ಮೈಸೂರು, ಜನವರಿ 0- ಕಡಕೊಳ ಪಟ್ಟಣ ಪಂಚಾಯಿತಿ ಕಾರ್ಯಾಲಯದ ವತಿಯಿಂದ 2021-22ನೇ ಸಾಲಿನ ಕಡಕೊಳ ಪಟ್ಟಣ ಪಂಚಾಯಿತಿಯ ಸ್ವಂತ ಅನುದಾನದ ಶೇ.24.10, ಶೇ.7.25 ಹಾಗೂ ಶೇ.05ರ ಸಮುದಾಯ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಸ್ಠಾನಗೊಳಿಸಲು ಹಾಗೂ ಪ್ರಗತಿ ಸಾಧಿಸುವ ದೃಷ್ಠಿಯಿಂದ ವೈಯಕ್ತಿಕ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ-ಪಂಗಡ ಜನಾಂಗದ(ಶೇ.24.10) ರೂ.66,630ಮೀಸಲು ಅನುದಾನದಲ್ಲಿ, ಪರಿಶಿಷ್ಟ ಪಂಗಡದ ಜನಾಂಗದ (ಶೇ.24.10) ರೂ. 27,070ಮೀಸಲು ಅನುದಾನದಲ್ಲಿ, ಇತರೆ ಬಡ ಜನಾಂಗದ (ಶೇ.7.25) ರೂ. 35,200ಮೀಸಲು ಅನುದಾನದಲ್ಲಿ, ವಿಕಲಚೇತನರ (ಶೇ. 5) ರೂ. 30,000ಮೀಸಲು ಅನುದಾನ ದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುಲಾಗವುದು.
ಅರ್ಜಿದಾರರು ಕಡಕೊಳ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಾಸವಿರಬೇಕು, 2020-2021 ರಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ತೇರ್ಗಡೆ ಹೊಂದಿರಬೇಕು, ಕುಟುಂಬದ ವಾರ್ಷಿಕ ವರಮಾನ ರೂ. 2.50 ಲಕ್ಷದೊಳಗೆ ಇರಬೇಕು. ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿರುವವರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಹಾಗೂ ಅನುದಾನಿತ/ಖಾಸಗಿ ಶಾಲೆಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಮಾಜ ಕಲ್ಯಾಣ ಇಲಾಖೆಯಿಂದ, ಇತರೆ ಬಡ ಜನಾಂಗದವರು ಹಾಗೂ ವಿಕಲಚೇತನರು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ಪ್ರೋತ್ಸಾಹ ಧನ ಪಡೆಯದಿರುವ ಬಗ್ಗೆದೃಢೀಕರಣ ಪತ್ರ ಪಡೆದಿರಬೇಕು ಅವಧಿ ಮೀರಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಫಲಾನುಭವಿ/ವಿದ್ಯಾರ್ಥಿಗಳ ಆಯ್ಕೆಗೆ ಹಾಗೂಪ್ರೋತ್ಸಾಹ ಧನ ಮೊತ್ತ ನೀಡುವ ಕುರಿತು ಕೌನ್ಸಿಲ್ ಸಭೆ ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ.
ಕಡಕೊಳ ಪಂಚಾಯತಿ ವ್ಯಾಪ್ತಿಯಲ್ಲಿ ವಾಸವಾಗಿರುವ ಕುರಿತು ಮತದಾರ ಗುರುತಿನ ಚೀಟಿ, ವಾಸ ಸ್ಥಳ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪ್ರತಿ ಇವುಗಳಲ್ಲಿ ಯಾವುದಾದರೂ ಎರಡು ದೃಢೀಕೃತ ದಾಖಲೆಗಳನ್ನು ದೃಢೀಕರಿಸಿ ಲಗತ್ತಿಸುವುದು. ಅರ್ಜಿದಾರರ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ, ವಾರ್ಷಿಕ ವರಮಾನ (ಪರಿಶಿಷ್ಟ ಜಾತಿ-ಪಂಗಡದವರಿಗೆ,ಇತರೆ ಬಡ ಜನರಿಗೆ, ವಿಕಲಚೇತನರಿಗೆ ವಾರ್ಷಿಕ ವರಮಾನ ರೂ. 2.50 ಲಕ್ಷದೊಳಗೆ ಇರಬೇಕು) ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರಸಲ್ಲಿಸುಬೇಕು ಹಾಗೂ 3 ಪಾಸ್ ಪೋರ್ಟ್ ಸೈಜ್ ಪೋಟೋ, 2020-21 ರಲ್ಲಿ ಎಸ್ ಎಸ್ ಎಲ್ ಸಿ ಉತ್ತೀರ್ಣವಾಗಿರುವ ಅಂಕಪಟ್ಟಿ ಹಾಗೂ 2020-21 ರಲ್ಲಿ ವ್ಯಾಸಾಂಗ ಮಾಡಿರುವ ಬಗ್ಗೆ ಸಂಬಂಧ ಪಟ್ಟ ಶಾಲೆಯಿಂದ ವ್ಯಾಸಾಂಗ ದೃಢೀಕರಣ ಪತ್ರ ಲಗತ್ತಿಸಬೇಕು.
50 ಮೊತ್ತದ ನೋಟರೀ ಪ್ರಮಾಣ ಪತ್ರದಲ್ಲಿ ಪ್ರೋತ್ಸಾಹ ಧನ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು ಅರ್ಜಿಯಲ್ಲಿ ತಿಳಿಸಿರುವ ಮಾಹಿತಿಗಳು ಹಾಗೂ ಲಗತ್ತಿಸಿರುವ ದಾಖಲೆಗಳು ಸತ್ಯವಾಗಿರುತ್ತವೆ ಹಾಗೂ ಪ್ರೋತ್ಸಾಹ ಧನ ಪಡೆಯಲು ಯಾವುದೇ ಇಲಾಖೆಗೆ ಅರ್ಜಿ ಸಲ್ಲಿಸಿರುವುದಿಲ್ಲ ಹಾಗೂ ಪ್ರೋತ್ಸಾಹ ಧನ ಪಡೆದಿರುವುದಿಲ್ಲ ಎಂಬುದಾಗಿ ಅರ್ಜಿದಾರರುಪ್ರಮಾಣ ಪತ್ರ ಸಲ್ಲಿಸುವುದು. ಅರ್ಹ ಅಭ್ಯರ್ಥಿಗಳು 2022ರ ಜನವರಿ 25 ಒಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.ಎಂದು ಕಡಕೊಳದ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ್ ಆವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—
—-