ಸ್ವತಂತ್ರಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು : ಸರ್ದಾರ್‌ಪಟೇಲ್, ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್ ಮೂವರಲ್ಲೊಬ್ಬರು? ನೆಹರೂಗಿಂತ ನೂರುಪಾಲು ಉತ್ತಮ ಅರ್ಹರು ಅನುಭವಿಗಳು ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲವೇಕೆ? ಗಾಂಧೀಜಿ ಕೈಗೊಳ್ಳುತ್ತಿದ್ದ ಸತ್ಯಾಗ್ರಹ-ಚಳುವಳಿಗೆ ಕಾಂಗ್ರೆಸ್‌ಪಕ್ಷಕ್ಕೆ ಫಂಡ್ ನೀಡುವಾಗಲೆಲ್ಲ ತನ್ನ ಮಗ ಜವಹರಲಾಲನನ್ನೆ ದೇಶದ ಪ್ರಪ್ರಥಮ ಪ್ರಧಾನಿಯನ್ನಾಗಿ ಮಾಡಬೇಕೆಂಬ ವಾಗ್ಧಾನದ ದಾಕ್ಷಿಣ್ಯಕ್ಕೆ ಸಿಲುಕಿಸಿಕೊಂಡು ಷರತ್ತುಬದ್ಧ ಆರ್ಥಿಕ ನೆರವು ನೀಡುತ್ತಿದ್ದ ಭೂಪ ಮೋತಿಲಾಲ್‌ನೆಹರು? ಅಪ್ಪ-ಮಗ ಇಬ್ಬರೂ ಕಾಶ್ಮೀರ ಪಂಡಿತ್ ಕುಟುಂಬದ ಶ್ರೀಮಂತ ಚತುರರು? ಅಂದು, ಪ್ರಥಮ ಪ್ರಧಾನಿ ಗದ್ದುಗೆ ಏರಲು ಹಾತೊರೆಯುತ್ತಿದ್ದ ಮತ್ತೊಬ್ಬ ಸ್ವಾರ್ಥಿ ಮಹಮದ್‌ಅಲಿಜಿನ್ನ. ತತ್ಪರಿಣಾಮ, ಈ ಮೇಲಿನ ಮೂವರೂ ಸ್ವಯಂಪ್ರೇರಿತರಾಗಿ ಪ್ರಧಾನಿ ಆಕಾಂಕ್ಷೆಯಿಂದ ಹಿಂದೆಸರಿದು, ದೇಶಾಭಿಮಾನದ ಸ್ವಾಭಿಮಾನದ ತ್ಯಾಗಮೂರ್ತಿಗಳಾದರು! ೧೯೪೭ರಲ್ಲಿ ಇಂಗ್ಲೆಂಡಲ್ಲಿ ಜರುಗಿದ ಹಲವಾರು ಸುತ್ತಿನ ಸಭೆಯಲ್ಲೂ ಭಾರತ-ವಿಭಜನೆ ಸಮಸ್ಯೆ ಬಗೆ ಹರಿಯಲಿಲ್ಲ. ಹ[ಛ]ಠಬಿಡದ ಜಿನ್ನಾ ‘ಪಾಕಿಸ್ತಾನ್ ಪ್ರತ್ಯೇಕ ವಿಭಜನೆ ಅಥವ ನನಗೇ ಭಾರತದ ಪ್ರಧಾನಿ ಪಟ್ಟ’ ಎಂಬ ಷರತ್ತನ್ನು ಗಾಂಧೀಜಿ ಮತ್ತು ಬ್ರಿಟಿಷ್ ಅಧಿಪತ್ಯದ ಮುಂದಿಟ್ಟಾಗ ಚರ್ಚೆಯು ಗಂಭೀರ ಸ್ವರೂಪ ತಾಳಿತು. ಬ್ರಿಟಿಷ್ ದೊರೆ-ರಾಣಿ ಗಾಂಧೀಜಿ-ತಂಡದವರಿಗೆ ಕಟ್ಟಾಜ್ಞೆ ಮಾಡಿತು:-

ನೀವೆಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದನಂತರವೆ ‘ಭಾರತವನ್ನು ಸ್ವತಂತ್ರಗೊಳಿಸುವ ಬ್ರಿಟಿಷ್ ಒಪ್ಪಂದ’ ಪೂರ್ಣಗೊಳಿಸಲಾಗುವುದು ಎಂಬ ವಾರ್ನಿಂಗ್ ನೀಡಿತು! ತೀರಹದಗೆಟ್ಟ ಆಒಂದು ಸಂದರ್ಭದಲ್ಲಿ ಮಾತ್ರ ಗಾಂಧೀಜಿ ಸಿಟ್ಟಿನಿಂದ ನೆಹರುಬೇಡ, ಜಿನ್ನಾಬೇಡ, ಪಟೇಲರೆ ಪ್ರಧಾನಿಆಗಲಿ ಎಂದು ಗುಡುಗಿದಾಗ ಅನಿವಾರ್ಯವಾಗಿ ಅಲ್ಲಿದ್ದವರೆಲ್ಲರೂ ಒಕ್ಕೊರಲಿಂದ ನಾವ್ಯಾರು ಬೇಡ ನೀವೇ ಪ್ರಧಾನಿಯಾಗಿ ಎಂದಾಗ ತಮ್ಮ ಕತ್ತು ಗೋಣಾಡಿಸಿದ್ದರೆ ಸಾಕಾಗಿತ್ತು ಈದೇಶದ ಮೊಟ್ಟಮೊದಲ ಪ್ರಧಾನಿ ಆಗಬಹುದಿತ್ತು ಗಾಂಧಿ! ಆದರೆ ಕಿಂಗ್‌ಮೇಕರ್ ಎಂದೂ ಕಿಂಗ್ ಆಗ[ಲಿಚ್ಚಿಸ]ಲೇಇಲ್ಲ? ಅನಗತ್ಯವಾಗಿ ಇಬ್ಬರು ಸೃಷ್ಟಿಸಿದ ಕೆಟ್ಟಹಠದಿಂದ ದೇಶವಿಭಜನೆಯಾದ ನಂತರವೇ ಸ್ವಾತಂತ್ರ್ಯ ದೊರಕಿತು! ಪಾಕಿಸ್ತಾನಕ್ಕೆ ಜಿನ್ನಾ[೧೪.೮.೧೯೪೭] ಮತ್ತು ಹಿಂದೂಸ್ತಾನಕ್ಕೆ ನೆಹರು[೧೫.೮.೧೯೪೭] ಪ್ರಪ್ರಥಮ ಪ್ರಧಾನ ಮಂತ್ರಿಯಾದರು!
ಆಪರೇಶನ್ ಪೋಲೊ:- ಸ್ವಾತಂತ್ರ್ಯಗೊಂಡ ದಿನದಿಂದಲೆ ಭಾರತದೊಳಗೆ ನೂರಾರು ಸಮಸ್ಯೆಗಳಿದ್ದವು. ಆಪೈಕಿ ಮೊದಲಿನದು ಹರಿದು ಹಂಚಿಹೋಗಿದ್ದ ಇಂಡಿಯವನ್ನು ಒಂದುಗೂಡಿಸುವ ಬೃಹತ್ಕಾರ್ಯ. ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿಯಾಗಿದ್ದ ಸರ್ದಾರ್ಪಟೇಲ್ ಪ್ರಾರಂಭಿಸಿದ ಕ್ರಾಂತಿ ಇದು! ಪ[ಫಿ]ರಂಗಿಯವರನ್ನು ಗಾಂಧಿಗಿರಿಯಿಂದ ಗೆದ್ದಿದ್ದ ರಾಷ್ಟ್ರಪಿತ ತನ್ನದೇ ರಾಷ್ಟ್ರದ ಒಳಗಿದ್ದ ತುಕ್ಡ–ಪ್ರಾಂತ್ಯ–ರಾಜ್ಯ–ಭೂಮಿತುಂಡುಗಳನ್ನು ಒಂದುಗೂಡಿಸಲು ಸಣ್ಣಪುಟ್ಟ ಪಟೇಲ–ಪಾಳೇಗಾರ–ಸಾಮಂತ-[ಮಹಾ]ರಾಜ–ನವಾಬರನ್ನು ಗೆಲ್ಲಲು ಉಪವಾಸ ಸತ್ಯಾಗ್ರಹ ಕೈಗೊಳ್ಳುವಂತಾಯ್ತು. ಆಜ಼ಾದ್ನಂತರವೂ ದೇಶಾದ್ಯಂತ ದರ್ಬಾರ್ ನಡೆಸುತ್ತಿದ್ದ ೨೫ಕ್ಕೂಹೆಚ್ಚು ದೊರೆಗಳ ಪೈಕಿ ಬಹುತೇಕರು ತಮ್ಮ ಸಹಮತ ಸಹಕಾರ ನೀಡಲೊಪ್ಪಿ ಸಹಾಯಹಸ್ತ ಚಾಚಿದರೂ; ಉದ್ಧಟತನದಿಂದ ಅಂತರ್ಯುದ್ಧಕ್ಕು ಸೈಎಂದು ಏಕತೆಗೆ ನಕಾರ ತೋರಿಸಿದ ಹೈದ್ರಾಬಾದ್ ನಿಜಾಮ ಮತ್ತು ಸಮಗ್ರತೆ ವಿರುದ್ಧದ ಪಾಂಡಿಚೆರಿ–ಗೋವಾ ಸರ್ವಾಧಿಕಾರಿ ಫ಼್ರೆಂಚರನ್ನು ಬಗ್ಗು ಬಡಿಯಲು ತಿಣುಕಾಡಬೇಕಾಯ್ತು! ಸಂಧಿಗ್ಧ ಪರಿಸ್ಥಿತಿಯಲ್ಲಿ ಗಾಂಧಿ–ನೆಹರು ಮಿತ್ರಮಂಡಲಿಗೆ ಆಪತ್ಭಾಂಧವರಾದರು ದೇಶಭಕ್ತ ಸರ್ದಾರ್ ಪಟೇಲ್! ಯಾವದೇವರಿಗೆ ಏನುಪೂಜೆ ಮಾಡಬೇಕೆಂದು ಚೆನ್ನಾಗಿಬಲ್ಲ ಉಕ್ಕಿನಮನುಷ್ಯ ತಮ್ಮ ಒಂದೇ ಭೇಟಿಯಿಂದ ಭಂಡಫ಼್ರೆಂಚರೂ ತಿಕ್ಕಲುನವಾಬರೂ ನಡುಗುವಂತೆ ಮಾಡಿ, ತಮ್ಮದೇಆದ ವಿಶಿಷ್ಟ[ದಾದಾಗಿರಿ] ಅಸ್ತ್ರದಿಂದ ಒಳಶತ್ರುಗಳ ಎಡೆಮುರಿ ಕಟ್ಟಿದರು. ದೇಶವನ್ನು ಒಂದೇ ಅಸ್ಮಿತೆ ಆಗಿಸಲು ಹಗಲು–ರಾತ್ರಿ ಶ್ರಮಪಟ್ಟು ಯಶಸ್ವಿಯಾದರು. ಗಾಂಧಿ–ನೆಹರೂ ಆದಿಯಾಗಿ ಪ್ರತಿಯೊಬ್ಬ ಭಾರತೀಯನು ಪಟೇಲರನ್ನು ಕಬ್ಬಿಣದ ಗುಂಡಿಗೆಯ ದೇಶಭಕ್ತನೆಂದು ಕೊಂಡಾಡಿದರು!
