ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!
ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು
ಮೈಸೂರು, – ಏಳೆಂಟು ವರ್ಷದ ಹಿಂದೆ ಅಳವಡಿಸಿದ 50 ನೇ ವಾರ್ಡ್ ಪಾರಂಪಾರಿಕ ದೀಪಗಳು ಒಂದು ದಿನವು ಬೆಳಗಲಿಲ್ಲ.ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ಎತ್ತಿದ ಕೈ. ಅದಕ್ಕೆ ಇದೊಂದು ತಾಜಾ ನಿದರ್ಶನ…! ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನುಳಿಸುವ ನಿಟ್ಟಿನಲ್ಲಿ ನಗರಪಾಲಿಕೆ ಕೈಗೊಂಡ ನಿರರ್ಥಕ, ನಿಷ್ಪ್ರಯೋಜಕ ಯೋಜನೆಗಳು ಸಾಕಷ್ಟಿವೆ. ಅವುಗಳಲ್ಲಿ ಪಾರಂಪರಿಕ ಶೈಲಿಯ ವಿದ್ಯುತ್ ಬೀದಿ ದೀಪಗಳ ಅಳವಡಿಕೆಯೂ ಒಂದಾಗಿದೆ.
ಕಳೆದ ಏಳೆಂಟು ವರ್ಷದ ಹಿಂದೆ ವಾರ್ಡ್ ನಂ.50 ರ ವ್ಯಾಪ್ತಿಗೆ ಬರುವ ಸುಣ್ಣಕೇರಿಯ ನಾರಯಣ ಶಾಸ್ತ್ರಿ ರಸ್ತೆಯಲ್ಲಿ ಅಳವಡಿಸಿರುವ ಪಾರಂಪರಿಕ ಶೈಲಿಯ ವಿದ್ಯುತ್ ಬೀದಿ ದೀಪದ ಕಂಬಗಳು ಅರ್ಧ ಕಿಲೋ ಮೀಟರ್‌ನಷ್ಟಿರುವ ಮುಖ್ಯರಸ್ತೆ (ಶಾಂತಲಾ ಚಿತ್ರಮಂದಿರ ಸಿಗ್ನಲ್ ನಿಂದ ಸಿದ್ದಪ್ಪ ಸ್ಕ್ವೇರ್‌ವರೆಗೆ)ಯ ಒಂದು ಬದಿಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಿರುವ ಪಾರಂಪರಿಕ ಶೈಲಿಯ ವಿದ್ಯುತ್ ದೀಪಗಳು ಒಮ್ಮೆಯೂ ಬೆಳಗದೆ ತುಕ್ಕು ಹಿಡಿದು ಚಾಲನೆ ನೀಡದೆ ಸಂಪೂರ್ಣವಾಗಿ ಹಾಳಾಗಿವೆ.

ಮೊಹಲ್ಲಾದ ನಿವಾಸಿಗಳು ಹಾಗೂ ಅಲ್ಲಿನ ಸ್ಥಳೀಯರು ಯಾರು ಕೂಡ ವಿದ್ಯುತ್ ಕಂಬ ಅಳವಡಿಸಿ ಅಂತ ಯಾರಿಗೂ ಕೇಳದೆ ತಮ್ಮಿಷ್ಟಕ್ಕೆ ಬಂದ ಹಾಗೇ ಹೊಸ ವಿದ್ಯುತ್ ಕಂಬ ಅಳವಡಿಸಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ.ಪಾರಂಪಾರಿಕ ಹೊಸ ವಿದ್ಯುತ್ ದೀಪದ ಕಂಬಗಳು ಇನ್ನೂ ಕೂಡ ಅದನ್ನು ಸರಿಪಡಿಸುವ ಕೆಲಸಕ್ಕೆ ಯಾವ ಅಧಿಕಾರಿಗಳು ಸಂಬಂಧ ಪಟ್ಟ ಚುನಾಯಿತ ಪ್ರತಿನಿಧಿಗಳು ಗಮನಕ್ಕೆ ಬಂದರು ಯಾವುದೇ ಪ್ರಯೋಜನ ಆಗಿಲ್ಲ.
