ಚಾಮರಾಜನಗರ: ಚಾಮರಾಜನಗರ ಸೇರಿದಂತೆ ಜಿಲ್ಲೆಯ ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕು ನ್ಯಾಯಾಲಯಗಳಲ್ಲಿ ಜೂನ್ ೨೫ರಂದು ಮೆಗಾ ಲೋಕ್ ಅದಾಲತ್‌ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿರುವ ಎ.ಡಿ.ಆರ್. ಕಟ್ಟಡದ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಜೂನ್ ೨೫ರಂದು ಲೋಕ್ ಅದಾಲತ್ ನಡೆಸಲು ನಿರ್ಣಯಿಸಲಾಗಿದ್ದು, ಜಿಲ್ಲೆಯ ೪ ತಾಲೂಕು ಕೇಂದ್ರಗಳ ಆಯಾ ನ್ಯಾಯಾಲಯಗಳಲ್ಲಿ ಬೈಟಕ್‌ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸಿ ಲೋಕ್ ಅದಾಲತ್‌ನ್ನು ನಡೆಸಲಾಗುತ್ತದೆ. ಕಳೆದ ವ? ಒಟ್ಟು ೪ ಲೋಕ್ ಅದಾಲತ್‌ಗಳು ವಕೀಲರು, ಕಕ್ಷಿದಾರರು, ವಿಮಾ ಕಂಪನಿಗಳು, ವಿವಿಧ ಇಲಾಖೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ. ಕೌಟುಂಬಿಕ ಕಲಹ, ಬ್ಯಾಂಕ್ ವಸೂಲಾತಿ, ರೈತರ ಸಾಲದ ಪರಿಹಾರ, ಅಪಘಾತ, ವಿವಾಹ ವಿಚ್ಚೇದನ ಸೇರಿದಂತೆ ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ೨೦೨೨ನೇ ಸಾಲಿನಲ್ಲಿ ನಡೆದ ಮೊದಲ ಲೋಕ್ ಅದಾಲತ್‌ನಲ್ಲಿ ೪೯೭೬ ಪ್ರಕರಣಗಳು ರಾಜಿಯಾಗಿವೆ. ಪ್ರಸ್ತುತ ಜೂನ್ ೨೫ರಂದು ನಡೆಯುವ ಈ ವರ್ಷದ ಎರಡನೇ ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಹುದಾದ ೬ ಸಾವಿರ ಪ್ರಕರಣಗಳ ಗುರಿ ಹೊಂದಲಾಗಿದೆ ಎಂದರು.
ಲೋಕ್ ಅದಾಲತ್‌ಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ತಮ್ಮ ಸಹಕಾರ ನೀಡಿದ್ದಲ್ಲಿ ಸಂಧಾನಕಾರರು ನೀಡುವ ಸಲಹೆಗಳನ್ನು ಆಲಿಸಿ, ಸಲಹೆಗಳನ್ನು ಪಾಲಿಸಿದಲ್ಲಿ ಉಭಯ ಪಕ್ಷಗಾರರು ಪರಸ್ಪರ ಒಪ್ಪಿ ಪ್ರಕರಣವನ್ನು ಲೋಕ್ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು. ಅದಾಲತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆ, ವಾಹನ ಅಪಘಾತ, ಕೈಗಾರಿಕಾ ವಿವಾದ ಕಾಯ್ದೆ ಹಾಗೂ ಇತರೆ ಎಲ್ಲಾ ಸ್ವರೂಪದ ಪ್ರಕರಣಗಳು ಮತ್ತು ರಾಜೀ ಯೋಗ್ಯ ಕ್ರಿಮಿನಲ್ ಪ್ರಕರಣಗಳು, ವಿಶೇ? ಕಾನೂನಿನಿಂದ ಶಿಕ್ಷಿಸಲ್ಪಡುವ ಅಪರಾಧಗಳಾದ ಚೆಕ್ಕು ಅಮಾನ್ಯ, ಕಾರ್ಮಿಕ ಕಾಯ್ದೆಯಡಿ ಪ್ರಕರಣಗಳು, ವಿದ್ಯುತ್ ಕಳವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆಗೆ ಸಂಬಂಧಪಟ್ಟ ಅಪರಾಧಗಳು, ಇತರೆ ಯಾವುದೇ ಅಪರಾಧಿಕ ಸ್ವರೂಪದ ರಾಜೀ ಯೋಗ್ಯ ಅಪರಾಧಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ಲೋಕ್ ಅದಾಲತ್‌ನಲ್ಲಿ ರಾಜೀ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಲೋಕ್ ಅದಾಲತ್‌ನಲ್ಲಿ ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇದಕ್ಕಾಗಿ ಯಾವುದೇ ನ್ಯಾಯಾಲಯದ ಶುಲ್ಕ ಪಾವತಿ ಮಾಡಬೇಕಾಗುವುದಿಲ್ಲ. ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಪಕ್ಷಗಾರರು ಸಂದಾಯ ಮಾಡಿದ ಸಂಪೂರ್ಣ ನ್ಯಾಯಾಲಯದ ಶುಲ್ಕವನ್ನು ಪಾವತಿಸಿದ ಪಕ್ಷಗಾರರಿಗೆ ವಾಪಸ್ಸು ಕೊಡಲಾಗುತ್ತದೆ. ಲೋಕ್ ಅದಾಲತ್‌ನ ತೀರ್ಪಿನ ವಿರುದ್ಧ ಮೇಲ್ಮನವಿಗೆ ಅವಕಾಶ ಇಲ್ಲದ ಕಾರಣ, ಪ್ರಕರಣ ಅಂತಿಮ ಘಟ್ಟವನ್ನು ತಲುಪಿ ಮುಂದೆ ವಂಶ ಪಾರಂಪರ್ಯವಾಗಿ ನಡೆಯುವ ವ್ಯಾಜ್ಯಗಳಿಗೆ ಅನುವು ಮಾಡಿಕೊಡದೇ ಪಕ್ಷಕಾರರ ನಡುವೆ ಸಾಮರಸ್ಯ ಉಂಟಾಗಿ ಪಕ್ಷಕಾರರು ಮತ್ತು ಅವರ ಸಂಬಂಧಪಟ್ಟ ಕುಟುಂಬದವರು ಸಮಾಜದಲ್ಲಿ ಸಾಮರಸ್ಯದಿಂದ ಜೀವನ ಮಾಡಲು ಅನುಕೂಲ ಮಾಡಿಕೊಡುತ್ತದೆ ಎಂದರು.
ಅದಾಲತ್‌ನಲ್ಲಿ ಪಕ್ಷಾಕಾರರು ನೇರವಾಗಿ ಭಾಗವಹಿಸಬಹುದು. ಅಲ್ಲಿ ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ಹೀಗಾಗಿ ಪಕ್ಷಕಾರರು ಮುಕ್ತವಾಗಿ ಚರ್ಚಿಸಿ ತಮ್ಮ ವ್ಯಾಜ್ಯಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ಅದಾಲತ್‌ನಲ್ಲಿ ಪ್ರಕರಣಗಳು ಇತ್ಯರ್ಥವಾಗುವುದರಿಂದ ನಿಜವಾದ, ನ್ಯಾಯಯುತವಾದ ತೃಪ್ತಿಕರವಾದ ಪರಿಹಾರ ಉಭಯ ಪಕ್ಷಾಗಾರರಿಗೆ ಸಿಗುತ್ತದೆ ಹಾಗೂ ಉಭಯ ಪಕ್ಷದವರಿಗೂ ವ್ಯಾಜ್ಯವನ್ನು ತಮ್ಮ ತಮ್ಮ ಇಚ್ಛೆಗೆ ಅನುಗುಣವಾಗಿ ಇತ್ಯರ್ಥಪಡಿಸಿಕೊಂಡ ತೃಪ್ತಿಯಿರುತ್ತದೆ. ರಾಜೀ ಸಂಧಾನದ ಮೂಲಕ ತೀರ್ಮಾನವಾದ ತೀರ್ಪು, ಅವಾರ್ಡ್‌ನ ವಿರುದ್ಧ ಯಾವುದೇ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಲೋಕ್ ಅದಾಲತ್‌ನ ತೀರ್ಪು ಅಂತಿಮವಾಗಿರುತ್ತದೆ. ಜೂನ್ ೨೫ರಂದು ನಡೆಯಲಿರುವ ಲೋಕ್ ಅದಾಲತ್‌ಗೆ ಸರ್ಕಾರದ ವಿವಿದ ಇಲಾಖೆಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಮಾತನಾಡಿ ಪೂರ್ವಭಾವಿ ಸಮಾಲೋಚನಾ ಕೇಂದ್ರಗಳಲ್ಲಿ ನ್ಯಾಯಾಲಯದಿಂದ ಸಾಕ? ಪ್ರಕರಣಗಳು ಪೂರ್ವಭಾವಿ ಸಮಾಲೋಚನೆಯ ಮುಖಾಂತರ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕುಗಳು, ವಿಮಾ ಕಂಪನಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ನ್ಯಾಯಾಧೀಶರು ಹಾಗೂ ವಕೀಲರ ಜೊತೆಗೂಡಿ ಈಗಾಗಲೇ ಪ್ರಾಧಿಕಾರದಲ್ಲಿ ಹಾಗೂ ಎಲ್ಲಾ ನ್ಯಾಯಾಲಯಗಳಲ್ಲಿ ನಿತ್ಯ ಕಾರ್ಯಕಲಾಪಗಳು ಮುಗಿದ ಬಳಿಕ ಲೋಕ್ ಅದಾಲತ್ ಪೂರ್ವಭಾವಿ ಸಮಾಲೋಚನಾ ಸಭೆ ಏರ್ಪಡಿಸಿದ್ದು, ರಾಜೀ ಯೋಗ್ಯ ಪ್ರಕರಣಗಳಲ್ಲಿ ಎರಡೂ ಪಕ್ಷಕಾರರನ್ನು ಕರೆಸಿ ಪೂರ್ವಭಾವಿ ಸಮಾಲೋಚನೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಪಕ್ಷಗಾರರು ಅದಾಲತ್ ಸೌಲಭ್ಯವನ್ನು ಪಡೆಯಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿ ಅದಾಲತ್‌ನಲ್ಲಿ ರಾಜೀ ಆಗುವುದರಿಂದ ಸಾಮಾಜಿಕ ವ್ಯವಸ್ಥೆ ಬದಲಾಗಿ ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆ ಯಾವುದೇ ವ್ಯಾಜ್ಯಗಳಿಲ್ಲದೇ ಸಮಾಧಾನದ ಸಾಮರಸ್ಯದ ಜೀವನವನ್ನು ನಡೆಸಿ, ವ್ಯಾಜ್ಯಗಳಿಗೆ ತಗಲಬಹುದಾದ ಅಮೂಲ್ಯವಾದ ಸಮಯ ಮತ್ತು ಹಣವನ್ನು ತನ್ನ ಮತ್ತು ಕುಟುಂಬದ ಅಭಿವೃದ್ಧಿಯ ಕಡೆ, ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಮಕ್ಕಳ ಉತ್ತಮ ಜೀವನವನ್ನು ಕಲ್ಪಿಸಿಕೊಡಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಸದಸ್ಯ ಕಾರ್ಯದರ್ಶಿ ವಿರೂಪಾಕ್ಷ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.