ವರದಿ: ಪುರುಷೋತ್ತಮ್ ಅಗ್ನಿ.ಎಸ್
ಮೈಸೂರು.26 : ಇಂದಿನ ಯುವ ಶಕ್ತಿಯೇ ಭಾರತದ ಆಸ್ತಿ. ಯುವಶಕ್ತಿಯ ಮೇಲೆ ಮುಂದಿನ ಜನಾಂಗದ ಭವಿಷ್ಯವೆಲ್ಲ ನಿಂತಿದೆ ಎಂದು ಸ್ವಾಮಿ ವಿವೇಕಾನಂದರು ಘಂಟಾಘೋಷವಾಗಿ ನುಡಿದಿದ್ದರು. ಅದರಂತೆಯೇ ಇವತ್ತಿನ ಮಾಡರ್ನ್ ಯುಗದಲ್ಲಿ ಎಲ್ಲರೂ ಪಬ್ಬು- ಬಾರು ಮೋಜು ಮಸ್ತಿ ಎಂದು ಪಾನಮತ್ತರಾಗಿ ವೀಕೆಂಡ್ ಪಾರ್ಟಿಗಳಲ್ಲಿ ಕಳೆಯುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಾ ಇದ್ದೇವೆ ಮತ್ತು ಅದೇ ಟ್ರೆಂಡ್ ಬದುಕಿನ ಶ್ರೀಮಂತಿಕೆಯ ಲಕ್ಷಣ ಅಂತ ಇವತ್ತಿನ ಯುವ ಪೀಳಿಗೆಯು ಸಾಮಾನ್ಯವಾಗಿ ತಿಳಿದುಕೊಂಡು ಬಿಟ್ಟಿದೆ. ಆದರೆ ಪ್ರಿಯಂ ಭಾರತಂ ತತ್ ಸದಾ ಪೂಜನೀಯಮ್॥. ಅ ನ್ನುವ ಸಾಲಿನೊಂದಿಗೆ ಈ ಯುವತಿ ಇವತ್ತಿನ ಯುಗಕ್ಕೆ ತಕ್ಕಂತೆ ಇದ್ದರೂ – ಸಾಂಸ್ಕೃತಿಕ ನೋಟವನ್ನು ತನ್ನ ಬದುಕಿನಲ್ಲಿ ಕೊಟ್ಟು, ನವ ಯುವ ಭಾರತೀಯರಿಗೆ ನವ ಸ್ಪೂರ್ತಿಯ ಸೆಲೆಯಾಗಿ ನಿಂತಿರುವುದು ನಿಜಕ್ಕೂ ಅಸಾಮಾನ್ಯ ವಿಷಯ.
ಭಾರತ ಜೀವಂತಿಕೆ ಇರುವ ಏಕೈಕ ತಾಯ್ನಾಡು. *”ದೇಶ ಮೊದಲು ಎಂಬಂತೆ ಅವರು ಸ್ವಚ್ಛ ಭಾರತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದಲ್ಲದೇ ಎಷ್ಟು ಸಮಾಜಮುಖಿ ಹಾಗೂ ಎಲ್ಲದರ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯತೆಯ ಸಿದ್ಧಾಂತದ ಪ್ರತಿಪಾದಕಿಯು ಆಗಿರುವ ಇವರು ಅಪಾರ ದೇಶ ಭಕ್ತಿ,ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆ ಮತ್ತು ಸಿದ್ಧಾಂತಕ್ಕೆ ಬದ್ಧವಾಗಿ ನಡೆಯುವ ಈ ದಿಟ್ಟ ವ್ಯಕ್ತಿತ್ವದ ಶ್ರುತಿ ಅವರನ್ನು ಸಮಾಜದ ಹೃದಯದಲ್ಲಿ ವಿಶೇಷ ಸ್ಥಾನದಲ್ಲಿ ಗೌರವಿಸುತ್ತಿದೆ.
ತುಂಬ್ರಿ ಭಾಸ್ಕರ್ ಪೂಜಾರಿ ಮತ್ತು ಜಯಶ್ರೀ ಮಗಳಾಗಿರುವ ಇವರು, ತಂದೆ ಹೆಸರುವಾಸಿಯಾದ ಬಡಗುತಿಟ್ಟಿನ ಸಾಲಿಗ್ರಾಮ ಮೇಳದ ಯಕ್ಷಗಾನ ಕಲಾವಿದ. ಈ ಸುಸಂಸ್ಕೃತ ಮನೆಯಂಗಳವೇ ಶ್ರುತಿ ಅವರಿಗೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ದೇಶ ಭಕ್ತಿಯ ವಿಚಾರಧಾರೆಯ ಹಾಗೂ ವಿಶೇಷವಾಗಿ ಪ್ರವಾಸದ ಕಡೆಗೆ ಒಲವು ಹೆಚ್ಚಿ ಪ್ರಬಲ ಕರ್ತವ್ಯವಾಗಿ ಮಾರ್ಪಾಡಾಯಿತು.
