
ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರವರ ಸಾವಿಗೆ ವೀರ ಸಾವರ್ಕರ್ ಯುವ ಬಳಗದಿಂದ ಸಂತಾಪ ಸೂಚಿಸಲಾಯಿತು
ಹೆಲಿಕಾಪ್ಟರ್ ಅಪಘಾತದಿಂದ ಮೃತರಾದ ಮೊಟ್ಟ ಮೊದಲ ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಸೇರಿದಂತೆ 11 ಜನರಿಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಂತಾಪ ಸೂಚಿಸಲಾಯಿತು.ಮೊಂಬತ್ತಿ ಹಿಡಿದು ನುಡಿನಮನದ ಮೂಲಕ ಶ್ರದ್ದಾಂಜಲಿ ಸಲ್ಲಿಸಿ, ಮೌನಾಚರಣೆ ಮೂಲಕ ಎಲ್ಲಾ ಮೃತರ ಆತ್ಮಕ್ಕೆ ಸದ್ಗತಿ ಕೋರಲಾಯಿತು.
ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡರವರು ಮಾತನಾಡಿ “ಸೇನಾ ಮುಖ್ಯಸ್ಥರು, ತಮ್ಮ ಕುಟುಂಬದ ಜೊತೆ ಪ್ರಯಾಣ ಮಾಡುತ್ತಿದ್ದಂತಹ ಹೆಲಿಕಾಪ್ಟರ್ ಪತನವಾಗಿರುವುದು ಸಂಶಯಾಸ್ಪದವಾಗಿದೆ. ಇದರ ಹಿಂದೆ ಷಡ್ಯಂತ್ರವಿರುವ ಸಾಧ್ಯತೆ ಹೆಚ್ಚಿದೆ, ಆದ ಕಾರಣ ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರಾವತ್ ರವರು ಮೂರು ದಶಕಗಳಿಗೂ ಹೆಚ್ಚಿನ ಅವಧಿಗೆ ಭಾರತದ ಸೇವೆ ಮಾಡಿದ್ದಾರೆ. ಇತ್ತೀಚೆಗೆ ಪ್ರಪಂಚದ ಗಮನ ಸೆಳೆದ ಉರಿ ಸರ್ಜಿಕಲ್ ಸ್ಟ್ರೈಕ್ ಮುನ್ನಡೆಸಿದ್ದನ್ನು ದೇಶದ ಜನ ಮರೆಯಲಾರರು.ಸಂತಾಪ ಸಭೆಯಲ್ಲಿಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕಿ ರೇಣುಕರಾಜ ,
ವೀರ ಸಾವರ್ಕರ್ ಯುವ ಬಳಗದ ರಾಕೇಶ್ ಭಟ್ ,ಸಂದೇಶ್ ಸಾವರ್ಕರ್ ,ವಿಕ್ರಂ ಅಯ್ಯಂಗಾರ್ ,ಜೋಗಿ ಮಂಜು, ಅನಿಲ್ ಥಾಮಸ್ ,ಟಿ ಎಸ್ ಅರುಣ್ ,ಅಜಯ್ ಶಾಸ್ತ್ರಿ, ಸುಚೇಂದ್ರ ,ಪತ್ರಿಕೆ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿ ,ಕಡಕೊಳ ಜಗದೀಶ್ , ಮಂಜು ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಅಪೂರ್ವ ಸುರೇಶ್ ,ಎಸ್ ಎನ್ ರಾಜೇಶ್, ನವೀನ್ ಕೆಂಪಿ ,ರಂಗನಾಥ್ ,ಮಧುಸೂದನ್ ,ಮೋಹಿತ್ ಗೌಡ ,ಚಂದನ್ ಗೌಡ ,ಚಕ್ರಪಾಣಿ ,ದುರ್ಗಾಪ್ರಸಾದ್ ,ಹಾಗೂ ಇನ್ನಿತರರು ಸಂತಾಪ ಸಭೆಯಲ್ಲಿ ಹಾಜರಿದ್ದರು