ಹೆಚ್.ಡಿ ಕೋಟೆಯ ಸುತ್ತಮುತ್ತ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.ಹೆಗ್ಗಾಡಾಪುರದ ಗಣೇಶಾನಂದರರ ಮತ್ತು ಸತ್ತ ಮುತ್ತಲ ರೈತರ ಜಮೀನಿನಲ್ಲಿ ಕಳೆದ ರಾತ್ರಿ ಹಾಗೂ ಪ್ರತೀದಿನ ಬೆಳೆದ ,ಬಾಳೆ,ಗೆಣಸು,ಇನ್ನಿತರ ತರಕಾರಿಗಳ ಬೆಳೆಗಳನ್ನು ಕಾಡು ಹಂದಿಗಳು ರಾತ್ರೋರಾತ್ರಿ ದಾಳಿ ಹೂಡಿ ಬೆಳೆಯನ್ನೆಲ್ಲಾ ತಿಂದು.ಮತ್ತು ಸಸಿಗಳ ಬೇರುಗಳನ್ನು ಕಿತ್ತು ಬೆಳೆನಾಶ ಮಾಡಿವೆ.
ಈ ಬಗ್ಗೆ ಗಣೇಶಾನಂದರರು ತಮ್ಮ ಈ ದುಸ್ಥಿತಿಯನ್ನು ಹಂಚಿಕೊಂಡದ್ದು ಹೀಗೆ.ರೈತರು ಜಮೀನಿನ ಕಾವಲಿಗೆ ಬಂದರೂ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ.ಹಾಗು ಕಾಡು ಪ್ರಾಣಿಗಳನ್ನು ಒಡಿಸಲು ಯಾವುದಾದರೂ ಕ್ರಮ ಕೈಗೊಂಡರೆ ಕಾಡು ಪ್ರಾಣಿಗಳನ್ನು ಹತ್ಯೆಮಾಡಿದ ಆರೋಪದ ಅಡಿಯಲ್ಲಿ ಅರಣ್ಯ ಇಲಾಖೆಯವರು ಕಠಿಣ ಶಿಕ್ಷೆ ನೀಡುತ್ತಾರೆ.
ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳ ತಡೆಗಟ್ಟವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ ಈ ರೀತಿಯ ಬೆಳೆನಾಶಕ್ಕೆ ಸರ್ಕಾರ ತೋರುವ ಸಹಾಯಧನ ಸರಿಯಾದ ರೀತಿಯಲ್ಲಿ ರೈತರಿಗೆ ತಲುಪುತ್ತಿಲ್ಲ.ಜೊತೆಗೆ ತಲುಪಿದರೂ ಸಾಲ ಮಾಡಿ ಬೆಳೆದ ಬೆಳೆಗೆ ಲಾಭ ದಕ್ಕುವುದಿಲ್ಲ.ಇದರಿಂದ ಹೊಲ ಮನೆ ಮಾರುವ ಪರಿಸ್ಥಿತಿ ರೈತರಿಗೆ ಬರುತ್ತಿದೆ.ಹಾಗಾಗಿ ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಸಲಹೆ ಮತ್ತು ಪರಿಹಾರವನ್ನು ನೀಡಬೇಕೆಂದು ರೈತರು ತಿಳಿಸಿದರು.ಸರ್ಕಾರದ ಸಂಬ0ಧಪಟ್ಟ ಅಧಿಕಾರಿಗಳು ಬಹುಬೇಗ ಪರಿಹಾರ ನೀಡಲಿ.