ಇಂಡಿಯನ್ ಪ್ರೀಮಿಯರ್ ಲೀಗ್ಜೂಜು ಪೆಡಂಭೂತ!

     ೩೦.೪.೧೮೯೮ರಂದು ವಿಕ್ಟೋರಿಯಾ ಗ್ರೌಂಡಲ್ಲಿ ನಡೆದ ಫ಼ುಟ್ಬಾಲ್ ಟೆಸ್ಟ್ ಮ್ಯಾಚಲ್ಲಿ ಜಗತ್ತಿನ ಪ್ರಪ್ರಥಮ ಮ್ಯಾಚ್ ಫ಼ಿಕ್ಸಿಂಗ್ ಘಟನೆ ಜರುಗಿತು! ೧೯೯೯ರಲ್ಲಿ ಭಾರತ-ದ.ಆಫ಼್ರಿಕಾ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಮ್ಯಾಚ್‌ಫ಼ಿಕ್ಸಿಂಗ್-ಬೆಟ್ಟಿಂಗ್ ಹಗರಣ ಪ್ರಾರಂಭವಾಗಿ, ಹ್ಯಾನ್ಸಿಕ್ರೋನೆ ತಪ್ಪೊಪ್ಪಿಕೊಂಡು ನೀಡಿದ ಹೇಳಿಕೆ ಅನ್ವಯ ಆತನ ಜತೆಗೆ ಹರ್ಶಲ್‌ಗಿಬ್ಸ್ ನಿಕಿಬೋಜ್ ಸೇರಿದಂತೆ ಮಹಮದ್‌ಅಜರುದ್ದೀನ್ ಅಜಯ್‌ಜಡೇಜ ಹಾಗೂ ಪಾಕಿಸ್ತಾನದ ಸಲೀಮ್‌ಮಲಿಕ್ ಅವರುಗಳನ್ನು ೪ವರ್ಷಕಾಲ ಎಲ್ಲಾ ತರಹದ ಕ್ರಿಕೆಟ್ ಪಂದ್ಯಗಳಿಂದ ಬ್ಯಾನ್ ಮಾಡಿ ಶಿಕ್ಷೆ ವಿಧಿಸಲಾಯ್ತು!  ೧೯೮೧ರ ‘ಆಶಸ್‌ಕಪ್’ ಸರಣಿ ಪಂದ್ಯದಲ್ಲಿ ಇಂಗ್ಲೆಂಡ್-ಆಷ್ಟ್ರೇಲಿಯ ತಂಡದ ಕೆಲವು ಆಟಗಾರರು ಸಿಕ್ಕಿಬಿದ್ದು ದಂಡತೆರುವ ಜತೆಗೆ ಶಿಕ್ಷೆಯನ್ನೂ ಅನುಭವಿಸಿದ್ದು ದುರಂತ! ೧೯೯೪ರ ಶ್ರೀಲಂಕಾ ಪ್ರವಾಸದಲ್ಲಿದ್ದಾಗ ಶೇನ್ ವಾರ್ನ್ ಮತ್ತು ಮಾರ್ಕ್‌ವಾವ್ ಬುಕ್ಕಿಯೊಬ್ಬನಿಂದ ಹಣಪಡೆದುದು ರುಜುವಾತಾಗಿ ೨ವರ್ಷ ಬ್ಯಾನ್ ಮತ್ತು ಸಾವಿರಾರು ಡಾಲರ್ ದಂಡ ಅನುಭವಿಸಿದರು. ಪಿಚ್ ಟ್ಯಾಂಪರಿಂಗ್ ಹಗರಣಗಳು ಸಾಕಷ್ಟಿವೆ. ಉದಾ:- ಶ್ರೀಲಂಕಾ-ಆಷ್ಟ್ರೇಲಿಯ-ಇಂಗ್ಲೆಂಡ್ ತಂಡಗಳು ೨೦೧೬, ೨೦೧೭, ೨೦೧೮ರಲ್ಲಿ ಆಡಿದ ಟೆಸ್ಟ್-ಏಕದಿನ ಪಂದ್ಯಗಳಲ್ಲಿ ಪಿಚ್-ಫ಼ಿಕ್ಸಿಂಗ್-ಬೆಟ್ಟಿಂಗ್‌ನಿಂದಾಗಿ ೯ಆಟಗಾರರು ಟೂರ್ನಿಯಿಂದ ಡಿಸ್ಮಿಸ್ ಆಗಿದ್ದರು. ಐ.ಸಿ.ಸಿ. ಗಂಭೀರವಾಗಿ ಪರಿಗಣಿಸಿ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಟ್ಟಿಂಗ್-ಮ್ಯಾಚ್‌ಫ಼ಿಕ್ಸಿಂಗ್ ಸಧ್ಯಕ್ಕೆ ಇಲ್ಲವಾಗಿದೆ.

