=============================

ಲಾಲ್‍ ಬಹದ್ದೂರ್ ಶಾಸ್ತ್ರೀಜಿ ತಮ್ಮ ಹೆಸರಿನ ಎರಡನೇ ಪದಕ್ಕೆ ಅನ್ವರ್ಥನಾಮರು. ಇವರ ಜೀವನ ಶೈಲಿ ಇವತ್ತಿಗೂ ಜಗತ್ತಿಗೇ ಮಾದರಿ! ಈ ಲೆಜೆಂಡ್ ದಿನಾಂಕ  2.10.1904ರಂದು ಬ್ರಿಟಿಷ್ ಭಾರತದ ಆಗ್ರಾ ಸಂಸ್ಥಾನದ [ಈಗಿನ ಉತ್ತರ ಪ್ರದೇಶದ] ಮುಘಲ್ ಸರಾಯ್ ಎಂಬ    ಗ್ರಾಮದ ಕಡುಬಡತನ ಕುಟುಂಬದಲ್ಲಿ ಜನಿಸಿದರು.

ತಮ್ಮ ಬಾಲ್ಯ-ಯೌವ್ವನದ ಹರೆಯದಲ್ಲಿ ತಲೆಮೇಲೆ ಪುಸ್ತಕ ಹೊತ್ತು ನದಿಯನ್ನು ದಾಟಿ ಶಾಲಾ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಅನನ್ಯ ಸರಸ್ವತಿ ಆರಾಧಕ. ಉನ್ನತ ಶಿಕ್ಷಣ ಪಡೆದು ಸ್ವರಾಜ್ಯ ಚಳುವಳಿಯ ಮುಂಚೂಣಿಯಲ್ಲಿದ್ದು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಸೇರಿದರು. 1928ರಲ್ಲಿ ಲಲಿತಾರನ್ನು ವಿವಾಹವಾಗಿ ಆರು ಮಕ್ಕಳ ತಂದೆಯಾದರು. 

ಕಾಲಕ್ರಮೇಣ ಸ್ವತಂತ್ರ ಭಾರತದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಗಿಂಬಳಕ್ಕೆ ಕೈಚಾಚದೆ ಸಂಬಳದಲ್ಲಿ ಮಾತ್ರ ಜೀವನ ಸಾಗಿಸಿದ ಸರಳ ಸಜ್ಜನಿಕೆಯ ಶಿಖರ. ಭ್ರಷ್ಟಾಚಾರವು ಕ್ಯಾನ್ಸರ್ ರೋಗಕ್ಕಿಂತಲೂ ಅಪಾಯವೆಂದೂ ಭ್ರಷ್ಟಾಚಾರಿಯು ದೇಶದ ಮೊದಲ ಶತ್ರುವೆಂದೂ ಘೋಷಿಸಿದ್ದ ಶಿಸ್ತಿನ ಸಿಪಾಯಿ 1966ನೇ ಇಸವಿ ಜನವರಿ 11ರಂದು 61ನೆ ವಯಸ್ಸಲ್ಲಿ ಕಣ್ಮರೆಯಾದರು. ಮರಣೋತ್ತರ ಭಾರತರತ್ನ ಪುರಸ್ಕೃತ ಪುಣ್ಯಪುರುಷನನ್ನು     ಕೋಟಿ ಕೋಟಿ ಭಾರತೀಯರು ಇಂದಿಗೂ ಸ್ಮರಿಸುತ್ತಾರೆ.

ಅಮರ್ ಜೈಜವಾನ್, ಅಜರಾಮರ ಜೈಕಿಸಾನ್, ಚಿರಂಜೀವಿ ಜೈಹನುಮಾನ್, ಎಂದೆಲ್ಲ ಕೊಂಡಾಡುತ್ತಾರೆ!

ಲಾಲ್‍ಬಹದ್ದೂರ್ ಶಾಸ್ತ್ರಿಜಿ ಮತ್ತು ಗಾಂಧೀಜಿ ಈ ಇಬ್ಬರೂ ಮಹಾತ್ಮರ ಜನ್ಮ ದಿನಾಂಕವು ಪ್ರತಿ ವರ್ಷ ಅಕ್ಟೋಬರ್ 2.

