ಮೈಸೂರು, :  ಜೀವನಶೈಲಿಯಿಂದಾಗಿ, ಇತ್ತೀಚೆಗೆ ಅನೇಕ ಜನರಿಗೆ ಕೆಳಬೆನ್ನಿನ ನೋವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಇಷ್ಟಾದರೂ, ಕೆಲವರು ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಉಳಿದವರು ವಿಳಂಬ ಮಾಡಬಹುದು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಬಹುದು. ನೋವು ತೀವ್ರಗೊಂಡರೆ ಅದು ವ್ಯಕ್ತಿಯ ಚಲನಶೀಲತೆಯ ಮೇಲೆ ಪರಿಣಾಮ ಬೀರಬಹುದು. ಅಂತಹ ಸಂದರ್ಭಗಳಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಬಹುದು. ಕೆಳಬೆನ್ನಿನ ಶಸ್ತ್ರಚಿಕಿತ್ಸೆಗಳು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳು (ಮಣಿಪಾಲ್ ಆಸ್ಪತ್ರೆಗಳ ಒಂದು ಘಟಕ) ಡಿಸೆಕ್ಟಮಿ ಕುರಿತು ಒಂದು ವೆಬಿನಾರ್‌ ಆಯೋಜಿಸಿತ್ತು. ಕೆಳ ಬೆನ್ನುನೋವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು, ಕಾರಣ ಮತ್ತು ಆರೈಕೆ ಕುರಿತು ತಿಳಿದುಕೊಳ್ಳಲು ಸುಮಾರು 86 ಜನರು ವೆಬಿನಾರ್‌ಗೆ ಹಾಜರಾಗಿದ್ದರು.

ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ (ಮಣಿಪಾಲ ಆಸ್ಪತ್ರೆಗಳ ಒಂದು ಘಟಕ)ಯ ನರ ಶಸ್ತ್ರಚಿಕಿತ್ಸಕ ಡಾ. ಮಕ್ಸೂದ್‌ ಅಹ್ಮದ್‌ ಕೆಳಬೆನ್ನು ಮತ್ತು ಬೆನ್ನುಹುರಿಯ ಆರೈಕೆಯ ಕುರಿತು ಚರ್ಚಿಸಿದರು.

ಡಬ್ಲ್ಯುಹೆಚ್‌ಒ ಪ್ರಕಾರ, ಕೆಳ ಬೆನ್ನುನೋವು ವಿಶ್ವದಾದ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆ ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದು ಕಾರ್ಯಕ್ಷಮತೆ ಮತ್ತು ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಬಹುದು. ಒಬ್ಬ ವ್ಯಕ್ತಿ ಯಾವುದೇ ವಯಸ್ಸಿನಲ್ಲಿ ಕೆಳ ಬೆನ್ನುನೋವನ್ನು ಅನುಭವಿಸಬಹುದು ಮತ್ತು ಇದು ಕುಳಿತುಕೊಳ್ಳುವ ಭಂಗಿ, ಭಾರವಾದ ವಸ್ತುಗಳನ್ನು ಎತ್ತುವುದು, ದೈಹಿಕ ಚಟುವಟಿಕೆಯ ಕೊರತೆ, ಡಿಸ್ಕ್ಗೆ ಆಗುವ ಗಾಯಗಳು, ಅಪಘಾತ ಮುಂತಾದ ವಿವಿಧ ಕಾರಣಗಳಿಂದಾಗಿರಬಹುದು. ತೀವ್ರ ನೋವಿಗೆ ಶಸ್ತ್ರಚಿಕಿತ್ಸೆಯಲ್ಲದ ವಿಧಾನಗಳಿಂದ ಚಿಕಿತ್ಸೆ ನೀಡಬಹುದು, ಆದರೆ ದೀರ್ಘಕಾಲಿಕ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ.

ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ (ಮಣಿಪಾಲ ಆಸ್ಪತ್ರೆಗಳ ಒಂದು ಘಟಕ)ಯ ನರ ಶಸ್ತ್ರಚಿಕಿತ್ಸಕ ಡಾ. ಮಕ್ಸೂದ್‌ ಅಹ್ಮದ್‌ ಅವರು ಹೇಳುವಂತೆ, “ಜನರು ಬೆನ್ನುನೋವು ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಭಾವಿಸಿ ಚಿಕಿತ್ಸೆಯನ್ನು ವಿಳಂಬ ಮಾಡುತ್ತಾರೆ, ಅದು ಸರಿಯಲ್ಲ. ನೋವು ತೀವ್ರವಾಗಿದ್ದರೆ ಮತ್ತು ಕೆಲವು ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ವೈದ್ಯಕೀಯ ಸಹಾಯ ಪಡೆಯುವುದು ಮುಖ್ಯ. ಕೆಳ ಬೆನ್ನುನೋವು, ಕಾಲುಗಳ ಕೆಳ ಭಾಗದವರೆಗೆ ಹರಡಿರುವ ಬೆನ್ನುನೋವು, ಕಾಲುಗಳ ದೌರ್ಬಲ್ಯ ಅಥವಾ ಚಪ್ಪಲಿ ತೊಡುವಲ್ಲಿ ತೊಂದರೆ, ವಾಕಿಂಗ್ ಮಾಡುವಾಗ ಕಾಲುಗಳ ನೋವು ಮತ್ತು ಮರಗಟ್ಟುವಿಕೆ ಇತ್ಯಾದಿ ದೀರ್ಘಕಾಲದ ರೋಗಲಕ್ಷಣಗಳನ್ನು ಜನರು ಗುರುತಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಡಿಸೆಕ್ಟಮಿಯಂತಹ ಶಸ್ತ್ರಚಿಕಿತ್ಸೆ ರೋಗಿಗಳಿಗೆ ತಮ್ಮ ಚಲನಶೀಲತೆಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ಪಡೆದ  ರೋಗಿಗಳು ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು.”

“ಡಿಸ್ಸೆಕ್ಟಮಿ ಎನ್ನುವುದು ಸೊಂಟದ (ಕೆಳಬೆನ್ನಿನ) ಶಸ್ತ್ರಚಿಕಿತ್ಸೆಯಾಗಿದ್ದು, ಇಲ್ಲಿ ನರದ ಮೂಲ ಅಥವಾ ಬೆನ್ನುಹುರಿಯ ಮೇಲೆ ಒತ್ತಡ ಹಾಕುವ ಹರ್ನಿಯೇಟೆಡ್ ಡಿಸ್ಕ್ನಂತಹ  ವಸ್ತುವನ್ನು ತೆಗೆದುಹಾಕಲಾಗುತ್ತದೆ. ಅದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ಸಾಮಾನ್ಯ ಚಲನೆ ಮತ್ತು ಕೆಲಸದ ಸಾಮರ್ಥ್ಯವನ್ನು ಪುನಃಸ್ಥಾಪಿಸುತ್ತದೆ. ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ರೋಗಿಗಳಿಗೆ ದೀರ್ಘಕಾಲ ಆಸ್ಪತ್ರೆಯಲ್ಲಿ ಉಳಿಯುವ ಭಯವಿಲ್ಲ. ಈ ಶಸ್ತ್ರಚಿಕಿತ್ಸೆ ಸುರಕ್ಷಿತ ಮತ್ತು ಅಡ್ಡಪರಿಣಾಮಗಳಿಲ್ಲ ಎಂದು ರೋಗಿಗಳಿಗೆ ಭರವಸೆ ನೀಡಬಹುದು,” ಎಂದು ಅವರು ಹೇಳಿದರು.

ತಡೆಗಟ್ಟುವಿಕೆ

  • ಆರೋಗ್ಯಕರ ಜೀವನಶೈಲಿ

  • ಸರಿಯಾದ ಸ್ಥಾನ ಮತ್ತು ಭಂಗಿ

  • ಸರಿಯಾದ ತೂಕ

  • ಧೂಮಪಾನ ತ್ಯಜಿಸಿ

  • ಸರಿಯಾದ ವ್ಯಾಯಾಮಗಳು

  • ಸರಿಯಾದ ಪಥ್ಯ

  • ಸಕಾಲಿಕ ವೈದ್ಯಕೀಯ ಚಿಕಿತ್ಸೆ ಪಡೆಯುವುದು

ನಿಮ್ಮ ಬೆನ್ನನ್ನು ತಿರುಗಿಸುವ ಅಥವಾ ತಗ್ಗಿಸುವ ಚಲನೆಯನ್ನು ತಪ್ಪಿಸಿ. ನಿಮ್ಮ ದೇಹವನ್ನು ಸೂಕ್ತವಾಗಿ ಬಳಸಿ:

1. ಸ್ಮಾರ್ಟ್‌ ಆಗಿ ನಿಂತುಕೊಳ್ಳಿ. ತಲೆ ಕೆಡಿಸಿಕೊಳ್ಳಬೇಡಿ. ತಟಸ್ಥ ಪೆಲ್ವಿಕ್‌ ಸ್ಥಾನವನ್ನು ನಿರ್ವಹಿಸಿ. ನೀವು ದೀರ್ಘಕಾಲದವರೆಗೆ ನಿಲ್ಲಬೇಕಾದರೆ, ನಿಮ್ಮ ಕೆಳಬೆನ್ನಿನಿಂದ ಸ್ವಲ್ಪ ಭಾರವನ್ನು ತೆಗೆದುಕೊಳ್ಳಲು ಒಂದು ಪಾದವನ್ನು ಕಾಲುಮಣೆಯ ಮೇಲೆ ಇರಿಸಿ. ಪರ್ಯಾಯ ಪಾದಗಳು ಬೆನ್ನಿನ ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಒಳ್ಳೆಯ ಭಂಗಿ.

2. ಸ್ಮಾರ್ಟ್‌ ಆಗಿ ಕುಳಿತುಕೊಳ್ಳಿ. ಉತ್ತಮ ಲೋವರ್ ಬ್ಯಾಕ್ ಸಪೋರ್ಟ್, ಆರ್ಮ್‌ ರೆಸ್ಟ್‌ಗಳು ಮತ್ತು ಸ್ವಿವೆಲ್ ಬೇಸ್ ಇರುವ ಆಸನವನ್ನು ಆರಿಸಿ. ನಿಮ್ಮ ಮಧ್ಯದ ಭಾಗದಲ್ಲಿ ಒಂದು ಮೆತ್ತನೆಯ ದಿಂಬು ಅಥವಾ ಸುತ್ತಿಕೊಂಡ ಟವಲ್ ಇಡುವುದರಿಂದ ಸಾಮಾನ್ಯ ಕರ್ವ್ ಅನ್ನು ನಿರ್ವಹಿಸಬಹುದು. ನಿಮ್ಮ ಮೊಣಕಾಲುಗಳು ಮತ್ತು ಸೊಂಟದ ಮಟ್ಟವನ್ನು ನೇರವಾಗಿರಿಸಿ. ಅರ್ಧ ಗಂಟೆಗೊಮ್ಮೆ ನಿಮ್ಮ ಸ್ಥಾನವನ್ನು ಬದಲಾಯಿಸಿ.

3. ಸ್ಮಾರ್ಟ್ ಲಿಫ್ಟ್. ಸಾಧ್ಯವಾದರೆ ಭಾರ ಎತ್ತುವುದನ್ನು ತಪ್ಪಿಸಿ, ಆದರೆ ನೀವು ಭಾರವಾದ ಏನನ್ನಾದರೂ ಎತ್ತಬೇಕಾದರೆ, ನಿಮ್ಮ ಕಾಲುಗಳು ಕೆಲಸ ಮಾಡಲಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ – ತಿರುಚಬೇಡಿ – ಮತ್ತು ಮೊಣಕಾಲುಗಳನ್ನು ಮಾತ್ರ ಬಗ್ಗಿಸಿ. ಭಾರವನ್ನು ನಿಮ್ಮ ದೇಹಕ್ಕೆ ಹತ್ತಿರವಾಗಿ ಹಿಡಿದುಕೊಳ್ಳಿ. ವಸ್ತುವು ಭಾರವಾಗಿದ್ದರೆ ಎತ್ತಲು ಮತ್ತೊಬ್ಬರ ಸಹಕಾರ ಪಡೆಯಿರಿ.

ಮೂಢನಂಬಿಕೆಗಳು!

  • ಎಲ್ಲಾ ಬೆನ್ನುನೋವುಗಳು ಗಂಭೀರ ರೋಗದ ಸೂಚಕ

  • ಹೆಚ್ಚಿನ ಬೆನ್ನುನೋವುಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ

  • ಬೆನ್ನುನೋವಿಗೆ ನಡೆಸಲಾದ ಶಸ್ತ್ರಚಿಕಿತ್ಸೆಗಳು ವಿಫಲವಾಗಿವೆ ಮತ್ತು ಹೆಚ್ಚಿನವುಗಳು ಅಂಗವಿಕಲತೆಗೆ ಕಾರಣವಾಗಿವೆ

ಈ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿದ ಅನೇಕರು ಕೆಳಬೆನ್ನುನೋವನ್ನು ಗುಣಪಡಿಸುವಿಕೆ ಮತ್ತು ಅದನ್ನು ನಿರ್ಲಕ್ಷಿಸುವ ಪರಿಣಾಮಗಳ ಕುರಿತ ಚರ್ಚೆಗೆ ಸಾಕ್ಷಿಯಾದರು.

By admin