ಐಸಿಸಿಯಂತೆ ಸೂಕ್ತಕ್ರಮ ಕೈಗೊಳ್ಳುವಲ್ಲಿ ಐಪಿಎಲ್ ಎಡವಿರುವುದು ಜಗಜ್ಜಾಹೀರಾಗಿದೆ. ಇದಕ್ಕೆ ಪ್ರಮುಖ ಕಾರಣ ದುರಾಸೆ-ದಾಕ್ಷಿಣ್ಯ! ಈಗಲಾದರೂ ಪ್ರೇಕ್ಷಕರಿಗೆ ಮತ್ತು ಪ್ರತಿಭಾವಂತ ಆಟಗಾರರಿಗೆ ನ್ಯಾಯ ದೊರಕಿಸಲು ಬಿಸಿಸಿಐನ ನೆರವು ಪಡೆದು ಎಲ್ಲಾ ಬುಕ್ಕೀಗಳನ್ನು ಯಾವುದೆ ಮುಲಾಜಿಲ್ಲದೆ ಸಾರಾಸಗಟಾಗಿ [ಸೆರೆ]ಮನೆಗೆ ನೂಕುವಲ್ಲಿ ಐಪಿಎಲ್‌ನ ಸಂಬಂಧಪಟ್ಟ ಅ[ಪದಾ]ಧಿಕಾರಿಗಳು ಕಾನೂನುಕ್ರಮ ಕೈಗೊಳ್ಳುವರೆ? ದೇಶೀಯ ಆಟಗಾರರ ಜತೆಗೆ ಅಂತಾರಾಷ್ಟ್ರ ಆಟಗಾರರನ್ನು ಸೇರಿಸಿ ನಡೆಸುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನಿಷ್ಠಘನತೆ-ಗೌರವ-ನೈತಿಕತೆ ನಿರೀಕ್ಷಿಸುವುದು ನ್ಯಾಯವಲ್ಲವೆ? ಪ್ರಪಂಚದಲ್ಲೆ ಮೊಟ್ಟಮೊದಲು ಪ್ರಾರಂಭಿಸಿದ ‘ಇಂಡಿಯನ್ ಪ್ರೀಮಿಯರ್ ಲೀಗ್’ ಟೂರ್ನಮೆಂಟನ್ನು ಕೆಲವು ಲೋಭಿ ಫ಼್ರಾಂಚೈಸಿ/ಮಾಲೀಕರಿಗೆ ಗಿರವಿಇಟ್ಟು ‘ಜೂಜು’ ಆಗಿಸಿದ್ದು ಯಾವ ನ್ಯಾಯ? ಇದನ್ನು ‘ಕ್ರೀಡೆ’ ಯನ್ನಾಗಿ ಮಾತ್ರ ಪರಿಗಣಿಸಬೇಕಾದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಹಾಗೂ ಹೊಣೆ ಅಲ್ಲವೆ? ಐಪಿಎಲ್‌ಅನ್ನು ತಮ್ಮ ಕಪಿಮುಷ್ಠಿ ಯಲ್ಲಿಟ್ಟುಕೊಂಡವರು ಆಡಿದ್ದೇ ಆಟ ಮಾಡಿದ್ದೇ ಮಾಟ! ಇವರಿಗೆ ಹೇ[ಕೇ]ಳೋರು, ಶಿಕ್ಷೆ ಕೊಡೋರು, ಬಿಗಿಯಾದ ಕ್ರಮ ಜರುಗಿಸೋರು, ಯಾರೂ ಇಲ್ಲವೆ? ಇಂಥ ದಂಧೆ-ಹಗರಣಗಳ ಬಗ್ಗೆ ತೆರೆಕಂಡ ಹಿಂದಿ ಸಿನಿಮಾಗಳು:- (*)೨೦೦೮ರಲ್ಲಿ ‘ಜನ್ನತ್’ (*)೨೦೦೯ರಲ್ಲಿ ‘೯೯’ (*)೨೦೧೫ರಲ್ಲಿ ‘ಕ್ಯಾಲೆಂಡರ್‌ಗರ್ಲ್ಸ್’ (*)೨೦೧೬ರಲ್ಲಿ ‘ಅಜ಼ರ್’ (*)೨೦೧೮ರಲ್ಲಿ ‘ಇನ್‌ಸೈಡ್‌ಎಡ್ಜ್’ ಮುಂತಾದವು ಗ್ಯಾಂಬ್ಲಿಂಗ್ ಪೆಡಂಭೂತದ ಕ[ವ್ಯ]ಥೆಯನ್ನು ವಿವರವಾಗಿ ತೋರಿಸುತ್ತವೆ! ಭಾರತದಲ್ಲಿ ಹಿಂದೆ ಇದ್ದಂತೆ ಕ್ರಿಕೆಟ್-ಸಭ್ಯರ-ಆಟ ವಾಗಿ ಉಳಿದಿಲ್ಲ ಈಗ?! ಎಲ್ಲದರಲ್ಲೂ ಮ್ಯಾಚ್ ಫ಼ಿಕ್ಸಿಂಗ್ ರಕ್ಕಸನದ್ದೆ ದರ್ಬಾರ್? ಲಾಸ್ಟ್ ಬಟ್ ನಾಟ್ ಲೀಸ್ಟ್ ಒಪಿನಿಯನ್:- Any Game is a SPORT & not GAMBLING; Any PLAYER shall not become a GAMBLER! 

