ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ದೈವೀವನದ ಉದ್ಯಾನವನದಲ್ಲಿ ಬೆಟ್ಟದಪುರ ನಾಗರಿಕ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಅರಣ್ಯ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.

ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಘು ಮಾತನಾಡಿ ಇಂದಿನ ಪೀಳಿಗೆ ಮುಂದೆ ಉಳಿಯಬೇಕಾದರೆ ನಾವೆಲ್ಲರೂ ಗಿಡ ಮರಗಳನ್ನು ನೆಟ್ಟು ಹಸಿರುಕರಣ ಮಾಡಿ ಅರಣ್ಯ ಪ್ರದೇಶವನ್ನು ರಕ್ಷಿಸಬೇಕು ಎಂದು ತಿಳಿಸಿದರು. ದೇಶದಲ್ಲಿ ಶೇಕಡ 33 ರಷ್ಟು ಅರಣ್ಯ ಪ್ರದೇಶವಿರಬೇಕುಆದರೆ ಶೇಕಡಾ 20 ರ ಆಸುಪಾಸಿನಲ್ಲಿದೆ ನಗರೀಕರಣ ಆಗುತ್ತಿರುವುದರಿಂದ ಮಾನವ ಅರಣ್ಯ ಪ್ರದೇಶವನ್ನು ನಾಶ ಮಾಡುತ್ತಿದ್ದಾನೆ ಇದು ವಿಷಾದನೀಯ ಎಂದರು.

ಬೆಟ್ಟದಪುರ ನಾಗರಿಕ ವೇದಿಕೆ ವತಿಯಿಂದ ಬೆಟ್ಟದಪುರ ಉಪ ವಲಯ ಅರಣ್ಯಾಧಿಕಾರಿ ಎಚ್. ಎನ್. ಮಹೇಶ್, ಹಾಗೂ ಪ್ರಾಂಶುಪಾಲ ರಘು, ಅರಣ್ಯ ರಕ್ಷಕ ರಾಚಪ್ಪ, ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಚ್. ಎನ್. ಮಹೇಶ್ ಬೇಸಿಗೆ ಸಮಯದಲ್ಲಿ ಸಾರ್ವಜನಿಕರೂ ಕೂಡ ಅರಣ್ಯ ಪ್ರದೇಶಗಳಿಗೆ ಬೆಂಕಿ ಬೀಳದಂತೆ ಜಾಗ್ರತೆ ವಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು. ಸಂದರ್ಭದಲ್ಲಿ ನಾಗರಿಕರಾದ ಸತೀಶ್ ಕುಮಾರ್ ಟಿ ಎಮ್, ಮಹಾದೇವಚಾರಿ,ಉಪನ್ಯಾಸಕ ರಾಜೇಶ್, ಪತ್ರಕರ್ತರ ಶಿವದೇವ್ , ಮೈಲಾರಿ ,ಮಂಜು , ಝಬಿ , ಬೇಕರಿ ಮಹೇಶ್ , ಸೈಯದ್ ಜೇಶನ್ ,ಹಾಗೂ ಸಾರ್ವಜನಿಕರು ಹಾಜರಿದ್ದರು.