ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನ ನಿಬಿಡ ಸ್ಥಳದಲ್ಲಿ ಮಂಡಲದ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಹೌದು ಮೈಸೂರಿನಲ್ಲಿ ಮಂಡಲದ ಹಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಒಂದು ದಿನಕ್ಕೆ ೪ ರಿಂದ ೬ ಮಂಡಲದ ಹಾವುಗಳು ಪತ್ತೆಯಾಗಿವೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಈ ಮಂಡಲದ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಈ ಹಾವುಗಳು ಅತ್ಯಂತ ವಿಷಯುಕ್ತವಾಗಿರುತ್ತದೆ.

ಈ ಮಂಡಲದ ಹಾವುಗಳನ್ನ ಉರುಗ ಸಂರಕ್ಷಕ ಸೂರ್ಯಕೀರ್ತಿ ಸಂರಕ್ಷಣೆ ಮಾಡಿದ್ದು, ಚಳಿಯಿಂದಾಗಿ ಬೆಚ್ಚಗಿನ ಸ್ಥಳಕ್ಕೆ ಮಂಡಲದ ಹಾವುಗಳು ಬರುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಸೂರ್ಯಕೀರ್ತಿ ಅವರು ಮನವಿ ಮಾಡಿದ್ದಾರೆ.