Big money or insider trading: Inside the world of betting on cricket

ಅದ್ಭುತಆಶ್ಚರ್ಯಕರ ಅಂಕಿಅಂಶಗಳು!

ಜಗತ್ತಿನಲ್ಲೆ ಅತಿಹೆಚ್ಚು ಕ್ರಿಕೆಟ್ ವೀಕ್ಷಕರು/ಪ್ರೇಕ್ಷಕರು/ಅಭಿಮಾನಿಗಳು ಇರುವ ದೇಶ – ಭಾರತಇಡೀ ಭಾರತದಲ್ಲಿ ಅತಿಹೆಚ್ಚು ಕ್ರಿಕೆಟ್ ಪ್ರೇಕ್ಷಕರು/ಅಭಿಮಾನಿಗಳನ್ನು ಹೊಂದಿರುವ ರಾಜ್ಯ – ಕರ್ನಾಟಕ  

ಪ್ರಪಂಚದ ಅತ್ಯಂತ ಶ್ರೀಮಂತ[ಆದಾಯ]ದ ಸರ್ಕಾರಿ ಸ್ವಾಮ್ಯದ ಕ್ರಿಕೆಟ್ ಬೋರ್ಡ್ –

ಬಿಸಿಸಿಐ ಅತ್ಯಂತ ಹೆಚ್ಚು ಬೆಟ್ಟಿಂಗ್‌ದಂಧೆ/ಆದಾಯ ಇರುವ ಖಾಸಗಿ ಕ್ರಿಕೆಟ್ ಸಂಸ್ಥೆ – ಐಪಿಎಲ್ಇಡೀ ಭಾರತದಲ್ಲಿ ಅತಿಹೆಚ್ಚು ಕ್ರಿಕೆಟ್ ಬೆಟ್ಟಿಂಗ್ ನಡೆವ/ಆದಾಯ ಕೊಡುವ ರಾಜ್ಯ – ಕರ್ನಾಟಕ

