ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಸುರಗಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು.


ಸಾಮಾನ್ಯ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರಕಾಶ್ ಎಸ್ ಎ, ರಾಜೇಶ್ ಎಸ್ ಕೆ, ಶ್ರೀನಿವಾಸ್ ಗೌಡ ಎಸ್ ಎನ್, ಕುಮಾರ್ ಎಸ್ ಜೆ ,ಅಶ್ವತೆಗೌಡ, ವಿಜಯಕುಮಾರ್ ಎಸ್ ಡಿ, ಜವರಯ್ಯ, ಹಿಂದುಳಿದ ವರ್ಗ ಅ ಕ್ಷೇತ್ರದಿಂದ ಕುಮಾರ್ ಎಸ್ ಎ , ಹಿಂದುಳಿದ ವರ್ಗ ಬಿ ಕ್ಷೇತ್ರದಿಂದರಾಜಶೇಖರ್ ಎಸ್ ಪಿ, ಮಹಿಳಾ ಮೀಸಲು ಕ್ಷೇತ್ರದಿಂದ ಗೀತಾಮಣಿ,ಹಾಗು ಸರೋಜಮ್ಮ,ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿ ಪುಟ್ಟರಾಜು.ತಿಳಿಸಿದರು.


ಈ ಸಂದರ್ಭದಲ್ಲಿ ಕಾರ್ಯದರ್ಶಿ ಪುಟ್ಟರಾಜು ,ಜೆಡಿಎಸ್ ಯುವ ಮುಖಂಡ ವಿದ್ಯಾಶಂಕರ್ ಮಾತನಾಡಿ ಶಾಸಕ ಕೆ. ಮಹದೇವ್ ಹಾಗೂ ಮೈಮುಲ್ ಅಧ್ಯಕ್ಷ ಪಿ ಎಂ ಪ್ರಸನ್ನ ರವರು ನಮ್ಮ ಗ್ರಾಮಕ್ಕೆ ಅನೇಕ ಅಭಿವೃದ್ಧಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದರು.ಇದನ್ನು ಮನಗಂಡು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಉತ್ಪಾದಕರು ಆಯ್ಕೆ ಮಾಡಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ನೂತನ ನಿರ್ದೇಶಕರು ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ರವಿಗೌಡ ,ಪುಟ್ಟಸ್ವಾಮಿಗೌಡ, ಶಿವೇಗೌಡ ,ರುದ್ರಪ್ಪ, ಕಾಂತೇಗೌಡ’ ಕುಮಾರ ,ರಾಮಾಚಾರಿ ,ಮಧು, ಅನಿಲ್, ಹಾಜರಿದ್ದರು.