ಮೈಸೂರು-೩ ಒಳಾಂಗಣ ಕ್ರೀಡೆ ಮತ್ತು ವ್ಯಾಯಾಮಗಳಾದ ಸೈಕ್ಲೀಂಗ್,ಓಡುವುದು,ಯೋಗ,ಜಿಮ್,ಹೆರೋಬಿಕ್ಸ್ ಮುಂತಾದವುಗಳನ್ನು ಅಭ್ಯಾಸ ಮಾಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಕೋವಿಡ್ ಮಹಾಮಾರಿ ಸಂಧರ್ಭದಲ್ಲಿ ಎಲ್ಲರೂ ಕೂಡ ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಯೋಗ ಮತ್ತು ವ್ಯಾಯಮಗಳನ್ನು ಮಾಡುವುದು ಉತ್ತಮ ಮತ್ತು ಅಗತ್ಯವಾಗಿದೆ.

ಹೊರಾಂಗಣ, ಈ ಕರೋನಾ ಸಂಧರ್ಭದಲ್ಲಿ ಹೊರಗಡೆ ಹೋಗಲು ಹೆಚ್ಚು ನಿರ್ಬಂಧ ಇರುವುದರಿಂದ ನಿಮ್ಮದು ತಾರಸಿ ಮನೆಗಳು ಆಗಿದ್ದರೆ ಸ್ವಲ್ಪ ಬಿಸಿಲಿರುವಾಗ ಮನೆಯ ಮೇಲೆ ಯೋಗ ಮತ್ತು ವ್ಯಾಯಾಮಗಳನ್ನು ಮಾಡಬೇಕು.ಸೂರ್ಯ ನಮಸ್ಕಾರವನ್ನು ನಿಯಮಿತ ವೇಗವಾಗಿ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಿ ರೋಗ ನಿರೋಧಕ ಶಕ್ತಿಯ ಪ್ರಮಾಣ ಹೆಚ್ಚಾಗುತ್ತದೆ.ಮತ್ತು ದೇಹದ ಅಂಗಾ0ಗಗಳು ಚೆನ್ನಾಗಿ ಕೆಲಸ ಮಾಡಲು ಆರಂಭಿಸುವುದರ ಜೊತೆಗೆ ಜೀರ್ಣಕ್ರಿಯೆಯ ಕಾರ್ಯವೈಖರಿ ಸುವ್ಯವಸ್ಥಿತಗೊಳ್ಳುತ್ತದೆ.ಈ ವಾತಾವರಣಕ್ಕೆ ತಕ್ಕಂತಹ ಹಣ್ಣುಗಳನ್ನು ಸೇವನೆ ಮಾಡಬೇಕು “ವಿಟಮಿನ್ ಸಿ”ಮತ್ತು ಪೈಬರ್ (ನಾರಿನ ಅಂಶ) ಇರುವ ಆಹಾರ ಸೇವನೆ ಒಳ್ಳೆಯದು.

 

ಇನ್ನೊಂದು ಮಾಹಿತಿ ಎಂದರೆ ದೂರದ ಹಳ್ಳಿಗಳಿಂದ ನಗರಕ್ಕೆ ಉದ್ಯೋಗಕ್ಕಾಗಿ ಬಂದ ಕೆಲಸಗಾರರು ಇಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.ಇವರಿಗೆ ದಾನಿಗಳು ಮತ್ತು ಸಾಮಾಜಿಕ ಸಂಘಟನೆಗಳು ಯಾವೂದೇ ಸ್ಥಳೀಯ ಗುರುತಿನ ಚೀಟಿಯನ್ನು ಅಪೇಕ್ಷಿಸದೆ ಸವಲತ್ತುಗಳನ್ನು ಒದಗಿಸಬೇಕೆಂದು ಹಾಗೂ ಸರ್ಕಾರವೂ ಇವರತ್ತ ಗಮನಹರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಹಾಗೂ ದೈಹಿಕ ಮತ್ತು ಮಾನಸಿಕ ಸುಸ್ಥಿತಿಗೆ ವ್ಯಾಯಾಮ ಮತ್ತು ಉತ್ತಮ ಆಹಾರದ ಹವ್ಯಾಸ ಕ್ರಮ ಒಳ್ಳೆಯದು ರವಿ ಟಿ.ಎಸ್ ದೈಹಿಕ ಶಿಕ್ಷಣ ವಿಭಾಗ ,ಸಹಾಯಕ ನಿರ್ದೇಶಕ ಮೈಸೂರು ವಿಶ್ವವಿದ್ಯಾನಿಲಯ

By admin