ಬಹಳ ವರ್ಷದಿಂದ ದೇಶಾದ್ಯಂತ ಕೇವಲ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಮಾತ್ರ  ಪ್ರಾಶಸ್ತ್ಯ ನೀಡಲಾಗಿತ್ತು. ಆದರೆ, 

ಕಾಲಕ್ರಮೇಣ ಸತ್ಯಾಸತ್ಯದ ಚರಿತ್ರೆ ಮತ್ತು ಸತ್ವಾಸತ್ವದ 

ಅರಿವು ಮನವರಿಕೆ ಆದನಂತರ, ಕೆಲವು ವರ್ಷಗಳಿಂದ 

ಈಚೆಗೆ  ಸರ್ಕಾರಿ ಹಾಗೂ ಖಾಸಗಿ ಆಡಳಿತ ವತಿಯಿಂದ 

ಶಾಸ್ತ್ರಿ ಜಯಂತಿ ಯನ್ನೂ ಸಹ ಆಚರಿಸಲಾಗುತ್ತಿದೆ?! 

ಭಾರತ್ ಮಾತಾಕೀ ಜೈ! ಭಾರತೀಯನಿಗೇ ಜೈ!

ಸ್ವತಂತ್ರ ಬಂದಂದಿನಿಂದ ಕೋಟಿಗೆ ಗುಲಾಬಿಹೂ ಸಿಕ್ಕಿಸಿಕೊಂಡು ಮಕ್ಕಳೊಡನೆ ಆಟವಾಡಿಕೊಂಡು ದೇಶದ ಆಡಳಿತವನ್ನು ಹುಡುಗಾಟವೆಂದರಿತ ಕುಮಾರನನ್ನು ತಮ್ಮೆದುರು ಮಂಡಿಯೂರಿ ಕುಳಿತುಕೊಳ್ಳುವಂತೆ ಮಾಡಿದರು. ತಮ್ಮಿಷ್ಟದಂತೆ ಬುಗುರಿ/ಕೀಲುಬೊಂಬೆ ಮಾಡಿಕೊಂಡರು ಎಡಬಲದ ಶತ್ರುಗಳು?! ತತ್‍ಪರಿಣಾಮವಾಗಿ ಹುಟ್ಟಿದ್ದೇ ಸಿಓಕೆ(ಚೀನಾ ಆಕ್ರಮಿತ ಕಾಶ್ಮೀರ) ಮತ್ತು ಪಿಓಕೆ(ಪಾಕ್ ಆಕ್ರಮಿತ  ಕಾಶ್ಮೀರ)  ಎಂಬ ರಾಹು-ಕೇತು?

ಒಂದು ಕರಾಳದಿನ ಶತ್ರುಚೀನಾದ ಸೇನೆಯು ಭಾರತವನ್ನು ಆಕ್ರಮಿಸಲು ದಿಲ್ಲಿಯತ್ತ ಬಂದೇಬಿಟ್ಟಿತು ಎಂಬ ಸುಳ್ಳು ಮಾಹಿತಿ ತಿಳಿದ ದೊರೆ ರಾತ್ರೋರಾತ್ರಿ ಹೃದಯ ಸ್ತಂಭಿತನಾಗಿ ನಿಧನವಾದ. ಸತತ 18 ವರ್ಷದಷ್ಟು ಆಡಳಿತ ನಡೆಸಿದರೂ ತನ್ನ ಇಕ್ಕೆಲೆಗಳಲ್ಲಿದ್ದ ಇಬ್ಬರು ಶತ್ರುಗಳಿಗೆ ತಕ್ಕಪಾಠ ಕಲಿಸಲು ವಿಫಲನಾಗಿದ್ದ ಗುಡ್ ಫರ್ ನತಿಂಗ್  ವ್ಯಕ್ತಿ ಅಂತ್ಯವಾದರು?!

