ಸರಗೂರು: ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಮಾ.26 ರಿಂದ ಮೂರು ದಿನಗಳು ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಬಸವ ಮೂರ್ತಿ ಪ್ರತಿಷ್ಠಾಪನೆ, ನೂತನ ಗೋಪುರ ಕಲಶಾರೋಹಣ, ಧಾರ್ಮಿಕ ಸಭೆ ಕಾರ್ಯಕ್ರಮ ಆಯೋಜಿಸಲಾಗಿದೆ.

26 ರಂದು ಶನಿವಾರ ಗೋಧೂಲಿ ಲಗ್ನದಲ್ಲಿ ರಾತ್ರಿ 7.30 ರಿಂದ 9 ರವರೆಗೆ ಸಲ್ಲುವ ತುಲಾ ಲಗ್ನದಲ್ಲಿ ಆಲು ಪ್ರವೇಶ, ನಂದಿಪೂಜಾ, ಪ್ರವೇಶ ಬಲಿ ಪುಣ್ಯಾಹ, ಗಣಪತಿ ಪೂಜಾ, ರಕ್ಷೋಘ್ನ ಹೋಮ, ವಾಸ್ತು ಬಲಿಪರ್ಯನಾಗ್ನಿಕರಣ ಹಾಗೂ ಭೂತೋಚ್ಚಾಟನಾ ಆಯೋಜಿಸಲಾಗಿದೆ.

27ರಂದು ಬೆಳಗ್ಗೆ 6.20ರಿಂದ 7.25ರವರೆಗೆ ವೃಷೋತ್ಸರ್ಗ ನಂದೀಧ್ವಜಾರೋಹಣ, ಪ್ರಧಾನ ಕಲಶಷ್ಠಾಪನೆ, ಪ್ರಧಾನ ಶ್ರೀ ಬಸವೇಶ್ವರ ಪರಿವಾರ ಕಲಶಷ್ಠಾಪನೆ, ದಿಕ್ಪಾಲಕ ಕಲಶ ನವಗ್ರಹ ಕಲಶ, ಪಂಚಕಲಶ, ಸಪ್ತ ಸಭಾದೇವತಾ ಕಲಶ ಷ್ಠಾಪನೆ, ಉಮಾಮಹೇಶ್ವರ ಲಕ್ಷ್ಮೀನಾರಾಯಣ ವಾಣಿಪ್ರಜಾಪತಿ ಕಲಶ ಷ್ಠಾಪನೆ, ಮಧ್ಯಾಹ್ನ ೩ಕ್ಕೆ ಕಲಶಾರಾಧನೆ, ಪ್ರಧಾನ ಹೋಮ ಅಧಿವಾಸ, ನ್ಯಾಸಾಧಿಕರಣ, ಸಂಕಲೀಕರಣ ಶಯ್ಯಾಧಿವಾಸ ಕಾರ್ಯಕ್ರಮ ನಡೆಯಲಿವೆ.

ಮಾ.೨೮ರಂದು ಬಸವ ನೂತನ ಶಿಲಾಪ್ರತಿಷ್ಠಾಪನೆ ಕಳಾನ್ಯಾಸ, ನೇತ್ರೋನ್ಮಿಲನ ಜತೆಗೆ ಇನ್ನಿತರರ ಕಾರ್ಯಕ್ರಮಗಳು ಹಂಚೀಪುರ ಮಠದ ಚನ್ನಬಸವಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ ಅವರು ಪೂಜಾ ಕೈಂಕರ್ಯ ನಡೆಸಿಕೊಡುವರು. ಚನ್ನಬಸವದೇವರು, ಮಹೇಶ್‌ದೇವರು, ನಾಗಪ್ಪದೇವರು, ಚನ್ನಬಸವದೇವರು, ನಾಗರಾಜು, ಜಗದೀಶ್, ಎಂ.ನಾಗರಾಜು, ರುದ್ರಶರ್ಮ ಆಗಮಿಸುವರು ಎಂದು ಭಾರತೀಯ ಜನತಾ ಪಾರ್ಟಿಯ ಸರಗೂರು ತಾಲೂಕು ಮುಳ್ಳೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಮನುಗನಹಳ್ಳಿ ಮಂಜು ಅವರು ತಿಳಿಸಿದ್ದಾರೆ.

26ರಂದು ವಿಗ್ರಹ ಪ್ರತಿಷ್ಠಾಪನೆ: ಪಡುವಲು ವಿರಕ್ತಮಠದ ಮಹದೇವಸ್ವಾಮೀಜಿ, ಪುರ ಬಸವೇಶ್ವರ ಮಠದ ಚಂದ್ರಶೇಖರಸ್ವಾಮೀಜಿ, ಮಾದಾಪುರ ಮಠದ ಮಲ್ಲಿಕಾರ್ಜುನಸ್ವಾಮೀಜಿ, ಬೀಚನಹಳ್ಳಿ ಮಠದ ನಾಗೇಂದ್ರಸ್ವಾಮೀಜಿ, ಜಕ್ಕಹಳ್ಳಿ ಮಠದ ನಂದೀಶಸ್ವಾಮೀಜಿ, ಹಂಚೀಪುರ ಮಠದ ಕಿರಿಯ ತೋಂಟದಾರ್ಯಸ್ವಾಮೀಜಿ ನೇತೃತ್ವದಲ್ಲಿ ವಿಗ್ರಹ ಪ್ರತಿಷ್ಠಾಪನೆ ಜರುಗಲಿದೆ.