ಆರ್‌ಸಿಬಿ ತಂಡವನ್ನು ಹೆಚ್ಚುಬಾರಿ [ಸೆಮಿ]ಫ಼ೈನಲ್ ಹಂತಕ್ಕೆ ಮಾತ್ರ ತಲುಪಿಸುವ ತಂತ್ರಗಾರಿಕೆ ಭೂತದ ಕಪಿಮುಷ್ಠಿಯಲ್ಲಿ? ೧೨ವರ್ಷ ಪರ್ಯಂತ ಆರ್‌ಸಿಬಿ ತಂಡದಿಂದ ಅತಿಹೆಚ್ಚು ಲಾಭ ಗಳಿಸಬೇಕೆಂಬುದು ಪ್ರಾರಂಭದಲ್ಲೆ ನಿರ್ಧಾರವಾಗಿತ್ತ್ತೆ?!

ಯಾರು ಯಾವಾಗ ಹೇಗೆ ‘ಔಟ್’ಆಗಬೇಕು; ‘ಬಾಲ್’ಎಸೆಯಬೇಕು; ಎಂಬುದನ್ನು ‘ಸನ್ನೆ’ಗಳಿಂದಲೆ ಸೂಚಿಸಲಾಗುತ್ತದೆ?!ಪ್ರತಿವರ್ಷವೂ ಐಪಿಎಲ್‌ನ ಆದಾಯದ ಶೇ.೩೫ರಷ್ಟು ದೊರಕಿಸಿಕೊಡುತ್ತಿರುವ ಟೀಮ್ – ಆರ್.ಸಿ.ಬಿ.!

೨೦೦೯, ೨೦೧೧ ಮತ್ತು ೨೦೧೬ರಲ್ಲಿ ಶೇ.೧೦೦ರಷ್ಟು ‘ವಿನ್ನರ್’ ಆಗಬೇಕಾಗಿದ್ದ ಆರ್.ಸಿ.ಬಿ. ತಂಡವನ್ನು ‘ರನ್ನರ್‌ಅಪ್’ ಆಗಿಸಿ ಗಳಿಸಿದ ನಿವ್ವಳ ಲಾಭ ಅನುಕ್ರಮವಾಗಿ ರೂ.೩೫೭೦ಕೋಟಿ, ರೂ.೪೨೫೦ಕೋಟಿ ಹಾಗೂ ೬೫೮೦ಕೋಟಿ!ಮೊನ್ನೆ ೨೬ರ ಭಾನುವಾರದಂದು ಆರ್.ಸಿ.ಬಿ. ತಂಡವನ್ನು ಗೆಲ್ಲಿಸಲೇಬೇಕೆಂದು ಈ ಮೊದಲೇ ನಿರ್ಧಾರವಾಗಿತ್ತ್ತೆ? ಹಾಗೂಒಂದುವೇಳೆ ಆರ್.ಸಿ.ಬಿ. ಸೋತಿದ್ದರೆ, ಪೆಡಂಭೂತ ಜೂಜುಕಟ್ಟೆಗೆ ರೂ.೧೨೬೦ ಕೋಟಿ ನಷ್ಟವಾಗುತ್ತಿತ್ತ್ತೆ?

ಆರ್‌ಸಿಬಿ ; ೨೦೨೧ರ ಐಪಿಎಲ್ ‘ವಿನ್ನರ್’ ಆದರೆ ಬರುವ ಲಾಭ ರೂ.೨೫೦೦ ಕೋಟಿ? ‘ರನ್ನರ್‌ಅಪ್’ ಆದರೆ ಬರುವ ಆದಾಯ ರೂ.೭೫೦೦ ಕೋಟಿ? ಕಾದು ನೋಡೋಣ ‘ಗ್ಯಾಂಬ್ಲಿಂಗ್ ಘೋಸ್ಟ್’ ಏನು ಮಾಡುತ್ತದೊ? ಲೆಟ್ ಅಸ್ ವೈಟ್&ವಾಛ್! 

ಕುಮಾರಕವಿ ನಟರಾಜ್ (೯೦೩೬೯೭೬೪೭೧)
ಬೆಂಗಳೂರು-೫೬೦೦೭೨