೧೯೪೭ರಲ್ಲಿ ಭಾರತದ ಪ್ರಥಮ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರಪ್ರಸಾದ್ ಅಧ್ಯಕ್ಷತೆಯಲ್ಲಿ ಕಾನೂನು ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ‘ಭಾರತ ಸಂವಿಧಾನ ಸಮಿತಿ’ ರಚಿಸಲಾಯ್ತು. ಸಂವಿಧಾನ ರಚನೆಗೂ ಗಣರಾಜ್ಯ ಸ್ಥಾಪನೆಗೂ ಮುನ್ನ ಭಾರತವು ಏಕತೆಯ ಒಂದೇ ಸಮಗ್ರ ದೇಶವಾಗಿ ರೂಪುಗೊಳ್ಳಬೇಕಿತ್ತು? ಸಂವಿಧಾನದ ಬರವಣಿಗೆ ಮುಗಿಯುವ ಅವಧಿಯೊಳಗೆ ಸಮಷ್ಠಿ ಭಾರತದ ನಿರ್ಮಾಣ ಅಗತ್ಯವಾಗಿತ್ತು? ಹಾಗಾಗಿ ಸರ್ದಾರ್‌ಪಟೇಲ್ ೧೬.೮.೧೯೪೭ರಿಂದಲೇ ಅಂತರ್ದೇಶೀ ಯುದ್ಧಕ್ಕೆ ನಾಂದಿಹಾಡಿ ಪ್ರಚಂಡಗೆಲುವು ಸಾಧಿಸಿದರು! ಸೇನೆಯಿಲ್ಲದ ಸೇನಾಪತಿ, ಅಪ್ರತಿಮ ಏಕಾಂಗಿ, ನಿರ್ವಹಿಸಿದ ಮತ್ತೊಂದು ಘನಕಾರ್ಯದಿಂದಾಗಿ ೧೯೪೭ರ ಪ್ರಥಮ ಇಂಡೋ-ಪಾಕ್ ಯುದ್ಧದಲ್ಲಿ ರಾತ್ರೋರಾತ್ರಿ ಪಾಕೀ ಸೈನಿಕರು ಚಡ್ಡಿಒದ್ದೆ ಮಾಡಿಕೊಂಡು ರಣರಂಗದಿಂದ ಕರಾಚಿಗೆ ಓಡಿಹೋದರು! ಇಂಥ ಧೀರನಿಗೆ ಪ್ರತಿ ಭಾರತೀಯನು ಪ್ರತಿಘಳಿಗೆ ಕೃತಜ್ಞತೆ ಸಲ್ಲಿಸಬೇಕಾದ್ದು ಆದ್ಯಕರ್ತವ್ಯ! ಈ ನಡುವೆ ೩೦.೧.೧೯೪೮ರಂದು ಗಾಂಧೀಜಿ ಹತ್ಯೆಯಾಯ್ತು! [ನಂತರದ ಸರ್ವೋದಯ ದಿನ]ಭಾರತದ ಸಂವಿಧಾನವು ದಿನಾಂಕ ೨೬.೧೧.೧೯೪೯ರಂದು ಸಂವಿಧಾನಸಮಿತಿ-ಮಂತ್ರಿಮಂಡಲ-ರಾಷ್ಟ್ರಪತಿಗಳ ಅನುಮೋದನೆ ಪಡೆದು ದಿ.೨೬.೧.೧೯೫೦ರಿಂದ ಜಾರಿಗೊಂಡು ಅದೇದಿನ ಗಣರಾಜ್ಯೋತ್ಸವ ಪ್ರಾರಂಭವಾಯ್ತು. ಅಂದು ದೇಶದಲ್ಲಿ ಒಟ್ಟು ೧೪ ರಾಜ್ಯ ಮತ್ತು ೬ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ ಬಂದವು! ಇಂದು ೭೩ನೇ ಗಣರಾಜ್ಯ ದಿನಾಚರಣೆ ಆಚರಿಸಲಾಗುತ್ತಿದೆ.
