ಎಚ್.ಡಿ.ಕೋಟೆ: ತಾಲ್ಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ ಏ.೧೦ರಂದು ಬೆಳಗ್ಗೆ ೯ಕ್ಕೆ ಶನೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.


ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ದೇವರನ್ನು ಕಪಿಲ ನದಿಗೆ ಕರೆದೋಯ್ಯದು ದೇವರ ವಿಗ್ರಹಮೂರ್ತಿಗಳನ್ನು ತೊಳೆದು ವಿಶೇಷ ಪೂಜೆ ಸಲ್ಲಿಸಿ ದೇವರನ್ನು ದೇವಸ್ಥಾನದ ಬಳಿಗೆ ಕರೆತರಲಾಗುವುದು. ಈ ನಡುವೆ ಭಕ್ತರಿಂದ ಹಾಲು ಹರಿವೆ, ಬಾಯಿ ಬೀಗ ಸೇವೆ ಇರಲಿದೆ ಎಂದು ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶನೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ತಿಳಿಸಿದರು.


ಗ್ರಾಮದ ಪ್ರಮುಖ ಬೀದಿಯಿಂದ ಅಮ್ಮನವರ ಕಳಶದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನ ಬಳಿಗೆ ಕರೆತರಲಾಯಿತು. ದಾರಿಯುದ್ದಕ್ಕೂ ಭಕ್ತರಿಂದ ವಿವಿಧ ಭಜನಾ ಕಾರ್ಯಕ್ರಮವಿದ್ದು, ಇದರೊಂದಿಗೆ ಮಂಗಳವಾದ್ಯ, ಜಾನಪದ ಕಲಾ ತಂಡಗಳು ಇರಲಿವೆ. ಮಧ್ಯಾಹ್ನ ೨ಕ್ಕೆ ದೇವಸ್ಥಾನದಲ್ಲಿ ದೇವತೆಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಏರ್ಪಡಿಸಲಾಗುವುದು. ನಂತರ ಅನ್ನ ಸಂತರ್ಪಣೆ ಇರಲಿದೆ ಎಂದು ಅವರು ಹೇಳಿದರು.


ಧಾರ್ಮಿಕ ಸಭೆ: ಶಾಸಕ ಅನಿಲ್ ಚಿಕ್ಕಮಾಧು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಹಾಸ್ಯ ನಟ ಟೆನ್ನಿಸ್ ಕೃಷ್ಣ, ಸಿನಿಮಾ ನಿರ್ಮಾಪಕ ಹರಿಕೃಷ್ಣ, ಉದ್ಯಮಿ ಮಂಜೇಗೌಡ, ಮಲ್ಲೇಶ್ ಶಿರಮ್ಮಳ್ಳಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ರವಿದೊಳ್ಳೆಗೌಡ, ನಗರ ಪಾಲಿಕೆ ಗುತ್ತಿಗೆದಾರ ಶಿವಣ್ಣ, ಎಸ್‌ಐ ಬಸವರಾಜು, ವಕೀಲ ಶಿವಕುಮಾರ್, ಕೃಷ್ಣೇಗೌಡ, ತಹಸೀಲ್ದಾರ್ ರತ್ನಾಂಬಿಕೆ, ಎಸ್‌ಐಗಳಾದ ರಾಮು, ಸುರೇಶ್‌ನಾಯಕ, ಎಂ. ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯ ಗೋವಿಂದನಾಯಕ, ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಶೇಖರ್, ಮಲ್ಲಿಗಮ್ಮ, ಮಲ್ಲೇಶ್, ಶಿವಣ್ಣ, ಗುರುದತ್, ಚಂದನ್‌ಗೌಡ, ಸ್ವಾಮಿ, ಟಿ.ಶಿವಣ್ಣ, ಬೆಟ್ಟನಾಯಕ, ಕೃಷ್ಣ, ಶಂಭುಲಿಂಗಪ್ಪ, ಸಣ್ಣಪ್ಪ, ವಿಷಕಂಠ, ಮಹದೇವಪ್ಪ, ಸ್ವಾಮಿ, ಸಿದ್ದರಾಮು, ಪ್ರಕಾಶ್, ಶ್ರೀಧರ್, ಎಚ್.ವಿ.ಮಂಜುನಾಥ್, ಮಹೇಶ್, ಜಿನ್ನಹಳ್ಳಿ ರಾಜನಾಯಕ, ಮರಳೂರು ನಾಯಕ, ನಾರಾಯಣ್, ಉದಯ್‌ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.