ವರದಿ: ಮಹೇಶ್ ನಾಯಕ್

ಮೈಸೂರು ಜಯನಗರದಲ್ಲಿ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ ಡಿ.೨೩ರಂದು ವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಪಂಕಜಾಂಘ್ರಿ ದಾಸ್ ತಿಳಿಸಿದರು.ಇಸ್ಕಾನ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದೇವಸ್ಥಾನದ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ.ಬೆಳಿಗ್ಗೆ ೬-೩೦ ಕ್ಕೆ ವೈಕುಂಠ ದ್ವಾರ ಪೂಜೆ ಇರುತ್ತದೆ, ಭವ್ಯವಾದ ವೈಕುಂಠ ದ್ವಾರವನ್ನು ಸ್ಥಾಪಿಸಲಾಗಿದ್ದು ದೇವಾಸ್ಥಾನವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗುವುದು.

ವೈಕುಂಠ ದ್ವಾರ ಪ್ರವೇಶ ಮಾಡಬಹುದು. ಕೃಷ್ಣ ಬಲರಾಮರ ದರ್ಶನವು ಕೂಡ ಮಾಡಬಹುದು ಹಾಗೂ ಕೃಷ್ಣ ಬಲರಾಮನಿಗೆ ವಿಶೇಷ ಅಲಂಕಾರದಿಂದ ಕೂಡಿರುತ್ತದೆ. ನಂತರ ಬೆಳಿಗ್ಗೆ ೭-೧೫ ಶೃಂಗಾರ ಅರತಿ, ದರ್ಶನ ಮಾಡಬಹುದು.ನಂತರ ೮-೩೦ ಕ್ಕೆ ಪಲ್ಲಕ್ಕಿ ಉತ್ಸವವಿರುತ್ತದೆ.ಕೃಷ್ಣ ಬಲರಾಮರ ಶ್ರೀಧಾಮ ಸನ್ನಿಧಿಯಲ್ಲಿ ದಿನವಿಡಿ ಬರುವಂತಹ ಭಕ್ತರಿಂದ ಪುಷ್ಪಾಂಜಲಿ ಸೇವೆಯನ್ನು ಅರ್ಪಣೆ ಮಾಡಲಾಗುವುದು.ಬೆಳಿಗ್ಗೆ ೯-೦೦ ಗಂಟೆಯಿಂದ ರಾತ್ರಿ ೧೦-೦೦ ಗಂಟೆ ಯವರೆಗೆ ಸಂಗೀತತ್ಸೋವ ಸೇವೆಯನ್ನು ಕಲಾವಿದರು ಅರ್ಪಣೆ ಮಾಡಲಾಗುವುದು.

ಈ ಭಾರಿ ವೈಕುಂಠ ಏಕದಶಿ ದಿನವೇ ಗೀತಾ ಜಯಂತಿಯು ಬಂದಿರುವದರಿಂದ್ದ ಈ ಬಾರಿ ಅಂದು ಭಕ್ತರು ಭಗವದ್ಗೀತೆಯ ೭೦೦ ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಸಂಗೀತ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಸುಮಾರು ೪೦ ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಪಂಕಜಾಂಘ್ರಿ ದಾಸ್ ಇದ್ದರು.