
ಚಾಮರಾಜನಗರ: ವೈದ್ಯಕೀಯ ವೃತ್ತಿಯಲ್ಲಿ ಯಾವುದೇ ಪ್ರಲೋಭನೆಗೆ ಒಳಗಾಗದೇ ನಿಷ್ಠೆಯಿಂದ ಸೇವಾ ಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದು ಬೆಂಗಳೂರಿನ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯವರಾದ ಡಾ. ಎಂ.ಕೆ. ರಮೇಶ್ ಅವರು ಸಲಹೆ ಮಾಡಿದರು.
ನಗರದ ಹೊರವಲಯದ ಯಡಪುರದ ಬಳಿ ಇರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅವರಣದಲ್ಲಿಂದು ನಡೆದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲನೇ ವರ್ಷದ ಘಟಿಕೋತ್ಸವ ಸಮಾರಂಭವನ್ನು ಉದ್ಗಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಪದವಿ ಪಡೆದು ಉತ್ತಮ ವೈದ್ಯರಾಗುವತ್ತ ಸಾಗಿದ್ದೀರಿ, ತಾವು ಪಡೆದಿರುವ ಪದವಿಯ ಹಿಂದೆ ಹಲವರ ಶ್ರಮಿವಿದೆ. ತಂದೆ-ತಾಯಿ, ಪೋಷಕರು, ಒಂದು ಕಲ್ಲನ್ನು ಕಡೆದು ಅದನ್ನು ಮೂರ್ತಿಯಾಗಿ ರೂಪಿಸುವ ಶಿಕ್ಷಕರು, ನಗರದ ಹೊರಭಾಗದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಾತಾವರಣ ಹಿಂದಿನ ಗುರುಕುಲ ಕಲಿಕೆಯನ್ನು ನೆನಪಿಸುವ ಮಾದರಿಯಲ್ಲಿದೆ. ವೈದ್ಯಕೀಯ ವೃತ್ತಿ ಆರಂಭಿಸುವವರಿಗೆ ಸಾಮಾಜಿಕ ಬದ್ಧತೆ ಇರಬೇಕು. ಸಮಾಜಕ್ಕೆ ನಮ್ಮ ಸೇವೆ ಏನು ಎನ್ನುವುದನ್ನು ಮನಗಾಣಬೇಕು. ಇದು ವೈದ್ಯಕೀಯ ಪದವಿಯ ಮೌಲ್ಯವನ್ನು ಹೆಚ್ಚಿಸಲಿದೆ ಎಂದರು.
ವೈದ್ಯಕೀಯ ವೃತ್ತಿಯಲ್ಲಿ ಏನು, ಯಾಕೆ, ಹೇಗೆ ಎನ್ನು ಕುತೂಹಲವಿರಬೇಕು ಆಗಮಾತ್ರ ವೈಜ್ಞಾನಿಕ ಮನೋಭಾವ ಬೆಳೆಯಲು ಸಾಧ್ಯವಾಗಲಿದೆ. ನಾವು ನಾವಿರುವ ಸ್ಥಳದಲ್ಲಿ ಕೆಲಸವನ್ನು ಶ್ರದ್ಧೆ, ನಿಷ್ಠೆಯಿಂದ ಮಾಡಿದಾಗ ಸೇವೆಯಲ್ಲಿ ಸಾರ್ಥಕತೆ ದೊರೆಯಲಿದೆ. ಸೇವೆ ಮಾಡಲು ಅನೇಕ ಅವಕಾಶಗಳಿವೆ. ವೈದ್ಯಕೀಯ ವೃತ್ತಿಯನ್ನು ಗೌರವಿಸಿ ಅದರಲ್ಲೇ ನೆಮ್ಮದಿ ಕಾಣಬೇಕು. ಉತ್ತಮ ಪರಿಣತಿ ಪಡೆದಿರುವ ನಿಮ್ಮಲ್ಲಿ ಇಂದಿನಿಂದ ಬದಲಾವಣೆ ಆರಂಭವಾಗಲಿದೆ ಎಂದು ಕಿವಿಮಾತು ಹೇಳಿದರು
ಕೋವಿಡ್ ೧೦೦ ವ?ಗಳಿಗೊಮ್ಮೆ ಬರುವ ಸಾಂಕ್ರಾಮಿಕ ರೋಗ. ಇದರಿಂದ ವೈದ್ಯಕೀಯ ವಿಜ್ಞಾನಗಳ ಬಗ್ಗೆ ಸಾಕ? ಮಹತ್ವದ ವಿ?ಯ ಲಭ್ಯವಾಯಿತು, ವೈಜ್ಞಾನಿಕ ಮನೋಭಾವನೆ, ಆನ್ಲೈನ್ ತರಗತಿ, ಉನ್ನತ ಸಂಶೋಧನೆಗೆ ಅವಕಾಶದ ಬಾಗಿಲು ತೆರೆದುಕೊಂಡಿತು ಎಂದರು.
