ಮೈಸೂರು.ನವೆಂಬರ್- ನೂತನವಾಗಿ ಸ್ಥಾಪಿಸಲಾಗಿರುವ ಕ canರ್ನಾಟಕ ರಾಜ್ಯ ಸರ್ಕಾರಿ ಖಜಾನೆ ನೌಕರರ ಸಂಘದ ಮೈಸೂರು ಜಿಲ್ಲಾ ಶಾಖೆಯನ್ನು ಮೈಸೂರು ಜಿಲ್ಲಾ ಖಜಾನೆ ಜಂಟಿ ನಿರ್ದೇಶಕಿ ಯಶೋಧ ಅವರು ಗುರುವಾರ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಅವರು ಜಿಲ್ಲಾ ಖಜಾನೆ ನೌಕರರ ಸಂಘದ ಅಭಿವೃದ್ಧಿಗೆಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕು ಎಂದು ಅವರು ಹೇಳಿದರು.
ಮೈಸೂರು ಜಿಲ್ಲಾ ಖಜಾನೆ ನೌಕರರ ಸಂಘವು ತನ್ನದೇಯಾದ ಗುರಿ ಮತ್ತು ಉದ್ದೇಶಗಳನ್ನು ಒಳಗೊಂಡು ಸ್ಥಾಪಿತಗೊಂಡಿದೆ. ಎಲ್ಲರು ಸಂಘದ ಹಿತವು ಲೋಕದ ಹಿತ ಎಂಬಂತೆ ಬಹಳ ಪ್ರಾಮಾಣಿಕತೆಯಿಂದ ಸಂಘದಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ನೂತನ ಜಿಲ್ಲಾ ಖಜಾನೆ ನೌಕರರ ಸಂಘದ ಅಧ್ಯಕ್ಷರಾದ ಆರ್.ಹೇಮಂತ್ ಕುಮಾರ್ ಅವರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಷಡÀಕ್ಷರಿ ಅವರ ಮಾರ್ಗದರ್ಶನದಲ್ಲಿ ಖಜಾನೆ ನೌಕರರ ಸಂಘವನ್ನು ಸ್ಥಾಪಿಸಲಾಗಿದ್ದು ಈ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದಕ್ಕೆ ಧನ್ಯವಾದಗಳು. ಸಂಘವು ಒಂದು ಕುಟುಂಬವಿದ್ದಂತೆ. ಎಲ್ಲರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದರು.
ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ವ್ಯವಸ್ಥೆ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೆ ಮುಂದುವರೆಸುವಂತೆ ರಾಜ್ಯಧ್ಯಕ್ಷರಾದ ಷಡಕ್ಷರಿ ಅವರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಎಲ್ಲಾ ನೌಕರರಿಗೆ ಆರೋಗ್ಯ ಕಾರ್ಡ್ ನೀಡಲು ಮನವಿ ಮಾಡಿದ್ದಾರೆ. ಇದರಿಂದ ನೌಕರರಿಗೆ ಅನುಕುಲವಾಗುತ್ತದೆ ಎಂದರು.
ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಖಜಾನೆ ನೌಕರರ ಸಂಘವು ಸ್ಥಾಪಿಸಿರುವುದು ಸಂತಸದ ವಿಷಯ. ಜಿಲ್ಲಾ ಖಜಾನೆ ನೌಕರರ ಸಂಘವು ಸಮಸ್ಯೆಗಳಿಗೆ ಸ್ಪಂದಿಸಿ ಇತರೆ ಸಂಘಗಳಿಗೆ ಮಾದರಿಯಾಗಬೇಕು ಎಂದು ಜಿಲ್ಲಾ ಖಜಾನೆ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕಿ ಗಿರಿಜಾಂಬ ಅವರು ಹೇಳಿದರು.
ಇದೆವೇಳೆ ಜಿಲ್ಲಾ ಖಜಾನೆ ನೌಕರರ ಸಂಘದ ಪದದೀಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆ ನೌಕರರ ಸಂಘದ ಉಪಾಧ್ಯಕ್ಷ ಎನ್.ಕೆ ಗಣೇಶ್. ಗೌರವಾಧ್ಯಕ್ಷ ನಾಗರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

By admin