ಆ ನಂತರ ದೇಶದ ಸಿಂಹಾಸನ ಏರಿದ ಶಾಸ್ತ್ರಿಯವರ ಆಡಳಿತ ಅವಧಿಯು ಕೇವಲ 18 ತಿಂಗಳದ್ದು ಮಾತ್ರವಾಗಿತ್ತು. ಇಷ್ಟು ಅಲ್ಪಾವಧಿಯಲ್ಲಿ ರಾಕೇಶ (ರಾಹು-ಪಾಕ್, ಕೇತು-ಚೀನಾ, 

ಶನಿ-ದೊಡ್ಡಣ್ಣ) ಎಂಬುವ ಮೂವರಿಗೂ ಈ ಲಿಲಿಪುಟ್  ಲೀಡರ್  ಬೆವರಿಳಿಸಿ ಬುದ್ಧಿ ಕಲಿಸಿದ್ದರು. ಲಾಲ್ ಬಹದ್ದೂರ್ ಶಾಸ್ತ್ರೀಜಿ ನೀಡಿದಂಥ ಆಡಳಿತವು ಶ್ಲಾಘನೀಯವಾಗಿತ್ತು, ತೆಗೆದುಕೊಳ್ಳುತ್ತಿದ್ದ ನಿರ್ಧಾರವು ಸ್ತುತ್ಯಾರ್ಹವಾಗಿತ್ತು. ಇದು

ಭಾರತೀಯರ ಮಾತ್ರವಲ್ಲ ಇಡೀ ವಿಶ್ವಸಂಸ್ಥೆಯ ಅಭಿಪ್ರಾಯವಾಗಿತ್ತು ಎಂಬುದು ಚರಿತ್ರಾರ್ಹ ಸತ್ಯ! 

ಅನಾವಶ್ಯಕವಾಗಿ ಕಾಲು ಕೆರೆದು ಬಂದ ಅನಿರೀಕ್ಷಿತ ಯುದ್ಧ ಸಾರಿದ ಚೀನಾ  ಮತ್ತು  ಪಾಕಿಸ್ತಾನ ದೇಶಗಳಿಗೆ ಬೆಂಬಲ ಕೊಟ್ಟದ್ದು ಅಂದಿನ ಅಮೆರಿಕದಾ(ಯೋಗ್ಯಾ)ಧ್ಯಕ್ಷ!  ಗಾಯದ ಮೇಲೆ ಬರೆ ಹಾಕಲು ನಿರ್ಧರಿಸದ ಅಮೆರಿಕವು ಎಂದಿನಂತೆ ಕೆನಡಿ ಕಾಲದಿಂದಲೂ ಭಾರತಕ್ಕೆ ರಫ್ತು ಮಾಡುತ್ತಿದ್ದ ಗೋಧಿ ಮತ್ತಿತರ ಸರಬರಾಜನ್ನು ನಿಲ್ಲಿಸುವ ಧಮ್ಕಿ ಹಾಕಿತು! ಆಗಲೂ ಧೃತಿಗೆಡದ ಶಾಸ್ತ್ರಿಯವರು ದೊಡ್ಡಣ್ಣನಿಗೆ ಚುರುಕು ಮುಟ್ಟಿಸಿದ್ದು ಹೀಗೆ:-

ನನ್ನ ದೇಶದ 55 ಕೋಟಿ ಪ್ರಜೆಗಳು ಒಂದೊಪ್ಪತ್ತಿನ ಊಟ ಬಿಟ್ಟರೆ ಸಾಕು ನಿನ್ನ ಗೋಧಿಯ ರಫ್ತು ನಮಗೆ ಬೇಕಾಗಿಲ್ಲ! ಎಂಬ ಕಠೋರ ದಿಟ್ಟ ನುಡಿಗಳಿಂದ. ಅಂದಿನ ಕಷ್ಟ ಕಾಲದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು ರಷ್ಯ ದೇಶ. (ಸೋವಿಯತ್ ಯೂನಿಯನ್ ದೇಶ- ಯು.ಎಸ್‍.ಎಸ್‍.ಆರ್.) ಕೇವಲ 21 ದಿನದೊಳಗೆ ಭಾರತದ ವೀರಯೋಧರು ಪಾಕ್ ವಿರುದ್ಧ ಯುದ್ಧ ಗೆದ್ದು ಧೀರಪ್ರಧಾನಿ ಶಾಸ್ತ್ರಿಜೀ ಅವರೊಡನೆ ಸಂಭ್ರಮಿಸೋ ವೇಳೆ ಇನ್ನೇನು ಹತ್ತಿರವಾಗುತ್ತಿದ್ದಂತೆ ಗುಳ್ಳೆನರಿ ಬುದ್ಧಿಯ ಶತ್ರುಗಳು ಶರಣಾಗಿ ಸೀಸ್‍ ಫೈರ್ ಗೆ ಗೋಗರೆದರು!