ಜಿಲ್ಲೆಯಲ್ಲಿನ ಆಸ್ಪತ್ರೆಗಳಿಗೆ ಸೋಲಿಗರು, ಬಡವರು, ಮಧ್ಯಮ ವರ್ಗದ ಹೆಚ್ಚು ಜನರು ಬರುತ್ತಾರೆ. ಅವರೊಂದಿಗೆ ಉತ್ತಮ ರೀತಿಯಲ್ಲಿ ಮಾತನಾಡಬೇಕಾಗುತ್ತದೆ. ಇದು ನಮ್ಮ ಸಂಸ್ಕಾರವನ್ನು ಅಭಿವ್ಯಕ್ತಗೊಳಿಸುತ್ತದೆ. ಮೊಬೈಲ್ ಹಾವಳಿಯಿಂದ ಇತ್ತೀಚೆಗೆ ಸಂವಹನ ಕೊರತೆ ಕಾಡುತ್ತಿದೆ. ವೈದ್ಯಕೀಯ ಶಿಕ್ಷಣ ಪಡೆದವರು ಮುಂದಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮನಸ್ಥಿತಿ ಉತ್ತಮಪಡಿಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಸದೃಢ ಜೀವನ ಸಾಗಿಸಿ ಸಮಾಜದಲ್ಲಿ ಪರಿಪೂರ್ಣ ಪ್ರಜೆಯಾಗಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಇಂದು ಮೌಲ್ಯಗಳು ಅಪ್ರಸ್ತುತವಾಗುತ್ತಿದೆ. ಎಲ್ಲರೂ ಮೌಲ್ಯಗಳಿಗೆ ಗೌರವ ನೀಡಬೇಕು. ದೇಶದ ಅಭಿವೃದ್ಧಿಯಲ್ಲಿ ವೈದ್ಯರ ಪಾತ್ರ ಬಹಳ ಪ್ರಮುಖವಾಗಿದೆ. ಸಾಕಷ್ಟು ಜನರ ಆರೋಗ್ಯದ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ದಿನಗಳಲ್ಲಿ ಚಾಮರಾಜನಗರ ವೈದ್ಯಕೀಯ ಕಾಲೇಜಿನ ಕೀರ್ತಿಯನ್ನು ಎಲ್ಲೆಡೆಗೂ ಪಸರಿಸಿ ಎಂದು ಡಾ. ಎಂ.ಕೆ. ರಮೇಶ್ ಅವರು ತಿಳಿಸಿದರು.
ನವದೆಹಲಿಯ ಎಂ.ಎ.ಆರ್.ಬಿ.ಎನ್.ಎಂ.ಸಿ ಅಧ್ಯಕ್ಷರು, ನಿಮಾನ್ಸ್ ಮಾಜಿ ನಿರ್ದೇಶಕರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ. ಬಿ.ಎನ್. ಗಂಗಾಧರ ಅವರು ಮಾತನಾಡಿ ಪಿ.ಜಿ ಗಾಗಿ ಕಲಿಯುತ್ತಿರುವ ೨ ಲಕ್ಷ ವೈದ್ಯರಿದ್ದಾರೆ ಆದರೆ ಕಲಿಕೆ ಬಗ್ಗೆ ಹೆಗ್ಗಳಿಕೆ ಇರಬೇಕು. ಕಲಿಕೆ ಸಮಾಜಕ್ಕೆ ಪೂರಕವಾಗಬಲ್ಲದು ಎಂಬ ಆತ್ಮ ವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು ವೈದ್ಯನಾಗಿ ಸಾಮಾಜಿಕ ಸೇವೆ ಮಾಡುವ ಭಾವನೆ ಮೂಡಬೇಕು ಎಂದರು.
