ಮೈಸೂರು: ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಶ್ರೀನಾಥ್ ವೃತ್ತದಲ್ಲಿ ದಿನನಿತ್ಯ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಆಕ್ಸಿಡೆಂಟ್ ಸ್ಪಾಟ್‌ಆಗುತ್ತಿದೆ. ಇಲ್ಲಿ ವಾಹನ ಸಾವಾರರು ಅಡ್ಡಾದಿಡ್ಡಿ ನುಗ್ಗುವ ಮೂಲಕ ಅಪಘಾತಗಳು ಸಾಮಾನ್ಯವಾಗಿ ಬಿಟ್ಟಿದೆ.

ಸಿಗ್ನಲ್ ಅಕ್ಕಪಕ್ಕದಲ್ಲಿಯೇ ಶಾಲಾ ಕಾಲೇಜು ಇವೆ. ಶಾಲೆ ಬಿಟ್ಟ ಮೇಲೆ ಮಕ್ಕಳು ರಸ್ತೆ ದಾಟುವುದಕ್ಕೆ ಹರ ಸಾಹಸ ಪಡಬೇಕಾಗಿದೆ. ನಾಲ್ಕು ದಿಕ್ಕಿನಿಂದಲೂ ಸಹ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಚಲಿಸುವುದರಿಂದ ಅಪಘಾತ ಹೆಚ್ಚಾಗುತ್ತಿದೆ. ಇದಲ್ಲದೇ ಇಲ್ಲಿ ಯಾವುದೇ ಬ್ಯಾರಿಕಾಡ್ ಕೂಡಾ ಇಲ್ಲ ಹಾಗೂ ಸಿಗ್ನಲ್ ದೀಪವೂ ಸಹ ಕೆಟ್ಟುಹೋಗಿದೆ. ಮಕ್ಕಳು ಶರವೇಗದಿಂದ ಸಾಗುವ ವಾಹನಗಳ ನಡುವೆ ರಸ್ತೆ ದಾಟಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಸಮರ್ಪಕವಾದ ರಸ್ತೆ ಸುರಕ್ಷಿತ ಕ್ರಮಗಳಿಲ್ಲದೆ ಆಗಾಗ ಅಪಘಾತಗಳು ಸಂಭವಿಸುವುದು.

ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ಕೆಟ್ಟು ನಿಂತಿರುವ ಸಿಗ್ನಲ್ ದೀಪ ಸರಿಪಡಿಸುವ ಜೊತೆಗೆ ಸೂಕ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಬ್ಯಾರಿಕ್ಯಾಡ್ ಹಾಗೂ ರಸ್ತೆ ಹಂಪ್‌ಗಳನ್ನು ಅಳವಡಿಸಿ ಸೂಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.