ರಷ್ಯ ದೇಶದ ಪ್ರಧಾನಿಯವರ ತುರ್ತು ಆಹ್ವಾನ ಮೇರೆಗೆ ಪ್ರಧಾನಿ ಶಾಸ್ತ್ರಿಯವರು ತಾಷ್ಕೆಂಟ್ ನಗರದಲ್ಲಿ ಏರ್ಪಡಿಸಿದ್ದ ಉಭಯ ರಾಷ್ಟ್ರಗಳ “ಶಾಂತಿ ಒಪ್ಪಂದ ಯುದ್ಧ ಸಂಧಾನ ಮಾತುಕತೆ” ಸಭೆಗೆ ತೆರಳಿದರು. ಅವರು ದಿಲ್ಲಿಯಿಂದ ತೆರಳುವಾಗಲೂ, ತಷ್ಕೆಂಟ್ ತಲುಪಿದ ನಂತರವೂ, ಅಲ್ಲಿನಡೆದ ಸಭೆ ಒಡಂಬಡಿಕೆ ಮುಂತಾದ ಕಾರ್ಯಕ್ರಮಗಳು ಮುಕ್ತಾಯವಾದಾಗಲೂ ಸಧೃಢವಾಗಿದ್ದರು! 

ಭಾರತಕ್ಕೆ ಹಿಂದಿರುಗುವ ಹಿಂದಿನ ರಾತ್ರಿವರೆಗೂ ಆರೋಗ್ಯವಂತರಾಗೆ ಇದ್ದು ಅದೇರಾತ್ರಿ ಊಟ ಮುಗಿಸಿ ಹಾಲು ಕುಡಿದು ಮಲಗಿದ ಶಾಸ್ತ್ರೀಜಿ ಮರುದಿನ ಬೆಳಗ್ಗೆ ಏಳಲೇಇಲ್ಲ! ಏಕೆ? ಹೇಗೆ? ಈ ಬಗ್ಗೆ ವೈದ್ಯಕೀಯ ತಪಾಸಣೆ  ಪೋಸ್ಟ್ ಮಾರ್ಟಂ  ಪ್ರಕ್ರಿಯೆ ಜರುಗಲೇ ಇಲ್ಲ. ಇದಾವುದೂ ಆಗದಂತೆ ನೋಡಿಕೊಂಡ ಕಿಡಿಗೇಡಿಗಳು ಈ ಪುಣ್ಯಾತ್ಮನನ್ನು ಶವಪೆಟ್ಟಿಗೆ ಯೊಳಗಿಟ್ಟು ಭಾರತಾಂಬೆಯ ಮಡಿಲ ಸೇರಲು ತಾಯ್ನಾಡಿಗೆ ಹಿಂದಿರುಗಿಸಿದರು. ಮಹಾಪುರುಷ ಶಾಸ್ತ್ರೀಜೀಯ ಅನಿರೀಕ್ಷಿತ ಅನಿಶ್ಚಿತ ಅನ್ಯಾಯದ ಸಾವಿನ ದುರ್‍ಘಟನೆಯ ಹಿಂದೆ  ಯಾರ್ಯಾರ ಕೈವಾಡವಿತ್ತೋ ಏನೇನಾಯ್ತೋ ಎಂಬುದನ್ನು ಅಂದಿನಿಂದ 25 ವರ್ಷಕಾಲ ಯಕ್ಷಪ್ರಶ್ನೆ ಆಗಿಸಿಬಿಟ್ಟರು?! 

