨೬ ರಂದು ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ರವರು ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ತೆಗೆಸಿ ಅವಮಾನ  ಮಾಡಿದರೆ  ಅವರನ್ನು ಸೇವೆಯಿಂದ ವಜಾ ಮಾಡುವಂತೆ   ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಭೀಮ್ ಆರ್ಮಿ ಏಕತಾ ಮಿಷನ್ ತಾಲ್ಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ  ಸಂವಿಧಾನ ರಚನೆಗೆ ಕಾರಣಕರ್ತರಾದ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ  ಪರಿಜ್ಞಾನವಿಲ್ಲದೆ  ರಾಯಚೂರಿನ  ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರ ತೆಗೆಸಿರುವುದು ಖಂಡನೀಯ ನ್ಯಾಯಾಧೀಶರ ವಿಚಾರಣಾ ಕಾಯಿದೆ ೧೯೬೮, ನ್ಯಾಯಾಧೀಶರ ವಿಚಾರಣಾ ಅಧಿನಿಯಮ ೧೯೬೯ ಪ್ರಕಾರ  ಅಸಮರ್ಥತೆ ಮತ್ತು ಅನುಚಿತ ವರ್ತನೆ ಆಧಾರದಲ್ಲಿ  ಅವರನ್ನು ಸೇವೆಯಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು .

ಈ ಸಂದರ್ಭದಲ್ಲಿ ಶಿವಕುಮಾರ್, ನವೀನ್ ,ಕಾಮ್ ರಾಜ್, ಪ್ರೇಮ್ ,ಶಿವು, ಹರೀಶ್, ಶೇಖರ್, ಮಂಜು,  ಹಾಜರಿದ್ದರು