ಚಾಮರಾಜನಗರ: ಸ್ವಾತಂತ್ರ್ಯದ ೭೫ನೇ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರದನಹಳ್ಳಿ ಗ್ರಾಮದ ಯೋಧ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕಿನ ಹರದನಹಳ್ಳಿ ನಾಡಕಛೇರಿ ವತಿಯಿಂದ ಆಚರಿಸಲಾದ ೭೫ನೇ ವರ್ಷದ ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹರದನಹಳ್ಳಿ ಗ್ರಾಮದ ಸುಧಾಕರ್ ಅವರು ೨೦ ವರ್ಷಗಳ ಕಾಲ ದೇಶ ಕಾಯುವ ಯೋಧನಾಗಿ ಸೇವೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಬಂದಿದ್ದರುಯ. ಈ ಸಂದರ್ಭದಲ್ಲಿ ನಾಡ ಕಚೇರಿಯ ಸಿಬ್ಬಂದಿ ವರ್ಗದವರು ಗೌರವ ಸಲ್ಲಿಸಿದ್ದಾರೆ
ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಮಹದೇವಪ್ಪ ಸಿರಸ್ತೆದಾರ್ ಗುರುಸಿದ್ದಪ್ಪ ಚಾರು, ಗ್ರಾಮ ಲೆಕ್ಕಿಕ ನಾಗರಾಜು ಕೀರ್ತಿರಾಜ್ ವೆಂಕಟೇಶ್, ಸ್ವಪ್ನ, ಕೇಸ್ ವರ್ಕರ್ ಮಂಜು, ಕಂಪ್ಯೂಟರ್ ಆಪರೇಟರ್ ಮಹೇಶ್, ಗ್ರಾಮ ಸಹಾಯಕ ನಾರಾಯಣಸ್ವಾಮಿ, ನಿಲಯ್ಯ, ಬಂಗಾರು, ರಾಮಚಂದ್ರು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.