ಕಿಡಿಗೇಡಿಯ ಪೂರ್ವಾಗ್ರಹ ಪೀಡಿತ ಷಡ್ಯಂತ್ರಕ್ಕೆ ಸಿಲುಕಿ ವಿಷಾಹಾರ ಸೇವಿಸಿದ ಪರಿಣಾಮ ಅಕಾಲ ಮರಣಕ್ಕೀಡಾದರು. “ಅನ್ಯಾಯವಾಗಿ ಓರ್ವ ಸ್ವಾರ್ಥಿಯ ಅಧಿಕಾರದಾಹ ಕುತಂತ್ರಕ್ಕೆ ಬಲಿಪಶುವಾದರು ಶಾಸ್ತ್ರಿಜೀ” ಎಂಬ ಗಾಳಿಸುದ್ದಿ ಜಗಜ್ಜಾಹೀರಾಯ್ತು? ಆದರೆ, ಫುಡ್ ಪಾಯ್‍ಸನ್  ಕಾರಣಕ್ಕೆ ಈ ಮಹನೀಯರ ಮರಣ ಸಂಭವಿಸಿತೆಂಬ ಸುಳ್ಳನ್ನು ಸಾವಿರ ಸಲ ಹೇಳುವ ಮೂಲಕ ಸತ್ಯವನ್ನಾಗಿಸಿದರು. ಫೊರೆನ್ಸಿಕ್ ಲ್ಯಾಬ್ (Fsl) ರಿಪೋರ್ಟ್ ಅಥವ ಪೋಸ್ಟ್ ಮಾರ್ಟಂ ರಿಪೋರ್ಟ್ ಇದಾವುದಕ್ಕೂ ಅವಕಾಶ ನೀಡದೆ ಶಾಸ್ತ್ರಿಯವರ ಶರೀರದ ಅಂತ್ಯಕ್ರಿಯೆ ಕಾರ್ಯವನ್ನು ತರಾತುರಿಯಿಂದ ಮುಗಿಸಿದ ಮಹಾತಾಯಿ 11 ವರ್ಷ ಕಾಲ ಮೆರೆದುದು ಇತಿಹಾಸ.

ತಮ್ಮ ಜೀವಮಾನವಿಡೀ ನಿಸ್ವಾರ್ಥದಿಂದ ನನ್ನದೇಶ ನನ್ನಜನ ಜೈ ಜವಾನ್, ಜೈ ಕಿಸಾನ್  ಮಂತ್ರ ಜಪಿಸುತ್ತಲೇ ಬದುಕಿದ್ದ

ಲಾಲ್‍ಬಹದ್ದೂರ್ ಶಾಸ್ತ್ರಿಜೀ ಕಾಲವಾದ ನಂತರ ಗದ್ದುಗೆ ಏರಿದ್ದು ಅದಾವ ನ್ಯಾಯ? ಓರ್ವ ಚರಿತ್ರಾರ್ಹ ಶ್ರೇಷ್ಠ ವ್ಯಕ್ತಿಯ ಕತೆ ಮುಗಿಸಿದವರು ಯಾರು? ಈ ಅಮಾನುಷ ಕೃತ್ಯವನ್ನು ರುಜುವಾತು ಪಡಿಸೆ ಹಲವಾರು ಅವಕಾಶ ಅನೇಕ ಮಾರ್ಗಗಳು ಇದ್ದರೂ ಅಂದಿನ ಯಾವೊಬ್ಬ ನೇತಾರನೂ ‘ಚ’ ಕಾರವೆತ್ತಲಿಲ್ಲ. ಅಷ್ಟರಮಟ್ಟಿಗಿತ್ತು ಅ(ಮ್ಮಾ)ವ್ರ ದರ್ಬಾರ್?!