ವಲ್ಲಭ ಬಾಯಿ ಪಟೇಲ್ ದಿ.೩೧.೧೦.೧೮೭೫ರಂದು ಗುಜರಾತ್‌ನಲ್ಲಿ ಜನಿಸಿ ದಿ.೧೫.೧೨.೧೯೫೦ರಂದು ಗುಜರಾತಿನಲ್ಲೆ ನಿಧನರಾದರು. ಇವರಿಗೆ ೧೯೯೧ರಲ್ಲಿ ಮರಣೋತ್ತರ ಭಾರತರತ್ನ ಪ್ರಶಸ್ತಿ ಲಭಿಸಿತು. ಇಂದಿನ ಪ್ರಧಾನಿ ನ.ಮೋ.ರವರ ಆಡಳಿತಾವಧಿಯಲ್ಲಿ ಗುಜರಾತ್‌ನ ಸರ್ದಾರ್ ಸರೋವರ್ ಬಳಿ ಪ್ರಪಂಚದ ಅತಿ(೧೮೨ಮೀ) ಎತ್ತರದ ಪಟೇಲರ ಲೋಹದ ಪುತ್ಥಳಿ Statue of Unity ¢.31.10.2018ದಿ.೩೧.೧೦.೨೦೧೮ರಂದು ಅನಾವರಣ ಗೊಳಿಸುವ ಮೂಲಕ ಭಾರತಮಾತೆಯ ಮಣ್ಣಿನಮಗನಿಗೆ ಭಾರತೀಯರೆಲ್ಲರ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಒಂದುವೇಳೆ ಸರ್ದಾರ್‌ಪಟೇಲ್ ಮತ್ತು ಬಾಬಾಸಾಹೇಬ್‌ಅಂಬೇಡ್ಕರ್ ಮನಸ್ಸು ಮಾಡದಿದ್ದರೆ ಇಂದಿನ ಅಖಂಡಭಾರತ ಶ್ರೇಷ್ಠಸಂವಿಧಾನ ಕಾಣಲು ಸಾಧ್ಯವಾಗುತ್ತಿರಲಿಲ್ಲ! ! ONE United India, ONE Indian Constitution & ONE Republic ಒಂದುದೇಶ-ಒಂದುಸಂವಿಧಾನ-ಒಂದುಗಣರಾಜ್ಯ; ಕನಸಾಗೆ ಉಳಿಯುತ್ತಿತ್ತು? ಪ್ರತಿದಿನವೂ ಕಚ್ಚಾಟ-ಕಾದಾಟ ಸಾಮಾನ್ಯವಾಗಿಸಿ ಶೀಘ್ರದಲ್ಲೆ ಸ್ವ್ವಾತಂತ್ರ್ಯ ಕಳೆದುಕೊಂಡು ಮತ್ತೆ ಪರಕೀಯರ ಆಡಳಿತ[ದಾಸ್ಯ]ಕ್ಕೆ ಒಳಗಾಗುವ ದುರಂತಸ್ಥಿತಿ ತಲುಪುತ್ತಿತ್ತು? ಇಂದಿನ ಅದೆಷ್ಟು ನೇತಾರರು ಅಂದಿನ ಅನೇಕ ನೇತಾರರ ಬಲಿದಾನ ತ್ಯಾಗ ಕಟುಸತ್ಯದ ಇತಿಹಾಸ ನೆನಪಿಸಿಕೊಳ್ಳುತ್ತಾರೆ? ಕೇವಲ ಜಾತಿಮತಕ್ಕೆ ನೆಲಜಲಕ್ಕೆ ಭಾಷೆಧರ್ಮಕ್ಕೆ ಕ್ಷುಲ್ಲಕಕಾರಣಕ್ಕೆ ವೋಟ್ ಬ್ಯಾಂಕ್[ಕುರ್ಚಿ]ಗೆ ರಕ್ತದೋಕುಳಿ ಆಡು[ಆಡಿಸು]ತ್ತಾರೆ?? ಈಗಲಾದರೂ ನಮ್ಮ ಗ್ರೇಟ್ ಪ್ರಭು[ಪ್ರಜೆ]ಗಳು ಡಾಂಭಿಕ/ಯಾಂತ್ರಿಕ ಆಚರಣೆ ಕೈಬಿಟ್ಟು, ಚರಿತ್ರೆಯನ್ನು ಓದಿತಿಳಿದು, ಅರ್ಥಪೂರ್ಣವಾಗಿ ಗಣರಾಜ್ಯದಿನ ಆಚರಿಸಿದರೆ? ಅಭಿನಂದನಾರ್ಹ!

ಕುಮಾರಕವಿ ಬಿ.ಎನ್.ನಟರಾಜ್[೯೦೩೬೯೭೬೪೭೧]