ಚಾಮರಾಜನಗರ: ತಾಲೂಕಿನ ಸರಗೂರುಮೋಳೆ ಗ್ರಾಮದಲ್ಲಿ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸುವ ರಾಜ್ಯಸರಕಾರದ ಮಹತ್ವಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಗ್ರಾಮಕ್ಕೆ ತೆರಳಿ ವೀಕ್ಷಿಸಿದರು.
ಇದೇವೇಳೆ ಪೈಪ್‌ಲೈನ್ ಕಾಮಗಾರಿ ವೀಕ್ಷಿಸಿದ ಶಾಸಕರು’ ಪೈಪ್ ಹೂಳಲು ಮೂರುಅಡಿ ಆಳ ತೆಗೆಯಬೇಕು, ಆದರೆ ತೆಗೆದಿರುವುದು ಎರಡುಅಡಿ ಮಾತ್ರ, ಇಲ್ಲಿ ವಾಹನಗಳ ಸಂಚಾರವಿರುವುದರಿಂದ ಪೈಪ್‌ಲೈನ್ ಒಡೆದುಹೋಗುವ ಸಂಭವ ಜಾಸ್ತಿ, ಕೂಡಲೇ ಸಂಬಂಧಪಟ್ಟ ಯೋಜನೆಯ ಕಾಮಗಾರಿಯ ಗುಣಮಟ್ಟಕ್ಕೆ ಆಧ್ಯತೆ ನೀಡಬೇಕು, ಕಾಮಗಾರಿಯಲ್ಲಿ ಲೋಪದೋಷಗಳುಂಟಾದರೆ ಎಂಜಿನಿಯರರೇ ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದರು.
ಗ್ರಾಮಸ್ಥರು, ಜಲಜೀವನ್ ಮಿಷನ್ ಯೋಜನೆ ಎಂಜಿನಿಯರ್ ಹಾಜರಿದ್ದರು.
ಪೊಟೊಕ್ಯಾಪ್
ಚಾಮರಾಜನಗರ ತಾಲೂಕಿನ ಸರಗೂರುಮೋಳೆ ಗ್ರಾಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ವೀಕ್ಷಿಸಿದರು.