1961ರಲ್ಲಿ ಶಾಸ್ತ್ರಿಯವರು ಸ್ವತಂತ್ರ ಭಾರತದ 6ನೇ ಗೃಹ ಮಂತ್ರಿಯಾಗಿ ತದನಂತರ 1964ರಲ್ಲಿ ದೇಶದ 2ನೇ ಪ್ರಧಾನ ಮಂತ್ರಿಯಾಗಿ ನಿಸ್ವಾರ್ಥ ಹಾಗೂ ಸಮರ್ಥ ಸೇವೆಯನ್ನು ಸಲ್ಲಿಸಿದರು. ಅವರ ಆಡಳಿತದ ಅವಧಿಯಲ್ಲಿ ತಮಗೆ ನೀಡಿದ್ದ ಸರ್ಕಾರಿ ಕಾರನ್ನ ಒಂದೇಒಂದುಸಲ ಮಾತ್ರ ಅವರ ಮಡದಿಯು ಉಪಯೋಗಿಸಿದ್ದಕ್ಕೆ ಆಕೆಗೆ ವಾರ್ನಿಂಗ್ ಮಾಡಿದ್ದರು. ತಮ್ಮ ವೇತನದ ಮೊತ್ತದಿಂದ ಕಡಿತಗೊಳಿಸಿ ಸರ್ಕಾರಿ ಖಜಾನೆಗೆ ಮರುಭರಿಕೆ ಮಾಡುವ ಮೂಲಕ ಸದರಿ ವಾಹನದ ಇಂಧನ ವೆಚ್ಚವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು! 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು:-

ಇಂಥ ಮೌಲ್ಯಾಧಾರಿತ ಸ್ವಚ್ಚ ರಾಜಕಾರಣಿಯನ್ನು ಪ್ರಪಂಚದ  ಆದ್ಯಂತ ಭೂತಕನ್ನಡಿ ಹಿಡಿದು ಹುಡುಕಿದರೂ ಅಲಭ್ಯ! 

ಪ್ರಸ್ತುತ ರಾಜಕೀಯ ಪರಿಸ್ಥಿತಿ ನೋಡುತ್ತಿದ್ದೇವೆ. ಕೆಲವು ಕೀಳು ಕ್ಷುಲ್ಲಕ ರಾಜಕಾರಣಿಗಳು ಪ್ರತಿದಿನ ಪರಸ್ಪರ ಕೆಸರು ಎರಚಾಡುತ್ತ ಎಗರಾಡುವರು. ಪ್ರತಿಯೊಬ್ಬ ಪುಢಾರಿಯು ಪಕ್ಷಾತೀತವಾಗಿ ಭಾರತದಹುಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರಂಥ ಮಹಾ ಪುರುಷನ ಜೀವನಚರಿತ್ರೆ ಓದಬೇಕು, ಓದಿದ್ದನ್ನು ಮರೆಯದೆ ತಮ್ಮ ಜೀವನಕ್ಕೂ ಅಳವಡಿಸಿಕೊಳ್ಳುವ ಆತ್ಮಸಾಕ್ಷಿ ಪ್ರತಿಜ್ಞೆ ಮಾಡ(ಲೇ)ಬೇಕು?!

ಏಕೆಂದರೆ, ಇವರು ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿ [ಅಮುಲ್‍ ಹಾಲು] ಹರಿಕಾರ, ದೇಶದ ಸರ್ವತೋಮುಖ ಅಭಿವೃದ್ಧಿಯ ರೂವಾರಿ. ತಮ್ಮ ಜೀವನದ ಗುರಿಯನ್ನು ತಲುಪಲು, ಸ್ವಾಮಿ ವಿವೇಕಾನಂದ, ಲಾಲ್‍ ಬಾಲ್‍ ಪಾಲ್, ಸರ್ದಾರ್ ಪಟೇಲ್ ಮುಂತಾದವರನ್ನು ಮಾದರಿ ಆಗಿಸಿಕೊಂಡು ದೇಶಸೇವೆ ಮಾಡಿದ ಮಹಾನ್ ದೇಶಭಕ್ತ. 

ಇಂಥ ಮಹಾತ್ಮರನ್ನು ಇಂದಿನ ರಾಜಕಾರಣಿಗಳು ಅನುಕರಿಸುತ್ತ ತಿದ್ದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಕೃತಾರ್ಥರು.

ಮತದಾರನೂಧನ್ಯ?ಭಾರತಾಂಬೆಯೂಪುನೀತೆ? ಆಗಬಹುದು! ಭಾರತದ ಭವಿಷ್ಯದಲ್ಲಿ ಒಳ್ಳೆಯ ದಿನ ನಿರೀಕ್ಷಿಸುವ ಆಶಾಜೀವಿ  ಜೈ ಜವಾನ್ , ಜೈ ಕಿಸಾನ್?!

ಕುಮಾರಕವಿ ಬಿ.ಎನ್. ನಟರಾಜ್ 

9036976471