ಮೈಸೂರು-27 ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆ ಒಕ್ಕೂಟ ಮೈಸೂರು.ಇವರು 44ನೇ 2021-22 ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಮಂಗಳವಾರ ಸಂಜೆ ಹೋಟೆಲ್ ಲಿ ರುಚಿಯಲ್ಲಿ ಹಮ್ಮಿಕೊಂಡಿದ್ದರು. ತರುವಾಯ ದೀಪಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಲಯನ್ ಕೆ ದೇವೇಗೌಡ ಪಿ.ಎಂ.ಜೆ.ಎಫ್ ಮಾರ್ಗದರ್ಶಕರು ಹಾಗೂ ಮಾಜಿ ಜಿಲ್ಲಾ ರಾಜ್ಯಪಾಲರು ನೆರವೇರಿಸಿದರು
.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಯೋಗಿಶ್ ವಲಯ ಅಧ್ಯಕ್ಷರು ವಹಿಸಿದ್ದರು. ಹಾಗೂ ಘನ ಉಪಸ್ಥಿತಿಯಲ್ಲಿ ಲಯನ್ ಎನ್ ಸುಬ್ರಹ್ಮಣ್ಯ ಪಿ.ಎಂ.ಜೆ.ಎಫ್ ಜಿಲ್ಲಾ ಅಧ್ಯಕ್ಷರು ಲಿಯೋ,ಲಯನ್ ಡಾ.ಆರ್.ಡಿ.ಕುಮಾರ್ ಎಂ.ಜೆ.ಎಫ್.ಪ್ರಾಂತೀಯ ಅಧ್ಯಕ್ಷರು, ಲಯನ್.ಕೆ ಎಲ್ ರಾಜಶೇಖರ್ ಎಂ.ಜೆ.ಎಫ್ ಜಿಲ್ಲಾ ಸಲಹೆಗಾರರು,ಲಯನ್ ಎಲ್ ಮೋಹನ್ ಕುಮಾರ್ ಎಂ.ಜೆ.ಎಫ್ ಜಿಎಲ್ಟಿ ಕೋ ಆರ್ಡಿನೇಟರ್,ಮತ್ತಿತರು ಉಪಸ್ಥಿತರಿದ್ದರು.
ಲಯನ್ ಸುರೇಶ್ ರಾಮ್ ಪಿ.ಎಂ.ಜೆ.ಎಫ್ ಎರಡನೇ ಜಿಲ್ಲಾ ರಾಜ್ಯಪಾಲರು ಇವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.ಹೊಸ ಸದಸ್ಯರ ಸೇರ್ಪಡೆ ಅಧಿಕಾರಿಯಾಗಿ ಲಯನ್.ಎನ್ ಕೃಷ್ಣೇಗೌಡ ಎಂ.ಜೆ.ಎಫ್ ಜಿಲ್ಲಾಧ್ಯಕ್ಷರು ಪಿ.ಎಸ್.ಟಿ.ಫೋರಂ ಮತ್ತು ಪದಗ್ರಹಣ ಅಧಿಕಾರಿಯಾಗಿ ಲಯನ್ ಡಾ.ಜಿ.ಎ ರಮೇಶ್ ಪಿ.ಎಂ.ಜೆ.ಎಫ್ ಇವರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಾಗಿ ಲಯನ್ ರಂಜನ್ ಉದಯ್ ಕುಮಾರ್ ಎಂ.ಜೆ.ಎಫ್ ಅವರನ್ನು ಆಯ್ಕೆ ಮಾಡಲಾಯಿತು ,ನೂತನ ಕಾರ್ಯದರ್ಶಿಗಳನ್ನಾಗಿ ಲಯನ್ .ಗಂಗೋತ್ರಿಮಹೇಶ್ ಅವರನ್ನು ಪದಜವಬ್ದಾರಿ ವಹಿಸಲಾಯಿತು.ನೂತನ ಖಚಾಂಚಿಯಾಗಿ ಲಯನ್ ಜಿ.ಎನ್ ಪ್ರಸನ್ನ ಕುಮಾರ್ ಆಯ್ಕೆಗೊಂಡರು.