ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ವತಿಯಿಂದ ದಾಸ್ ಪ್ರಕಾಶ್ ಪಾರಡೈಸ್ ಹೋಟೆಲ್ ನಲ್ಲಿ ಆಗಸ್ಟ್ 1 ರಂದು ಬೆಳಿಗ್ಗೆ ತಮ್ಮ ಸಂಸ್ಥೆಯ ಕಾರ್ಯವೈಖರಿಯನ್ನು ಒಟ್ಟಾರೆಯಾಗಿ ನನೆದು ಮುಂದಿನ ಸಾಮಾಜಿಕ ಕೆಲಸಗಳಿಗೆ ಯೋಜಿಸಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದರು.ಈ ಕಾರ್ಯಕ್ರಮದ ಉದ್ಘಾಟಕರಾಗಿ ಪಿ.ಡಿ.ಸಿ.ಶ್ರೀಮತಿ ಚಂದ್ರಿಕಾ ರಘು ಹಾಗೂ ಮುಖ್ಯ ಅತಿಥಿಗಳಾಗಿ ಡಾ.ಧರಣಿದೇವಿ ಮಾಲಗತ್ತಿ (ಐ.ಪಿ.ಎಸ್)ಅಧ್ಯಕ್ಷೆ ಪ್ರತಿಭಾ ,ಕಾರ್ಯದರ್ಶಿ ಪ್ರೇಮರವಿ ಹಾಗೂ ಮತ್ತಿತ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಂಸ್ಥೆಯು ತನ್ನ ಪೂರ್ವ ಕಾರ್ಯಗಳನ್ನು ನೆನೆದು ಸಂತೋಷಪಟ್ಟಿತು.ಹಾಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳನ್ನು ಒಬ್ಬರಿಗೊಬ್ಬರು ಕೋರಿಕೊಂಡರು.

ವರದಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

By admin