ವಿದ್ಯುತ್ ಕಂಬಗಳು ತುಕ್ಕು ಹಿಡಿದಿದ್ದು ಮತ್ತು ಕಂಬಗಳ ಮೇಲೆ ಇರುವ ಲೈಟ್ ಬಲ್ಪಗಳು ಅದಕ್ಕೆ ಅಳವಡಿಸಿದ ಕ್ಯಾಪ್‌ಗಳು ಕಾಣೆಯಾಗಿದ್ದು. ಸರ್ಕಾರದ ಹಣ ಪೋಲು ಮಾಡುತ್ತಿರುವ. ಜನರು ಹಿಡಿಶಾಪ ಹಾಕುತ್ತಿದ್ದಾರೆ.ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸರಿ ಪಡಿಸಿ ಸೂಕ್ತ ಕ್ರಮ ವಹಿಸಿಕೊಡಬೇಕಾಗಿದ್ದು. ಸುಣ್ಣದಕೇರಿಗೆ ಹೊಂದಿಕೊಂಡಿರುವಂತೆ ೧೨ಕ್ಕೂ ಹೆಚ್ಚು ಪಾರಂಪಕರಿಕ ಶೈಲಿಯ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸಲಾಗಿದೆ. ಇದಕ್ಕೆ ಸುಮಾರು ೬ ರಿಂದ ೮ ಲಕ್ಷ ರೂ.ವರೆಗೆ ಖರ್ಚಾಗಿದ್ದು, ಇಡೀ ಯೋಜನೆಯನ್ನೇ ಹಾಳು ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಬೀದಿಪಾಲು ಮಾಡಲಾಗಿದೆ.
ವಿದ್ಯುತ್ ಕಂಬಗಳಿಗೆ ಅಳವಡಿಸಿ, ಯುಜಿ ಕೇಬಲ್ ಮೂಲಕ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ. ಆದರೆ ಇಡೀ ವಿದ್ಯುತ್ ಕಂಬಗಳೇ ನಾಶವಾಗಿದ್ದರು ಇನ್ನೂ ಬೆಳಗಿಸದಿರುವುದಕ್ಕೆ ಇರುವ ಕಾರಣವೇನು ಎಂಬುದು ನಿಗೂಢವಾಗಿದೆ. ಬಹುತೇಕ ಕಂಬಗಳಲ್ಲಿ ಬಲ್ಬಗಳಿಲ್ಲ. ಕೆಲವು ಕಂಬಗಳು ಅರ್ಧಕ್ಕೆ ಮುರಿದು ಹೋಗಿವೆ. ಇನ್ನೂ ಕೆಲವು ಕಂಬಗಳು ಮರಗಳ ನಡುವೆ ಸಿಲುಕಿಚಾಲ್ತಿಯಲ್ಲರುವ ವಿದ್ಯುತ್ ಕಂಬದ ತಂತಿಗೆ ತಗುಲಿದ್ದು ಮುಂದೆ ಅನಾಹುತಕ್ಕೆ ಕಾರಣವಾಗಬಹುದು. ಫುಟ್‌ಪಾತನ್ನೇ ಆವರಿಸಿಕೊಂಡಿರುವ ಗ್ಯಾರೇಜ್‌ಗಳು, ಇನ್ನಿತರೆ ವ್ಯಾಪಾರ ಮಳಿಗೆಗಳಿಂದಾಗಿ ಪಾರಂಪರಿಕ ಶೈಲಿಯ ಕಂಬಗಳು ನಾಮಾವಶೇಷವಾಗಿವೆ. ಇದಕ್ಕೆ ನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣವೆಂದು ಇಲ್ಲಿನ ಜನ ದೂರಿದ್ದಾರೆ.