ಬಿಳಿಗಿರಿರಂಗನಬೆಟ್ಟದ ಬುಡಕಟ್ಟು ಆರೋಗ್ಯ ಚಟುವಟಿಕೆಯ ಕರುಣಾ ಟ್ರಸ್ಟ್‌ನ ಸಂಸ್ಥಾಪಕರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ. ಎಚ್.ಆರ್. ಸುದರ್ಶನ್ ಅವರು ಮಾತನಾಡಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದು ಸಮಾಜ ಸೇವೆ ಮಾಡಬೇಕು, ವೈದ್ಯಕೀಯ ವೃತ್ತಿಯನ್ನು ಗೌರವಿಸಬೇಕು. ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆ ವೈದ್ಯಕೀಯ ಬದುಕಿನಲ್ಲಿ ಇರಬೇಕಾದ ಅಗತ್ಯತೆ ಇದೆ. ನಿಮ್ಮ ಗುರಿ ಪ್ರತಿಯೊಬ್ಬ ಜನರಿಗೆ ಆರೋಗ್ಯಯುತ ಬದುಕು ಕಟ್ಟಿಕೊಡುವ ಮಾರ್ಗವಾಗಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ. ಜಿ.ಎಂ. ಸಂಜೀವ್ ಅವರು ಮಾತನಾಡಿ ೨೦೧೬ರಲ್ಲಿ ಆರಂಭವಾದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಪೋಷಕರಲ್ಲಿ ಸಂಸ್ಥೆಯ ಬಗ್ಗೆ ಇದ್ದ ಅತಂಕವನ್ನು ಘಟಿಕೋತ್ಸವ ದೂರ ಮಾಡಿದೆ ಎಂದರೇ ತಪ್ಪಾಗಲಾರದು. ಸರ್ಕಾರ ನುಡಿದಂತೆ ನಡೆದು ಅತ್ಯುತ್ತ್ತಮ ವೈದ್ಯಕೀಯ ವಿಜ್ಞಾನ ಕಾಲೇಜನ್ನು ಜಿಲ್ಲೆ ನೀಡಿದೆ. ಪ್ರವೇಶಾತಿ ಪಡೆದ ೧೪೫ ಮಂದಿಯಲ್ಲಿ ೧೩೮ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಸಂಸ್ಥೆಗೆ ಆರೋಗ್ಯ ಇಲಾಖೆ ಉತ್ತಮ ಸಹಕಾರ ನೀಡಿದೆ ಎಂದರು.
ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಿಂದ ೮ ವಿ?ಯಗಳು ಪ್ರಾರಂಭವಾಗಲಿವೆ. ಜಿಲ್ಲೆಗೆ ಪಿ.ಜಿ ಮಂಜೂರಾದರೇ ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಂತೆ ಉತ್ತಮ ವೈದ್ಯಕೀಯ ಸೇವೆ ನೀಡಲಾಗುವುದು. ವೈದ್ಯಕೀಯ ವೃತ್ತಿಗೆ ಯಾವುದೇ ಚ್ಯುತಿ ಬಾರದಂತೆ ಸೇವೆ ಮನೋಭಾವ ಹೊಂದಿ ನಮ್ಮ ದೇಶದಲ್ಲಿಯೇ ಜನರಿಗೆ ಆರೋಗ್ಯ ಸೇವೆ ನೀಡಲು ಮುಂದಾಗಬೇಕು ಎಂದು ಡಾ.ಸಂಜೀವ್ ಅವರು ತಿಳಿಸಿದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಗಿರೀಶ್ ವಿ ಪಾಟೀಲ್, ಔಷಧ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್, ಸಿಮ್ಸ್ ಬೋಧನಾ ಆಸ್ಪತ್ರೆಯ ಡಿ.ಎನ್.ಎಂ.ಎಸ್ ಡಾ. ಶ್ರೀನಿವಾಸ್, ಇತತರು ಸಮಾರಂಭದಲ್ಲಿ ಇದ್ದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ದೇವಕಿ ಅವರು ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಸಮಾರಂಭದಲ್ಲಿ ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು.
