ಭಾರತದಲ್ಲಿ ಸನಾತನ ಧರ್ಮವು ಎರಡುಬಾರಿ ಅವಸಾನದ ಅಂಚಿನಲ್ಲಿತ್ತು! ಮೊದಲಿಗೆ, ಕ್ರಿ.ಪೂ.೨೩೦ರಿಂದ ಕ್ರಿ.ಶ.೭೨೦ವರೆಗೆ ಬೌದ್ಧಧಮ್ಮವು ಬೃಹದಾಕಾರವಾಗಿ ಬೆಳೆದು ದೇಶಾದ್ಯಂತ ಆವರಿಸಿಕೊಂಡ ಆಪತ್ಕಾಲದಲ್ಲಿ ಕಾಲಾಡಿಯಲ್ಲಿ ಜನಿಸಿ ಅಲ್ಪಾವಧಿ ಬದುಕಿದ್ದ ೪೮ವರ್ಷದ ಪೈಕಿ ೨೪ವರ್ಷಾವಧಿಯಲ್ಲಿ ೨೪೦೦ವರ್ಷಕ್ಕಾಗುವಷ್ಟು ಹಿಂದೂಧರ್ಮ ಪುನರುತ್ಥಾನ ಸಾಧನೆಗೈದ ಆದಿಗುರು ಶಂಕರಾಚಾರ್ಯ! ಎರಡನೆಬಾರಿ ಕ್ರಿ.ಶ.೧೪೫೦-೧೮೮೦ವರೆಗೆ ಇಸ್ಲಾಂ-ಕ್ರೈಸ್ತಧರ್ಮವು ಅಷ್ಟದಿಕ್ಕುಗಳಲ್ಲಿ ಚಾಚಿಕೊಂಡಿದ್ದ ಆಪತ್ಕಾಲದಲ್ಲಿ ಅವತರಿಸಿ ಹಿಂದೂಧರ್ಮ ಪುನರುದ್ಧಾರ ಮಾಡಿದ ಪುಣ್ಯಪುರುಷ ಸ್ವಾಮಿವಿವೇಕಾನಂದ! ೧೨.೧.೧೮೬೩ರಂದು ಕಲ್ಕತ್ತಾದಲ್ಲಿ ಜನಿಸಿದ ನರೇಂದ್ರನಾಥದತ್ತ ೩೯ವರ್ಷ ಮಾತ್ರ ಜೀವಿಸಿ, ೧.೫.೧೮೯೭ರಂದು ರಾಮಕೃಷ್ಣಮಿಶನ್ ಸ್ಥಾಪಿಸಿ,೧೮೯೮ರಲ್ಲಿ ಫ಼್ಲೇಗ್ ಸೋಂಕಿತರ ಸೇವೆಗೈದು,ಕಲ್ಕತ್ತಾದಲ್ಲೆ ೪.೭.೧೯೦೨ರಂದು ಸಂಸ್ಥಾಪಿಸಿದ್ದ ಬೇಲೂರು ಮಠದಲ್ಲಿ ದೇಹದಿಂದ ಆತ್ಮವನ್ನು ಲೋಕಾರ್ಪಣೆ ಮಾಡಿಕೊಂಡರು.  ದ್ವಾಪರಯುಗದ ಭೀಷ್ಮನಂತೆ ಇಚ್ಛಾಮರಣ ಹೊಂದಿದ ಕಲಿಯುಗದ ಏಕೈಕ ಜೀವಾತ್ಮ!

