
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಹೋಬಳಿ ಬಂಡಿಗೆರೆ ಗ್ರಾಮದಲ್ಲಿ ಗ್ರಾಮದ ಉಪ್ಪಾರಸಮುದಾಯದವರು ನೂತನವಾಗಿ ನಿರ್ಮಿಸಿರುವ ಮಹದೇಶ್ವರಸ್ವಾಮಿ ದೇಗುಲದ ಉದ್ಘಾಟನೆ ಶ್ರದ್ದಾಭಕ್ತಿಗಳಿಂದ ನೆರವೇರಿತು.
ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಮಹದೇಶ್ವರಸ್ವಾಮಿ ಮೂರ್ತಿಗೆ ಕೊಳಗಧರಿಸಿ, ನಾನಾಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಇದೇವೇಳೆ ವಿಗ್ರಹಪ್ರತಿಷ್ಠಾಪನೆ, ಪಂಚಾಮೃತಾಭಿಷೇಕ, ನವಗ್ರಹ, ರುದ್ರ, ಗಣಪತಿಹೋಮ, ಪೂರ್ಣಾಹುತಿ, ನಂತರ ಕುಂಭಾಬಿಷೇಕ ನೆರವೇರಿತು.
ಹರದನಹಳ್ಳಿ, ಬಂಡಿಗೆರೆಸೇರಿದಂತೆ ಸುತ್ತಮುತ್ತಲಗ್ರಾಮಗಳ ಭಕ್ತಾದಿಗಳು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿ, ದೇವರಿಗೆಪೂಜೆಸಲ್ಲಿಸಿದರು.
ಮಧ್ಯಾಹ್ನ ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
