ಮೈಸೂರು: 8 ಮಹಿಳಾ ದಿನಾಚರಣೆಯ ಅಂಗವಾಗಿ ಸುವರ್ಣ ಬೆಳಕು ಫೌಂಡೇಶನ್ ಹೊಯ್ಸಳ ಕರ್ನಾಟಕ ಸಂಘ (ರಿ) ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾದಕ ಮಹಿಳೆಯರಿಗೆ ಸನ್ಮಾನ ಹಾಗೂ ಉಚಿತ ಆರೋಗ್ಯ ಶಿಬಿರ ನೆಡಸಲಾಯಿತು. ನಗರದ ಲಕ್ಷ್ಮಿಪುರಂ ಹೊಯ್ಸಳ ಕರ್ನಾಟಕ ಸಂಘದ ಅವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾ ಪದ್ಮಿನಿ ಯೋಗ ಶಿಕ್ಷಕಿ. ಶ್ರೀಮತಿ ರಮಾ ಆರ್, ಕೆದ್ಲಾಯ,ತೇಜಶ್ವಿನಿ ಭಾಗ್ಯ ಖ್ಯಾತ ದೃಶ್ಯ ಕಲಾವಿದರು, ಕು.ವೈಭವ್ ಶ್ರೀ.ಮತಿ ಮಾಲಿನಿ ಆರ್. ಪಾಲಕ್ಷ ಅಭಿನಂದಿಸಲಾಯಿತು.

 ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿದ. ಮಾತನಾಡಿದ ಸುಯೋಗ್ ಆಸ್ಪತ್ರೆ ಡಾ.ಎಸ್.ಪಿ ಯೋಗಣ್ಣ  ದೇಹದ ಮೂಳೆ,ಮಾಂಸ,ನರಗಳಲ್ಲಿ ಹೆಣ್ಣು-ಗಂಡಿನ ನಡುವೆ ಯಾವುದೆ ವ್ಯತ್ಯಾಸವಿಲ್ಲ.ಆದರೆ, ಹೆಣ್ಣಿನ ಭಾವುಕತೆ, ಭಾವನೆ, ಸೌಂದರ್ಯ, ಸಹನೆ ಪ್ರೀತಿಯಲ್ಲಿ ಭಾವಕ್ಕು ಹೆಣ್ಣು ಗಂಡಿನ ಭಾವಕ್ಕೂ ಅಜಗಜಾಂತರ ವ್ಯತ್ಯಸವಿದೆ. ಹೆಣ್ಣು ಸಹನೆ.ಪ್ರೀತಿ.ಕರುಣೆ.ಇವೆಲ್ಲಾ ತನ್ನ ಮಗುವಿನೊಂದಿಗೆ ಪ್ರೀತಿ ತೋರುತ್ತಾಳೆ ಎಂದು ಮಾತನಾಡಿದರು.