ಧಾರ್ಮಿಕ ಸಭೆ: ಬೆಳಗ್ಗೆ ೧೦.೩೦ಕ್ಕೆ ಮನುಗನಹಳ್ಳಿ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದ್ದು, ಜೆಎಸ್‌ಎಸ್‌ನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಮಹಾಸ್ವಾಮೀಜಿ ಕಲಶಾರೋಹಣ ಮಾಡಲಿದ್ದಾರೆ. ದೇವನೂರು ಮಠದ ಮಹಾಂತಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿನಿರ್ವಾಣ ಮಹಾಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲಸ್ವಾಮೀಜಿ, ಕುದೇರು ಮಠದ ಇಮ್ಮಡಿ ಗುರುಲಿಂಗಸ್ವಾಮೀಜಿ, ಕಂತೆಮಹದೇಶ್ವರ ಬೆಟ್ಟದ ಮಹಾಂತದೇಶಿಕೇಂದ್ರ ಸ್ವಾಮೀಜಿ, ಸಂಗಮ ಮಹೇಶ್ವರಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ.

ಮೈಸೂರಿನ ಕುಂದೂರು ಮಠದ ಡಾ.ಶರತ್‌ಚಂದ್ರಸ್ವಾಮೀಜಿ ಧರ್ಮಸಂದೇಶ ಮಾಡಲಿದ್ದಾರೆ. ಶಾಸಕ ಅನಿಲ್ ಚಿಕ್ಕಮಾಧು ಅಧ್ಯಕ್ಷತೆ ವಹಿಸಲಿದ್ದು, ಶಾಸಕರು. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರಖಂಡ್ರೆ ಅವರು ಸಭೆಯನ್ನು ಉದ್ಘಾಟಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ,ಸೋಮಶೇಖರ್ ಅವರು ಶಿವಕುಮಾರಸ್ವಾಮೀಜಿ ಅವರು ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಅತಿಥಿಗಳಾಗಿ ಮಾಜಿ ಸಂಸದ ಆರ್.ಧ್ರುವನಾರಾಯಣ, ಮಾಜಿ ಶಾಸಕ ಚಿಕ್ಕಣ್ಣ, ಅರಣ್ಯ ವಸತಿ ವಿಹಾರ ಧಾಮಗಳ ಅಧ್ಯಕ್ಷ ಅಪ್ಪಣ್ಣ, ಧರ್ಮಸ್ಥಳದ ಯೋಜನಾಧಿಕಾರಿ ಎಂ.ಶಶಿಧರ್, ಮಹಾಸಭಾದ ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾನ್ಯ, ತಾಲೂಕು ಅಧ್ಯಕ್ಷ ಡಿ.ಜಿ.ಶಿವರಾಜು, ಮೊತ್ತ ಬಸವರಾಜಪ್ಪ, ಮೈಮುಲ್ ನಿರ್ದೇಶಕಿ ದ್ರಾಕ್ಷಾಯಿಣಿ ಬಸವರಾಜಪ್ಪ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಾದಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಗುರುಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ಕೆ.ಪಿ.ಶೀಲಾ ಮಹದೇವು, ಉಪಾಧ್ಯಕ್ಷ ನಟರಾಜು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸಭೆಯಲ್ಲಿ ಉದ್ಯಮಿ ಯು.ಎಸ್.ಶೇಖರ್, ಅನುಪಮ ಹೋಟೆಲ್‌ನ ನಂಜುಂಡಪ್ಪ, ಉದ್ಯಮಿ ಬಾಬುನಾಯಕ್, ಸಮಾಜ ಸೇವಕರಾದ ಎಸ್.ವಿ.ವೆಂಕಟೇಶ್, ಎಂ.ಪಿ.ಮಹದೇವಪ್ಪ, ಉಪ ತಹಶೀಲ್ದಾರ್ ಶಿವಕುಮಾರಿ, ಅಂಬಿಕ ಎಚ್.ಕೆ.ರಾಜಪ್ಪ, ಎಂ.ಕೆ.ಶಿವರಾಜಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಭಾರತೀಯ ಜನತಾ ಪಾರ್ಟಿಯ ಸರಗೂರು ತಾಲೂಕು ಮುಳ್ಳೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಮನುಗನಹಳ್ಳಿ ಮಂಜು ಅವರು ಮೈಸೂರು ಮೀರರ್‌ಗೆ ತಿಳಿಸಿದ್ದಾರೆ.