ಚಾಮರಾಜನಗರ: ನಗರದ ಪಾಲಿಟೆಕ್ನಿಕ್ ಕಾಲೇಜಿನ ಕಂಪ್ಯೂಟರ್ ವಿಭಾಗವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು.
ಈ ಕಾಲೇಜಿಗೆ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್‌ಗಳು ಕೊಡುಗೆಯಾಗಿ ಬಂದಿದೆ ಅದರೆ ವಿದ್ಯುತ್ ಇಲ್ಲದೆ ಸಂದರ್ಭದಲ್ಲಿ ಕಂಪ್ಯೊಟರ್ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಈಬಗ್ಗೆ ಕಾಲೇಜಿನ ಪ್ರಾಶುಪಾಲರು ಶಾಸಕರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಶಾಸಕರ ಅನುದಾನದಿಂದ ೩.೮೦ಲಕ್ಷರೂ ವೆಚ್ಚದಲ್ಲಿ ೭.೫ ಕೆವಿ ಸಾಮಾರ್ಥ್ಯದ ಯುಪಿಎಸ್ ಬ್ಯಾಟರಿಗಳನ್ನು ವಿತರಿಸಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕ್ಷೇತ್ರ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಅಗತ್ಯವಿರುವ ಕಡೆ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಗೆ ಭೌತಿಕ ಉಪಕರಣಗಳನ್ನು ಒದಗಿಸಲು ಗಮನಹರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಶಾಸಕರ ಬಳಿ ಕಾಲೇಜಿಗೆ ಸುಸಜ್ಚಿತವಾದ ಸುತ್ತುಗೋಡೆ ನಿರ್ಮಿಸಿ ಕೂಡುವಂತೆ ಮನವಿ ಸಲ್ಲಿಸಿದರು.
ಈಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ಕಿಕ್ ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ಸುರೇಶ್.ಕಛೇರಿ ಅಧೀಕ್ಷಕ ಜಯಶಂಕರ್.ಉಪನ್ಯಾಸಕರು ಇದ್ದರು