ಬಳಿಕ ಮಾತನಾಡಿದ ಚಾಮರಾಜನಗರ  ಮಾಜಿ ಸಂಸದ ಎಂ. ಶಿವಣ್ಣ ,ಮಾತನಾಡಿ ಮಹಿಳಾದಿನಾಚರಣೆ ಪ್ರಯುಕ್ತ ಇಂದು ಹಮ್ಮಿಕೊಂಡಿರುವ ಸಾಧಕರ ಸನ್ಮಾನ ಹಾಗೂ ಉಚಿತ ಆರೋಗ್ಯ ತಪಾಣಾ ಶಿಬಿರ ನಿಜವಾಗಲು ಸಂತಸದ ವಿಷಯ ಇಂದು ಕೂಡ ನನ್ನ ಹುಟ್ಟ ಹಬ್ಬದ ಇದ್ದು ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ ಈಗಲು ಕೂಡ  ನನಗೆ ಇಷ್ಟ ಇರಲಿಲ್ಲ ನನ್ನ ಮಕ್ಕಳು ಆಸೆಯಂತೆ ಇಂದು ಸರಳವಾಗಿ  ಹುಟ್ಟಹಬ್ಬ ಆಚರಣೆ ಮಾಡಿಕೊಂಡಿದ್ದೆನೇ. ಯಾವುದೇ ರೀತಿ ದಂದು ವೆಚ್ಚ ಮಾಡದೆ ಜೊತೆಗೆ ಸಮಾಜಕ್ಕೆ ಸಾರ್ವಜನಿಕರಿಗೆ ಹಿರಿಯ ನಾಗರೀಕರಿಗೆ , ಮಹಿಳೆಯರಿಗೆ ,  ಅನುಕೂಲವಾಗುವಂತೆ ಸುಯೋಗ. ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಕಾರ್ಯಕ್ರಮ ಮಾಡಿದ್ದು ನನಗೆ ನಿಜವಾಗಲು ಸಂತೋಷ ತಂದುಕೊಟ್ಟಿದೆ.  ಹಾಗೂ ನಮ್ಮೆಲರ ಪರಿಸರ ಕಾಪಾಡುವ ನಿಟ್ಟಿನಲ್ಲಿ ಪಾರ್ಕ ಬಳಿ ಗಿಡ ನೆಡುವ ಮೂಲಕ ನಾವುಗಳು ಪರಿಸರ ಸಂರಕ್ಷಣೆ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.
ಇದೆ ಸಂಧರ್ಭದಲ್ಲಿ ಮಾತನಾಡಿದ ಮಹೇಶ್ ನಾಯಕ್,ಹೆಣ್ಣಿನ ಬಗ್ಗೆ ಗೌರವವನ್ನು ಹೊಂದಿರುವಂತಹ ದೇಶ ನಮ್ಮದು. ನಮ್ಮ ದೇಶಕ್ಕಾಗಿ, ನಾಡಿಗಾಗಿ, ನೆಲ-ಜಲ ರಕ್ಷಣೆಗಾಗಿ  ಸ್ತ್ರಿಹೋರಾಟ ಮಾಡಿದ ದೇಶ ನಮ್ಮದು. ಕಿತ್ತೂರು ರಾಣಿ ಚೆನ್ನಮ್ಮ , ಒನಕೆ ಓಬವ್ವ,ಅಕ್ಕ ಮಹಾದೇವಿ,ಮಣ್ಣಿನಲ್ಲಿ ನಾನು ಹುಟ್ಟಿರುವುದು ಪುಣ್ಯ. ಆ ನೆಲದಲ್ಲಿ ನಡೆಯಬೇಕಾದ್ರೆ ಹೆಮ್ಮೆ ಅನಿಸುತ್ತೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ , ಡಾ. ಕೃಷ್ಣಮೂರ್ತಿಚಮರಂ, ಸನ್ಮಾನ ಮಾಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಕೆ.ರಘುರಾಂ, ವಾಜಪೇಯಿ ಹಿರಿಯ ಸಮಾಜ ಸೇವಕರು.ಮಡ್ಡೀಕೆರೆ ಗೋಪಾಲ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು.ಡಾ.ಎಸ್. ಪ್ರಭುಶಂಕರ್ ಸಂಸ್ಥಾಪಕರು, ಮೈಸೂರು ಮೆಡಿಕಲ್ ಸಿಸ್ಟಮ್ ಮೈಸೂರು.ಕಾರ್ಯಕ್ರಮದಲ್ಲಿ ಅನಂತ್,ರವಿ, ಭಗೀರಥ, ರಂಗನಾಥ, ಹೊಯ್ಸಳ ಕರ್ನಾಟಕ ಸಂಘದ ಕಾರ್ಯದರ್ಶಿ ಮಂಜು,ಸಾಹಿತಿ ಶ್ರೀಕಾಂತ್,ಮಂಜು ಶಿವರಾಮ್, ರಾಮಚಂದ್ರ,ಲಕ್ಷ್ಮಿಕಾಂತ್ ಶ್ರೀಕಾಂತ್,ಶಿವುಕುಮರ್, ಅವಿನಾಶ್,  ರಂಗನಾಥ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

2 Attachments