ಬಾಲ್ಯದಿಂದಲೇ ಕ್ರೀಡೆಯಲ್ಲಿ ಬಹಳ ಆಸಕ್ತಿ ಇರುವ ಇವರು ರಾಷ್ಟ್ರ ಮಟ್ಟಕ್ಕೆ ನೆಟ್ ಬಾಲ್ ಕ್ರೀಡೆಯಲ್ಲಿ (2010&2012) ಎರಡು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿ ಗೈದ ಸಾಧನೆಯ ಅಪಾರ ಫಲದಿಂದ ಸಣ್ಣ ಗ್ರಾಮವಾದ ತುಂಬ್ರಿಯನ್ನು ದೇಶವೇ ತಿರುಗಿನೋಡುವಂತೆ ಮಾಡಿರುವ ಇವರ ವ್ಯಕ್ತಿತ್ವ ಸ್ಪೂರ್ತಿದಾಯಕ. ರಾಜಕೀಯದ ಕಡೆಗೆ ಹೆಚ್ಚಿನ ಒಲವು ಇರುವ ಇವರು ಅದರ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಿರುವುದರ ಜೊತೆಗೆ ಈಗ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಭಾರತೀಯ ಸಂಸ್ಕೃತಿ ಪರಂಪರೆ ಇತಿಹಾಸದ ಮೇಲೆ ಅಪಾರ ಶ್ರದ್ಧೆ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ಅಪಾರ ಭಕ್ತಿ ಹೊಂದಿರುವ ಇವರು, ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸುವುದನ್ನೇ ಒಂದು ಹವ್ಯಾಸವಾಗಿಸಿಕೊಂಡಿದ್ದಾರೆ. ಸದ್ಯ ರಜೆ ಸಿಕ್ಕಾಗಲೆಲ್ಲ ದಿನ ಕ್ಷಣವೆಣಿಸದೆ ಉತ್ತರ ಭಾರತದ ಹಿಮಾಲಯಗಳು, ಚಾರ್ ಧಾಮ್ ಯಾತ್ರೆ, ಕಾಡು, ಗುಡ್ಡ- ಬೆಟ್ಟಗಳು, ಕಣಿವೆಗಳು ವಾರಗಟ್ಟಲೆ ತಿಂಗಳುಗಟ್ಟಲೆ ಪ್ರವಾಸಗಳು ತೀರ್ಥಯಾತ್ರೆಗಳು ಉತ್ತುಂಗ ಶಿಖರ ಶ್ರೇಣಿಗಳ ತುತ್ತತುದಿಯನ್ನು ಮುಟ್ಟಿ ಕನ್ನಡ ಬಾವುಟವನ್ನು ನೆಟ್ಟು ಬರುವ ಕನ್ನಡತಿ ಚೆಲುವೆ ಇವರು.
ಹೀಗೆ ಸದಾ ಮನಸ್ಸಿಗೆ ಆಧ್ಯಾತ್ಮ- ಹಿಂದುತ್ವ ಹಾಗೂ ದೇಶ ಸೇವೆಯ ರೂವಾರಿ ಮತ್ತು ಸದಾ ಹಸನ್ಮುಖಿ ಸಂಪನ್ನೆಯಾದ ಶ್ರುತಿ ತುಂಬ್ರಿ ಹೆಣ್ಣು ಮಕ್ಕಳ ಅನರ್ಘ್ಯ ಸಾಧಕರ ಸಾಲಿನಲ್ಲಿ ಇರುವ ಎಲೆಮರದಕಾಯಿಯಂತೆ ತನ್ನ ಸೇವೆಯನ್ನು ಪ್ರಚಾರಬಯಸದೆ ಮಾಡುತ್ತಿರುವ ಶ್ರುತಿ ತುಂಬ್ರಿ ನಿಜಕ್ಕೂ ನವಯುವಪೀಳಿಗೆಗೆ ಸದಾಸ್ಪೂರ್ತಿ.