ಪ್ರಯೋಜನವಿಲ್ಲ: ಸುಣ್ಣದಕೇರಿ ಮುಖ್ಯ ರಸ್ತೆಯ ಬದಿಯಲ್ಲಿ ಪಾರಂಪರಿಕ ಶೈಲಿಯ ವಿದ್ಯುತ್ ಕಂಬಗಳನ್ನು ಅಳವಡಿಸಿ ಸುಮಾರು ಏಳೆಂಟು ವರ್ಷಗಳೇ ಕಳೆದಿವೆ. ಒಂದೇ ಒಂದು ದಿನ ಈ ದೀಪಗಳು ಬೆಳಗಲಿಲ್ಲ. ವಿದ್ಯುತ್ ದೀಪಗಳ ಪಕ್ಕದಲ್ಲಿಯೇ ಯುಜಿ ಕೇಬಲ್ ಸಂಪರ್ಕಕ್ಕೆ ಸಾಕ್ಷಿಯಾಗಿ ನಿಯಂತ್ರಣ ಬಾಕ್ಸ್‌ಗಳನ್ನು ಅಳವಡಿಸಿದ್ದಾರೆ. ಆದರೆ ಇಡೀ ಯೋಜನೆಯೇ ಹಾಳಾಗಿದ್ದು, ಪಾಲಿಕೆ ನಿರರ್ಥಕ, ನಿಷ್ಪ್ರಯೋಜಕ ಯೋಜನೆಗಳಲ್ಲಿ ಇದೂ ಒಂದಾಗಿದೆ ಎಂದು ಇಲ್ಲಿನ ಜನ ಬೇಸರ ವ್ಯಕ್ತಪಡಿಸಿದ್ದಾರೆ.ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ರಂಗಯ್ಯ ಹಾಗೂ ಕೆ.ಆರ್ ಕೇತ್ರದ ಅಧ್ಯಕ್ಷರಾದ ಬಾಸ್ಕರ್ ಒತ್ತಾಯಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ರಂಗಯ್ಯ ಹಾಗೂ ಕೆ.ಆರ್ ಕೇತ್ರದ ಅಧ್ಯಕ್ಷರಾದ ಬಾಸ್ಕರ್ ಒತ್ತಾಯಿಸಿದ್ದಾರೆ.

ಬಾಕ್ಸ್…
ಮೈಸೂರಿನ ಹಳೇ ಏರಿಯಾಗಳಲ್ಲಿ ಸುಣ್ಣದಕೇರಿಯೂ ಒಂದಾಗಿದ್ದು, ಇಲ್ಲಿನ ವಿದ್ಯುತ್ ಕಂಬಗಳು ಚೆನ್ನಾಗಿತ್ತು. ಈಗಲು ಅದೆ ದೀಪ ಬೆಳಗುತ್ತಿದ್ದು. ಸುಮ್ಮನೆ ಇಲ್ಲದೆ ಅದರ ಬದಲು ಇನ್ನೋಂದು ಪಾರಂಪರಿಕ ವಿದ್ಯುತ್ ಕಂಬ ರೀತಿ ಸುಮ್ಮನೆ ನಿಲ್ಲಿಸಿ ಹಣ ದೀಪ ಬೆಳಗದೆ ಹಣ ಗುಳಂ ಮಾಡಿದ್ದಾರೆ 8 ವರ್ಷ ಕಳೆದರು ಜನರಿಗೆ ಇದು ಯಾವ ಕಂಬ ಅನ್ನುವುದು ಗೊತ್ತೆ ಆಗುತ್ತಿಲ್ಲಈ ಭಾಗದಲ್ಲಿ ಅಭಿವೃದ್ಧಿ ಎಂಬುದು ದೂರದ ಮಾತು. ಏಳೆಂಟು ವರ್ಷದ ಹಿಂದೆ ರಸ್ತೆ ಬದಿ ಪಾರಂಪರಿಕ ವಿದ್ಯುತ್ ದೀಪಗಳನ್ನು ಅಳವಡಿಸಿದರು. ಆದರೆ, ಇಲ್ಲಿಯವರೆಗೆ ಅವುಗಳನ್ನು ಬೆಳಗಿಸುವ ಪ್ರಯತ್ನವನ್ನು ಯಾರೊಬ್ಬರು ಮಾಡಿಲ್ಲ. ಪಾಲಿಕೆ ಅಧಿಕಾರಿಗಳು ಸುಣ್ಣದಕೇರಿ ಇದೆ ಎಂಬುದನ್ನೇ ಮರೆತಿದ್ದಾರೆ. ವಿದ್ಯುತ್ ಕಂಬಗಳು ಸಂಪೂರ್ಣವಾಗಿ ಹಾಳಾಗಿವೆ. ಇದೇ ರೀತಿ ಪ್ರಯೋಜನವಿಲ್ಲದ ಯೋಜನೆಗಳನ್ನು ಮಾಡುವುದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.

- ಹೇಮಂತ್ ಕುಮಾರ್,ಎಂ ಕೆ.ಆರ್ ಕ್ಷೇತ್ರ
ಆಮ್ ಆದ್ಮಿ ಪಕ್ಷದ ಯುವ ಮಖಂಡ ೫೦ ನೇ ವಾರ್ಡ್