ರಾಮಕೃಷ್ಣ ಪರಮಹಂಸ – ಅರಳಿಮರ

ಶಾರದಾದೇವಿಯ ಮಾನಸಪುತ್ರರಾಗಿ ರಾಮಕೃಷ್ಣ ಪರಮಹಂಸರ ಶಿಷ್ಯೋತ್ತಮನಾಗಿ ಸರ್ವಧರ್ಮ ಪಾಂಡಿತ್ಯ ಪಡೆದರು. ಗುರುಗಳ ಆಂತರ್ಯದ ಗಂಭೀರ ಆಶೋತ್ತರಗಳನ್ನು ಈಡೇರಿಸಲು, ಹಿಂದೂಗಳ ಅಸಹಾಯಕ ಅನಿವಾರ್ಯ ಅಸಹನೀಯ ಸ್ಥಿತಿಗತಿಗಳನ್ನು ತೊಲಗಿಸಲು, ಅನ್ಯಧರ್ಮದ ರಕ್ತಕ್ರಾಂತಿ ಸೂಕ್ಷ್ಮತೆಯ ಇಂಗಿತವರಿತು ತಮ್ಮದೇ ಅಪೂರ್ವ ಆಧ್ಯಾತ್ಮಿಕ ಹಾದಿಯಲ್ಲಿ ಮುನ್ನುಗ್ಗಿ ಕಡಿಮೆ ಅವಧಿಯಲ್ಲಿ ಸನಾತನ ಧರ್ಮದ ಜೀರ್ಣೋದ್ಧಾರಗೊಳಿಸಿ ಶಾಶ್ವತನೆ[ಸೆ]ಲೆ ಪುನರ್‌ಸ್ಥಾಪಿಸಿದ ಮಹಾಮಾನವ. ೧೮೯೪-೯೫: ಐರೋಪ್ಯ ರಾಷ್ಟ್ರಗಳಲ್ಲಿ ಧರ್ಮಪ್ರಚಾರದಲ್ಲಿದ್ದಾಗ ದೇಶ ಆಳುವವರು ಕೈ-ಬಾಯಿ-ಕಚ್ಛೆ ಪರಿಶುದ್ಧವಾಗಿರಿಸಿಕೊಳ್ಳುವುದು ಹೇಗೆ? ವಿಷಯದ ಬಗ್ಗೆ ಎರಡುದಿನದ ಅಂತಾರಾಷ್ಟ್ರೀಯ ಕಮ್ಮಟ ಫ಼್ರಾನ್ಸ್ ರಾಜಧಾನಿಯಲ್ಲಿ ಏರ್ಪಾಡಾಗಿತ್ತು. ಜಗತ್ತಿನಲ್ಲೆ ಪ್ಯಾಶನ್-ಫ಼್ಯಾಶನ್ ಸೃಷ್ಟಿಯಾಗುವ  ಪ್ಯಾರಿಸ್[ರಸಿಕ] ನಗರದ ರೆಡ್‌ಲೈಟ್ ಏರಿಯಾದ ನೂರಾರು ವೇಶ್ಯೆಯರ, ದಾಸ್ಯಸ್ತ್ರೀಯರ, ಸಲಿಂಗಪ್ರೇ[ಕಾ]ಮಿಗಳ ತನು-ಮನ ಮಾರ್ಪಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರ ಜೀವನ ಪಾವನಗೊಳಿಸಿದ ಅದ್ಭುತಜೀವಿ! ಅಲ್ಲಿಯ ಆಡಳಿತಶಾಹಿ ಬಂಡವಾಳಶಾಹಿ ಸರ್ವಾಧಿಕಾರ ದೊರೆ/ಸರ್ಕಾರದ ಆಡಳಿತ ಶೈಲಿಯನ್ನೆ ಬದಲಾಯಿಸಿದ ಅಮೋಘಮಾಂತ್ರಿಕ. ತನ್ನ ಆಧ್ಯಾತ್ಮಿಕ ನಡೆ-ನುಡಿಯಿಂದ ಎಂಥವರನ್ನೂ ಪರಿವರ್ತನೆ ಗೊಳಿಸಿದ, ಅವರ ಪ್ರಶ್ನೆಗಳಿಗೆ ಸಮಂಜಸ ಉತ್ತರನೀಡಿದ ಭಾರತಾಂಬೆಯ ವರಪುತ್ರ. ಮಾತಿನಮಲ್ಲರಿಂದ ತುಂಬಿಹೋಗಿದ್ದ ಪ್ರವಚನ ಸ್ಥಳದಿಂದ ಸದ್ದುಗದ್ದಲವಿಲ್ಲದೆ ಬೀದಿಗಿಳಿದ ಭಾರತದರತ್ನ ಕಾರ್ಯತಃ ಸಾಧಿಸಿ Deeds

are better than Words ಎಂಬುದನ್ನು ರುಜುವಾತು ಪಡಿಸಿದರು. ಫ಼್ರಾನ್ಸ್ ಪ್ರಧಾನಿ, ಅತಿರಥಮಹಾರಥರ ಸಮ್ಮುಖದಲ್ಲಿ Spiritual Stalwart’ ಬಿರುದುನೀಡಿ ಸನ್ಮಾನಿಸಿದಾಗ ಹೊಮ್ಮಿದ ಕರತಾಡನ ಸದ್ದು ಆಗಸ ತಲುಪಿ, ಜೈಕಾರ ತರಂಗ ಧ್ರುವಗಳನ್ನು ತಲುಪಿತು.  ಭರತಭೂಮಿಯಿಂದ ಹೊಸಲೌಕಿಕಕ್ರಾಂತಿ ಅಗ್ನಿಪರ್ವತವೊಂದು ಸ್ಫೋಟಗೊಂಡು ಈಜಿಪ್ಟ್ ಗ್ರೀಕ್ ರೋಮ್ ಮತಪ್ರಚಾರ ಪ್ರತಿನಿಧಿಗಳ ರೋಮರೋಮದಲ್ಲು ಸಂಚಲನಮೂಡಿಸಿ ದಿಗಿಲುಗೊಳಿಸಿತ್ತು! ಚೀನಾದಲ್ಲಿ Universal Soldier   ಹೊಗಳಿ ಇವರ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ ರಾಜಕುಮಾರ ಈ-ಹುವಾನ್‌ನಿಂದ ಬೀಳ್ಕೊಂಡು ಇಂಗ್ಲೆಂಡ್-ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದರು.

ಕನ್ನಡ ಸುದ್ದಿOne | ವಿಭಿನ್ನ ಸುದ್ದಿ- ಸಮಗ್ರ ಮಾಹಿತಿ | ನರೇಂದ್ರನಾಥದತ್ತ ಭಾರತದ  ವಿವೇಕಾನಂದ ಆಗಿದ್ದು ಹೇಗೆ?

೧೮೯೩ರಲ್ಲಿ ಭಾರತದ ಪ್ರತಿನಿಧಿಯಾಗಿ ಶಿಕಾಗೊ ನಗರದ ‘ವಿಶ್ವ ಸರ್ವಧರ್ಮ ಸಮ್ಮೇಳನ’ದಲ್ಲಿ ಆಡಿದ ಪ್ರಪ್ರಥಮ ಪದಗಳು ‘ಅಮೆರಿಕದ ಸೋದರ ಸೋದರಿಯರೆ’ ಬೈಬಲ್[ವೇದ]ವಾಕ್ಯಗಳಾದವು. ೭೫ಬೇರೆಬೇರೆ ರಾಷ್ಟ್ರಗಳಿಂದ ಭಾಗವಹಿಸಿದ್ದ ಪ್ರತಿನಿಧಿಗಳಾದಿಯಾಗಿ ನೆರೆದಿದ್ದ ಎಲ್ಲರೂ ಇವರ ಅನುಯಾಯಿಗಳಾಗಿ ಹಿಂದೂಧರ್ಮ ಜಪಿಸುತ್ತ ಮತಾಂತರ ಹೊಂದಲು ತೀರ್ಮಾನಿಸಿದ್ದರು?! ಪ್ರವಚನಕ್ಕೆ ಮುನ್ನ ಉಚ್ಛರಿಸಿದ Brothers & Sisters of America ವಾಕ್ಯವು ಅಮೆರಿಕನ್ನರನ್ನು ರೋಮಾಂಚನಗೊಳಿಸಿದ್ದು ಮಾತ್ರವಲ್ಲ ಪ್ರಪಂಚದಲ್ಲೆ ಸಂಚಲನ ಮೂಡಿಸಿ ಹೊಸಇತಿಹಾಸ ಬರೆಯಿತು! ಸಮ್ಮೇಳನದ ಎಲ್ಲದಿನವೂ ಕೇಂದ್ರ ಬಿಂದುವಾಗಿದ್ದ ನರೇಂದ್ರ ಅಲ್ಲಿದ್ದವರಿಗಷ್ಟೆ ಅಲ್ಲ ರೇಡಿಯೊ-ಟಿವಿ- ಪತ್ರಿಕೆ ಮೂಲಕ ಪ್ರವಚನ ಆಲಿಸುತ್ತಿದ್ದ ಪ್ರಪಂಚದ ಎಲ್ಲರಿಗೂ ಆಪ್ಯಾಯಮಾನರಾದರು. ವಿವೇಕವಾಣಿಯ ವೈಖರಿ ಭಾವಾರ್ಥ ಸಾರಾಂಶ ಅರಿತ ಮನುಕುಲದ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು, ಗಗನ ತಟ್ಟಿತ್ತು! ಧರ್ಮಾತೀತ, ದೇಶಾತೀತ, ಪ್ರಶ್ನಾತೀತವಾಗಿ ಎಲ್ಲರನ್ನು ಕಾಡಿದ್ದು ಎಲ್ಲರಿಗು ಅನಿಸಿದ್ದು ಎಲ್ಲರು ತೀರ್ಮಾನಿಸಿದ್ದು ‘ಈತ ಸೃಷ್ಟಿಕರ್ತನೇ ಇರಬೇಕು?!’ ದುಷ್ಟರ ಶಿಕ್ಷೆಗೆ ಶಿಷ್ಟರ ರಕ್ಷಣೆಗೆ ಬಂದಿದ್ದು ನಮ್ಮನ್ನು ಸರಿದಾರಿಗೆ ಕರೆದೊಯ್ದು ಕಾಪಾಡಬಹುದು ಎಂದುಮುಂತಾಗಿ ಗಲ್ಲಿಗಲ್ಲಿಯಲ್ಲು ಚರ್ಚೆನಡೆದಿತ್ತು, ವಿಶ್ವದಾದ್ಯಂತ ಪ್ರತಿಯೊಬ್ಬರ ಮನದಾಳ ತಲುಪಿ ಮೌ[ಜಾ]ಢ್ಯರ ಮೆದುಳಿಗೂ ಕಸರತ್ತು ನೀಡಿತ್ತು ಭಾರತಭೂಶಿರ ಬಂಡೆಯತಾಕತ್ತು! ೧೮೯೨ರಲ್ಲಿ ಕನ್ಯಾಕುಮಾರಿ ಬಂಡೆ ತಲುಪಿದ ಲೋಕಮಾನ್ಯ ಹಿಮಾಲಯದೆಡೆಗೆ ಮುಖಮಾಡಿ ಕೈಜೋಡಿಸಿ ಪ್ರಾರ್ಥಿಸುತ್ತಾ: ‘ಓ..ನನ್ನ ಹಿಂದೂ ದೇಶದ ಸೋದರ ಸೋದರಿಯರೆ ಏಳಿಎದ್ದೇಳಿ ನಿಮ್ಮಗುರಿ ತಲುಪಲು ನೀವೆ ಕಾರಣವೂ ಸ್ಫೂರ್ತಿಯೂ ಚೈತನ್ಯವೂ ಆಗಿರುವಿರಿ, ಅನ್ಯರನ್ನು ಅವಲಂಬಿಸದೆ, ಹಿಂದಿರುಗಿನೋಡದೆ, ಮುನ್ನುಗ್ಗಿನಡೆಯಿರಿ, ಖಂಡಿತ ಗುರಿಮುಟ್ಟುವಿರಿ’ ಎಂದು ಕೂಗಿಕೂಗಿಹೇಳಿ ಹಿಂದೂದೇಶದ ಎಲ್ಲರು ಒಗ್ಗೂಡುವಂತೆ ಭಾರತೀಯರನ್ನು ಬಡಿದೆಬ್ಬಿಸುವ ಸಿಂಹಘರ್ಜನೆಯ ಕರೆಕೊಟ್ಟ ಪುರುಷೋತ್ತಮ. ಒಂದು ಶತಮಾನದ ನಂತರ ಭಾರತ ಸರ್ಕಾರವು ‘ವಿವೇಕಾನಂದ ಸ್ಮಾರಕ’ ನಿರ್ಮಿಸಿ ಶ್ರದ್ಧಾಂಜಲಿ ಗೌರವ ಸಲ್ಲಿಸಿತು!

Swami Vivekananda Information In Kannada | ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

ತನ್ನ ಆಧ್ಯಾತ್ಮಿಕ ಆಯಸ್ಕಾಂತದಿಂದ ಹಿಂದೂಸ್ತಾನವನ್ನಷ್ಟೆ ಅಲ್ಲ ಪ್ರಪಂಚವನ್ನೆ ತನ್ನತ್ತ ತಿರುಗಿಸಿಕೊಂಡ ಜಗದೇಕವೀರಸನ್ಯಾಸಿ. ಪ್ರವಾಸದ ಅವಧಿಯಲ್ಲಿ ತಮ್ಮನ್ನು ಪ್ರೀತಿಸಿದ ನೂರಾರು ಸುಂದರಿಯರ ಜಾಲಕ್ಕೆ ಸಿಲುಕದೆ, ಅವರಿಗೂ ಸನ್ನಡತೆ ಕಲಿಸಿ, ‘ನ್ಯಾಯಕ್ಕಾಗಿ ಯಾರ [ಯಾವುದ]ನ್ನಾದರು ಅಂತ್ಯಗೊಳಿಸುವುದು ಧರ್ಮವಾಗುತ್ತದೆ’ ಎಂಬ ತಿಳುವಳಿಕೆ ನೀಡಿ ಮನಃಪರಿವರ್ತನೆ ಮಾಡಿದ ಲೋಕೋದ್ಧಾರಕ. ಇಂಥ ಅನೇಕ ನಿದರ್ಶನಗಳಿದ್ದು ಅವುಗಳಲ್ಲೊಂದು ಉಧಾ:- ಐರಿಶ್ ಲೇಖಕಿ,ಚಿಂತಕಿ,ಶಿಕ್ಷಕಿ,ಪತ್ರಕರ್ತೆ,ಧರ್ಮಪ್ರವರ್ತಕಿ, ಮಾರ್ಗರೆಟ್ ಎಲಿಜ಼ಬೆತ್‌ಳನ್ನು ನಿವೇದಿತಾಳನ್ನಾಗಿ ಪರಿವರ್ತಿಸಿದ ಭರತಖಂಡದ ಅಖಂಡಬ್ರಹ್ಮಚಾರಿ! ಐಶಾರಾಮಿ ಜೀವನದ ಆಸೆಆಮಿಷ ಭೋಗಲಾಲಸೆ ಅವಕಾಶಗಳು ದೊರಕಿದರೂ ‘ನಿನ್ನೆಗಳ ನೆರಳು, ನಾಳೆಗಳನ್ನು ಕತ್ತಲು ಮಾಡಬಾರದು’ ಎಂಬ ತತ್ವಾಧಾರದ ಹರಿಕಾರ ತಮ್ಮ ಅಚಲ ನಿರ್ಧಾರ ಧೃಢವಿಶ್ವಾಸ ಬದಲಿಸಲಿಲ್ಲ. ಇಂಥ ಅಸಾಧಾರಣ ಭುವನಜ್ಯೋತಿ ಪುಣ್ಯಾತ್ಮನ ಬದುಕು,ಬರಹ,ಉಪನ್ಯಾಸ,ಹೋರಾಟ,ಸಾಧನೆ, ಸಾರ್ಥಕತೆ,ಸಮರ್ಥತೆ,ತ್ಯಾಗ,ಬಲಿದಾನಬಗ್ಗೆ ಬರೆಯಲು ನೂರಾರು ಪುಟಗಳು ಬೇಕು. ಪ್ರತಿಯೊಂದು ದೇಶ[ಧರ್ಮ]ದ ನಾಡಿಮಿಡಿತವಾಗಿ ಉತ್ತಮಜೀವನ ನಡೆಸಲು, ಪ್ರತಿಪ್ರಶ್ನೆಗೂ ಉತ್ತರ, ಪ್ರತಿಸಮಸ್ಯೆಗೂ ಪರಿಹಾರ, ಶಾಶ್ವತವಾಗಿ ಇದರಲ್ಲಿದೆ. ಇವುಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸಿದರೆ ಸರ್ವಧರ್ಮವೂ ವಿವೇಕ[ಮಾನವ] ಧರ್ಮವಾಗಿ ರೂಪುಗೊಂಡು, ವಿಶ್ವದಾದ್ಯಂತ ಶಾಂತಿ-ನೆಮ್ಮದಿ-ಸೌಹಾರ್ಧತೆ ನೆಲೆಯೂರಿ ಪ್ರತಿಯೊಂದು ರಾಷ್ಟ್ರ[ಧರ್ಮ]ವೂ ಉದ್ಧಾರವಾಗುತ್ತದೆ?!

ಆಚಂದ್ರಾರ್ಕ ವಿರಾಜಮಾನರಾಗಿ ವಿಜೃಂಭಿಸುವ ವಿರಾಟ್ ವ್ಯಕ್ತಿಯ ದಿವ್ಯ ಸಂದೇಶಗಳ ಉದಾ:-

ಆಧ್ಯಾತ್ಮಿಕ ಜೀವನ ಅನುಸರಿಸುವ ೧೦೦ ಜನರಪೈಕಿ ೮೦ ಜನರು ಆಷಾಢಭೂತಿ[ಸೋಗಲಾಡಿ], ೧೫ ಜನರು ಮತಿಭ್ರಮಿತರು, ಇನ್ನುಳಿದ ಕೇವಲ       ೫ ಜನರು ಮಾತ್ರ ಸತ್ಯದರ್ಶನ ಮಾಡಬಹುದು?!

ಹೇ ಭಗವಾನ್, ಬೇರೆ ಬೇರೆ ಕಡೆ ಹುಟ್ಟಿದ ನದಿಗಳು ಸಾಗರದಲ್ಲಿ ಸಂಗಮಗೊಳ್ಳುವಂತೆ ಮಾನವರು ನೇರವಾಗಿಯೊ ವಕ್ರವಾಗಿಯೊ ಇರುವ ಪಥಗಳನ್ನು ಅನುಸರಿಸುತ್ತಾರೆ, ಅವೆಲ್ಲವೂ ನಿನ್ನೆಡೆಗೆ ಕರೆದೊಯ್ಯುತ್ತವೆ.

ಪ್ರತಿಯೊಂದು ಆತ್ಮದಲ್ಲಿಯೂ ದಿವ್ಯತೆ ಹುದುಗಿದೆ. ಈ ಸುಪ್ತದಿವ್ಯತೆಯನ್ನು ಬಾಹ್ಯ-ಆಂತರಿಕ ಪ್ರಕೃತಿಯ ನಿಗ್ರಹದಿಂದ ವ್ಯಕ್ತ ಪಡಿಸುವುದೇ ಜೀವನದ ಗುರಿ. ಇದನ್ನು ಕರ್ಮಯೋಗದಿಂದಾಗಲಿ, ಭಕ್ತಿಯೋಗದಿಂದಾಗಲಿ, ರಾಜಯೋಗದಿಂದಾಗಲಿ, ಜ್ಞಾನಯೋಗದಿಂದಾಗಲಿ, ಯಾವುದಾದರೊಂದು ಮಾರ್ಗದಿಂದ ಅಥವ ಇವೆಲ್ಲ ಮಾರ್ಗಗಳ ಸಂಯೋಗದಿಂದಾಗಲಿ ಸಾಧಿಸಿ ಮುಕ್ತರಾಗೋಣ.  ಇದೇ ನಿಜವಾದ ಧರ್ಮದ ಸರ್ವಸ್ವ ಸಿದ್ಧಾಂತ ನಂಬಿಕೆ ಅಂತರಂಗ-ಬಹಿರಂಗದ ಆಚಾರ-ವಿಚಾರ!

ಒಪ್ಪೊತ್ತಿನ ಅನ್ನಬಟ್ಟೆ ನೀಡದ ವೇದಾಂತ, ಪವಿತ್ರಗ್ರಂಥ, ಮೂಢನಂಬಿಕೆ, ವಾಮಾಚಾರ, ದೇವಸ್ಥಾನ, ಹರಕೆ, ವಿಗ್ರಹ, ಆರಾಧನೆ, ಆಣೆಪ್ರಮಾಣ, ಪ್ರತಿಜ್ಞೆ, ನಾಕ-ನರಕ, ಎಲ್ಲವೂ ಗೌಣ.

ದುರ್ಬಲರಿಗೆ ಈ ಜನ್ಮ ಅಥವ ಯಾವುದೇ ಜನ್ಮದಲ್ಲೇ ಆಗಲಿ ಸ್ಥಳವಿಲ್ಲ. ಏಕೆಂದರೆ, ದುರ್ಬಲತೆಯು ಗುಲಾಮಗಿರಿಗೆ ದಾರಿಯಾಗುತ್ತದೆ ಮತ್ತು ಎಲ್ಲಾ ರೀತಿಯ ಭೌತಿಕ-ಮಾನಸಿಕ ಕಷ್ಟಗಳಿಗೆ ಎಡೆ ಮಾಡಿಕೊಡುತ್ತದೆ.  ಆದ್ದರಿಂದ, ದುರ್ಬಲತೆಯೇ ನಿಜವಾದ ಸಾವು!

ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವ ವಿವೇಕಾನಂದ ವಾಣಿಗಳನ್ನು ಒಂದೆಡೆ ಕಲೆಹಾಕಿ ಸಂಗ್ರಹಯೋಗ್ಯ ಕೈಪಿಡಿ ಮಾಡಬಹುದು. ಈಗಲೂ ಇವುಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡು ಸಿದ್ಧಾಂತ ನೆಲೆಗಟ್ಟಿನ ಸುಖಜೀವನ ಹೊರೆಯುತ್ತ ಪ್ರಾಮಾಣಿಕವಾಗಿ ಆರಾಧಿಸಬಹುದು, ಜೈಹೋ.. ವಿವೇಕಾನಂದ…!

                          ವಿವೇಕಾನಂದರ ಬಗ್ಗೆ ಜಗತ್‌ಗಣ್ಯರ ನುಡಿಮುತ್ತುಗಳು:-

ವಿಶ್ವದ ಜ್ಞಾನಿ ವಿವೇಕದ ವಿಜ್ಞಾನಿ – ಅಮೆರಿಕ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟ್ ಅಜ್ಞಾನದಿಂದ ಜ್ಞಾನದೆಡೆಗೆ, ಅಹಂಕಾರದಿಂದ ನಿರಹಂಕಾರದೆಡೆಗೆ, ಮನುಕುಲ ಕರೆದೊಯ್ದ ಅವತಾರ ಪುರುಷ

-ಬ್ರಿಟನ್ ದೇಶದ ದೊರೆಜಾರ್ಜ್-ರಾಣಿಎಲಿಜ಼ಬೆತ್

ಶತಮಾನಗಳಿಂದ ತಣ್ಣಗಿದ್ದ ನಮ್ಮ ದೇಶಕ್ಕೆ ಧರ್ಮ ಜಾಗೃತದ ಬಿಸಿ ಮುಟ್ಟಿಸಿದ ಪರ್ಯಾಯ ಸೂರ್ಯ -ರಷ್ಯಾ ದೇಶದ ಲೆನಿನ್  ಅನುಭವಾಮೃತದ ಅಪರೂಪದ ಅನರ್ಘ್ಯರತ್ನ -ಇಟಲಿ ದೇಶದ ಪ್ರಧಾನಿ ಮುಸಲೋನಿ ನಾಸ್ತಿಕ ಚಕ್ರವರ್ತಿಯಾಗಿದ್ದ ನನ್ನನ್ನು ಆಸ್ತಿಕ ಸೈನಿಕನನ್ನಾಗಿಸಿದ ಪರಿವರ್ತಕ  -ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್   ಮತಾಂಧರ ಅಧಿಕಾರಾಂಧರ ಸ್ವಾರ್ಥ ದೂರಮಾಡಬಲ್ಲ ರಿಯಲ್ ಕಾಮ್ರೇಡ್ -ಚೀನಾದ ಕ್ರಾಂತಿಕಾರಿ ಮಾವೋತ್ಸೆತುಂಗ್ ಸೂರ್ಯನಿಂದ ಕತ್ತಲೆ ದೂರವಾಗುವಂತೆ ನರೇಂದ್ರನಿಂದ ಅಜ್ಞಾನ ದೂರವಾಗಿ ಜ್ಞಾನ ಬೆಳಗಿತು -[ಈವಿಆರ್]ಪೆರಿಯಾರ್ಮೌಢ್ಯದ ಭೂತ ಓಡಿಸಿ ಮನುಷ್ಯ ಧರ್ಮದ ದೇವತೆ ಪ್ರತಿಷ್ಠಾಪಿಸಲು ಜೀವನವನ್ನೆ ಮುಡಿಪಾಗಿಟ್ಟ ನಮ್ಮ ಹಿರಿಯಣ್ಣ -ಅರವಿಂದೊಘೋಶ್  ಅಂದಿನ ವಿವೇಕವಾಣಿಯ ಪ್ರತಿಧ್ವನಿಯಿಂದ ಪ್ರಪಂಚವೆ ಕೆಲಕಾಲ ಸ್ತಬ್ಧಗೊಂಡಿತ್ತು -ಸರ್ದಾರ್‌ಪಟೇಲ್ ತನ್ನನ್ನು ಮೋಹಿಸಿದ ಮೋಹಿನಿಯ ಮನಃಪರಿವರ್ತನೆ ಮಾಡಿದ ಜಗದೋದ್ಧಾರಕ -ಸರೋಜಿನಿನಾಯ್ಡು ಕೋವಿಗುಂಡು ದಂಡುದಾಳಿ ಇಲ್ಲದೆ ವಿಶ್ವದ ಧರ್ಮಯುದ್ಧ ಗೆದ್ದ ಆಧ್ಯಾತ್ಮಿಕ ವೀರಯೋಧ -ಸುಭಾಶ್‌ಚಂದ್ರಬೋಸ್ನರೇಂದ್ರನಂತಹ ಮಾನವತಾವಾದಿ ಧರ್ಮಪ್ರವರ್ತಕ  ‘ನ ಭೂತೋ ನ ಭವಿಷ್ಯತೀ’ -ರವೀಂದ್ರನಾಥಠಾಗೋರ್ವಿಶ್ವಧರ್ಮದ ಪ್ರತೀಕ, ಸನಾತನ ಹಿಂದೂಧರ್ಮದ ಪುನರ್‌ಸ್ವಾತಂತ್ರ್ಯ ಯೋಧ -ಬಾಲಗಂಗಾಧರತಿಲಕ್ನಾನು ಭಾರತಕ್ಕೆ ಸ್ವತಂತ್ರ ಕೊಡಿಸಿರಬಹುದು, ನನಗೂ ಮುಂಚೆ ಭಾರತ ಧರ್ಮಕ್ಕೆ ಸ್ವತಂತ್ರ ಕೊಡಿಸಿದ ಯೋಧ -ಮಹಾತ್ಮಗಾಂಧೀಜಿ ಭಾರತೀಯ ಎಂಬ ಪದಕ್ಕೆ ಅನ್ವರ್ಥ, ಸನಾತನ ಸಂಸ್ಕೃತಿ ಪರಂಪರೆಯ ಜ್ಞಾನಸೂರ್ಯ -ಕಿಂಗ್‌ಮೇಕರ್ ರಾಜಾಜಿ ನಾನು ಕಂಡ ಜಗತ್ತಿನ ಮೊಟ್ಟಮೊದಲ ವಿಶ್ವಮಾನವ -ರಾಷ್ಟ್ರಕವಿಕುವೆಂಪು ವಿಶ್ವದಾದ್ಯಂತ ಭಾರತಮಾತೆಯನ್ನು ಮೆರವಣಿಗೆ ಮಾಡಿದ ಅಪ್ಪಟ ಹಿಂದೂದೇಶಭಕ್ತ – ವರಕವಿದ.ರಾ.ಬೇಂದ್ರೆಕಾಳಿಮಾತೆಯ ವರಪುತ್ರ ನರೇಂದ್ರ ಮುಂದಿನ ಜನ್ಮದಲ್ಲಾದರೂ ನಮ್ಮ ಪುತ್ರನಾಗಿ ಜನಿಸಲಿ -ಶಾರದಾದೇವಿ-ರಾಮಕೃಷ್ಣಪರಮಹಂಸ

ಕುಮಾರಕವಿ ಬಿ.ಎನ್.ನಟರಾಜ್ ೯೦೩೬೯೭೬೪೭೧

      ಬೆಂಗಳೂರು-೫೬೦೦೭೨

By admin