ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಬೀರಿಹುಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಾಜಿ ಎ ಪಿ ಎಂ ಸಿ ಅಧ್ಯಕ್ಷರಾದ ಪ್ರಭುಸ್ವಾಮಿ, ಬೀರಿಹುಂಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲೇಗೌಡ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಡಿ ಬಿ ಶಂಕರ್, ಪುಟ್ಟಸ್ವಾಮಿ, ನುಗ್ಗಳ್ಳಿ ವನಿತಾ ಮಂಜು, ಪಚ್ಚೆಗೌಡ, ಮಮತಾ ಉದಯ್ ಕುಮಾರ್, ದ್ರಾಕ್ಷಿಯಿಣಿ ಸೋಮೇಶ್, ಪುಟ್ಟಲಕ್ಷ್ಮಮ್ಮ, ಪ್ರಭಾ ಶಿವಕುಮಾರ್, ಹುಚ್ಚೇಗೌಡ ( ಸುಮುಖ ಡೆವಲಪರ್ಸ್ ) ಹಿರಿಯ ಮುಖಂಡರು ಹಾಗೂ ನೂರಾರು ಯುವಕರು ಪಕ್ಷ ತೊರೆದು ಶಾಸಕರಾದ ಜಿ ಟಿ ದೇವೇಗೌಡರ ಸಮ್ಮುಖದಲ್ಲಿ ಜೆ ಡಿ ಎಸ್ ಪಕ್ಷ ಸೇರ್ಪಡೆಗೊಂಡರು.ಸಂದರ್ಭದಲ್ಲಿ ಕೋಟೆಹುಂಡಿ ಮಹದೇವ್, ಬೀರಿಹುಂಡಿ ಶಿವಣ್ಣ, ಬಡಗಲಹುಂಡಿ ಸಿದ್ದೇಗೌಡ, ಟಿ ಕೆ ಲೇಔಟ್ ರಾಜು, ಕೆ ಸಾಲುಂಡಿ ರಾಜು, ಮಾದಳ್ಳಿ ಮಾದಪ್ಪ, ಕೇರ್ಗಳ್ಳಿ ಶಿವಪ್ಪ, ರವಿಶೆಟ್ಟಿ, ಬೋಳೆಗೌಡ, ಕುಮಾರ್ ಬೀಡು ಶಂಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು…