ಅಹಮದಾಬಾದ್: ೧೦೦೦ನೇ ಏಕದಿನ ಪಂದ್ಯವನ್ನು ಆಡಿದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ೬ ವಿಕೆಟ್ಗಳ ಭರ್ಜರಿ ಜಯ ಸಾಧಿಸಿಸುವ.  ಮೂಲಕ ತನ್ನ ಐತಿಹಾಸಿಕ (೧೦೦೦ನೇ ಏಕದಿನ ಪಂದ್ಯ) ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಯ್ಕೆ ಮಾಡಿದ್ದು ಬೌಲಿಂಗ್. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಮೊದಲ ಓವರ್ನ್ನೇ ಮೇಡನ್ ಮೂಲಕ ಸಿರಾಜ್ ಉತ್ತಮ ಆರಂಭ ನೀಡಿದರು. ಅಷ್ಟೇ ಅಲ್ಲದೆ ೩ನೇ ಓವರ್ನಲ್ಲಿ ಶಾಯ್ ಹೋಪ್ ವಿಕೆಟ್ ಪಡೆದು ಸಿರಾಜ್ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಬ್ರಾಂಡನ್ ಕಿಂಗ್ ಹಾಗೂ ಬ್ರಾವೊ ವಿಕೆಟ್ ಪಡೆದು ಮಿಂಚಿದರು.

ಮತ್ತೊಂದೆಡೆ ಚಹಲ್ ಕೂಡ ತನ್ನ ಸ್ಪಿನ್ ಮೋಡಿ ಮೂಲಕ ವೆಸ್ಟ್ ಇಂಡೀಸ್ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದರು. ಮೊದಲ ಓವರ್ನಲ್ಲಿ ಪೂರನ್ ಅವರ ವಿಕೆಟ್ ಪಡೆದ ಚಹಲ್ ಮುಂದಿನ ಎಸೆತದಲ್ಲಿ ವಿಂಡೀಸ್ ನಾಯಕ ಪೊಲಾರ್ಡ್ ಅವರನ್ನು ಬೌಲ್ಡ್ ಮಾಡಿದರು. ಅಲ್ಲದೆ ಎರಡನೇ ಓವರ್‌ನಲ್ಲಿ ಶಮ್ರಾ ಬ್ರೂಕ್ಸ್ನ ವಿಕೆಟ್ ಪಡೆದರು. ೭೯ ರನ್ಗೆ ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ಗೆ ಆಸರೆಯಾಗಿದ್ದು ಜೇಸನ್ ಹೋಲ್ಡರ್ ಹಾಗೂ ಫ್ಯಾಬಿಯಾನ್ ಅಲೆನ್.

೮ನೇ ವಿಕೆಟ್ಗೆ ೭೮ ರನ್ಗಳ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ೧೫೦ ರ ಗಡಿದಾಟಿಸಿದರು. ಈ ಹಂತದಲ್ಲಿ ಅಲೆನ್ (೨೯) ಸುಂದರ್ಗೆ ವಿಕೆಟ್ ಒಪ್ಪಿಸಿದರೆ, ಅರ್ಧಶತಕ ಪೂರೈಸಿ ಅಪಾಯಕಾರಿಯಾಗಿ ಪರಿಣಮಿಸಿದ್ದ ಹೋಲ್ಡರ್ (೫೭) ಪ್ರಸಿದ್ಧ್ ಕೃಷ್ಣಗೆ ವಿಕೆಟ್ ನೀಡಿದರು. ಅದರಂತೆ ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು ೪೩.೫ ಓವರ್ಗಳಲ್ಲಿ ೧೭೯ ರನ್ಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಚಹಲ್ ೪ ವಿಕೆಟ್ ಕಬಳಿಸಿದರೆ, ಸುಂದರ್ ೩ ವಿಕೆಟ್ ಪಡೆದು ಮಿಂಚಿದರು. ಇನ್ನು ಪ್ರಸಿದ್ಧ್ ಕೃಷ್ಣ ೨ ವಿಕೆಟ್ ಉರುಳಿಸಿದರೆ, ಸಿರಾಜ್ ೧ ವಿಕೆಟ್ ಪಡೆದರು.

ವೆಸ್ಟ್ ಇಂಡೀಸ್ ನೀಡಿದ ೧೭೭ ರನ್ಗಳ ಟಾರ್ಗೆಟ್ ಅನ್ನು ಬೆನ್ತತ್ತಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್ಮ್ಯಾನ್ ವಿಂಡೀಸ್ ಬೌಲರುಗಳ ವಿರುದ್ದ ತಿರುಗಿಬಿದ್ದರು. ಅದರಂತೆ ೪೨ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ ೫೧ ಎಸೆತಗಳಲ್ಲಿ ೬೦ ರನ್ ಬಾರಿಸಿ ಚೇಸಿಂಗ್ ಅಡಿಪಾಯ ಹಾಕಿಕೊಟ್ಟರು. ಆದರೆ ತಂಡದ ಮೊತ್ತ ೮೪ ರನ್ ಆಗಿದ್ದ ವೇಳೆ ಅಲ್ಝಾರಿ ಜೋಸೆಫ್ ಎಸೆತದಲ್ಲಿ ಎಲ್ಬಿ ಆಗಿ ರೋಹಿತ್ ಶರ್ಮಾ ಹೊರನಡೆದರು. ಈ ವೇಳೆ ಕಣಕ್ಕಿಳಿದ ಕೊಹ್ಲಿ ೮ ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.

ಇದರ ಬೆನ್ನಲ್ಲೇ ಇಶಾನ್ ಕಿಶನ್ (೨೮) ಅಕಿಲ್ ಹೊಸೈನ್ ಎಸೆತದಲ್ಲಿ ಫ್ಯಾಬಿಯನ್ ಅಲೆನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ ಅದಾಗಲೇ ತಂಡದ ಮೊತ್ತ ೧೦೦ ಗಡಿದಾಟಿದ್ದ ಪರಿಣಾಮ ಟೀಮ್ ಇಂಡಿಯಾ ಯಾವುದೇ ಒತ್ತಡಕ್ಕೆ ಸಿಲುಕಿರಲಿಲ್ಲ. ಬಳಿಕ ಬಂದ ರಿಷಭ್ ಪಂತ್ (೧೧) ರನೌಟ್ ಆಗಿ ಹೊರನಡೆದರು.

ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಯಾದವ್ (೩೪) ಹಾಗೂ ದೀಪಕ್ (೨೬) ಹೂಡಾ ೫ನೇ ವಿಕೆಟ್ಗೆ ೬೨ ರನ್ಗಳ ಜೊತೆಯಾಟವಾಡಿದರು. ಈ ಮೂಲಕ ೨೮ ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. ಈ ಐತಿಹಾಸಿಕ ಗೆಲುವಿನೊಂದಿಗೆ ಟೀಮ್ ಇಂಡಿಯಾ ೩ ಪಂದ್ಯಗಳ ಸರಣಿಯಲ್ಲಿ ೧-೦ ಮುನ್ನಡೆ ಸಾಗಿದೆ.