ಚಾಮರಾಜನಗರ: ನಗರಸಭೆ ೬ ನೇ ವಾರ್ಡ್ ಉಪಚುನಾವಣೆ ಹಿನ್ನೆಲೆಯಲ್ಲಿ
ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಹಮದ್ ಜಾವೀದ್ ಅವರು ಚಾಮರಾಜನಗರ ನಗರಸಭೆ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕೇಶವಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಸೈಯದ್ ಅಕ್ರಮ್, ಉಪಾಧ್ಯಕ್ಷ ಮಹೇಶ್‌ಗೌಡ, ಜಿಲ್ಲಾ ಮಹಿಳಾ ಅಧ್ಯಕ್ಷೆ ಡಿ.ಎನ್.ಉಷಾ, ಮುಖಂಡರಾದ ಸೈಯದ್ ಪುರ್ಕಾನ್, ಸೈಯದ್ ಇಂತಿಯಾಜ್, ರಾಮಚಂದ್ರ, ಅಬೀಬ್ ಯುವ ಘಟಕ ಇತರರು ಹಾಜರಿದ್ದರು