ಆಗಸ್ಟ್ ತಿಂಗಳಲ್ಲಿ ನೂತನ ರಥ ಚಾಮರಾಜನಗರಕ್ಕೆ ಬರಲಿದೆ ಎಂದು ಶಾಸಕ ಸಿ ಪುಟ್ಟರಂಗಶೆಟ್ಟಿ ತಿಳಿಸಿದರು ಇಂದು ಬೆಳಗ್ಗೆ ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರುಚಾಮರಾಜನಗರದ ಪ್ರಸಿದ್ಧ ಆಷಾಢ ಮಾಸದ ಅಂಗವಾಗಿ ಚಾಮರಾಜೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರದ ಪ್ರಸಿದ್ಧ ಆಷಾಢ ಮಾಸದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವ ಈ ಬಾರಿಯೂ ಇಲ್ಲ ಕಾರಣ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಂಡಿದ್ದು ,ದೇವಾಲಯಕ್ಕೆ ಸಂಪ್ರೋಕ್ಷಣೆ ನಡೆಯಬೇಕಿದೆ ಹಾಗಾಗಿ ರಥೋತ್ಸವ ನಡೆಯುತ್ತಿಲ್ಲ 2022ರ ನೂರಕ್ಕೆ ನೂರರಷ್ಟು ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು,
ಆಗಸ್ಟ್ ತಿಂಗಳು ಚಾಮರಾಜನಗರಕ್ಕೆ ನೂತನ ರಥ ಬರಲಿದ್ದು ಅದನ್ನು ಸ್ವಾಗತಿಸಿ ಚಾಮರಾಜೇಶ್ವರ ದೇವಸ್ಥಾನ ಕ್ಕೆ ತರಲು ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ ಎಂದು ಶಾಸಕ ಸಿ ಪುಟ್ಟರಂಗಶೆಟ್ಟಿ ತಿಳಿಸಿದರು ದೇವಾಲಯದ ಜೀರ್ಣೋದ್ಧಾರ ಸಂಪ್ರೋಕ್ಷಣೆ ಪೂಜೆ ಶೀಘ್ರದಲ್ಲೇ ನೆರವೇರಿಸಲು ಅಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ 2022ರ ಮುಂದಿನ ವರ್ಷ ಶ್ರೀ ಚಾಮರಾಜೇಶ್ವರ ರಥೋತ್ಸವ ವಿಜ್ರಂಭಣೆಯಿಂದ ಮಾಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಶಾಸಕರು ತಿಳಿಸಿ ಚಾಮರಾಜೇಶ್ವರ ಭಕ್ತರು ಸಹಕರಿಸಬೇಕೆಂದು ಮನವಿ ಮಾಡಿದರು ಇಂದು ಬೆಳಿಗ್ಗೆ ಚಾಮರಾಜೇಶ್ವರ ವಿಶೇಷ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ದೇವಸ್ಥಾನ ಅರ್ಚಕರಾದ ರಾಮಕೃಷ್ಣ ಭಾರದ್ವಾಜ್ ಅನಿಲ್ ಕುಮಾರ್ ದೀಕ್ಷಿತ್ ಸತೀಶ್ ಕುಮಾರ್ ದೇವಸ್ಥಾನದ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು