ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸಿ ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸಿ ಪಿಡಿಒ ದಿವಾಕರ್ :–
ಸಾರ್ವಜನಿಕರು ನರೇಗಾ ಅನುದಾನ ಬಳಸಿಕೊಂಡು ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವಾಕರ್ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ 2020-21ನೇ ಸಾಲಿನ 14 ಮತ್ತು 15 ನೇನೇ ಹಣಕಾಸು ಯೋಜನೆ ಹಾಗೂ 2020-21 ಮತ್ತು 2021-22ನೇ ಸಾಲಿನ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರು ತಮ್ಮ ತಮ್ಮ ಮನೆಗಳ ಬಚ್ಚಲು ನೀರನ್ನು ಚರಂಡಿಗೆ ಬಿಡದೆ ನರೇಗಾ ಯೋಜನೆ ಅಡಿಯಲ್ಲಿ ಇಂಗು ಗುಂಡಿ ನಿರ್ಮಿಸಿಕೊಂಡು 13ಸಾವಿರ ಅನುದಾನ ಪಡೆಯುವಂತೆ ತಿಳಿಸಿದರು.

ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ತೆಂಗು, ಬಾಳೆ ಬೆಳೆಯಲು ಕ್ರಿಯಾಯೋಜನೆ ತಯಾರಿಸುತ್ತಿದ್ದು ರೈತರು ಪಂಚಾಯಿತಿ ಬಂದು ಹೆಸರು ನೋಂದಾಯಿಸಿಕೊಂಡು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರುತಾಲೂಕು ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಸಂಯೋಜಕ ಯೋಗೇಶ್ ಮಾತನಾಡಿ 15ನೇ ಹಣಕಾಸು ಯೋಜನೆಯಡಿ ಹತ್ತು ಕಾಮಗಾರಿಗಳನ್ನು ಮಾಡಿದ್ದು 19 ಲಕ್ಷ ರೂ ಅನುದಾನ ಖರ್ಚಾಗಿದೆ.14 ನೆಯ ಹಣಕಾಸು ಯೋಜನೆಯಡಿ 32ಕಾಮಗಾರಿಗಳನ್ನು ಮಾಡಿದ್ದು 28 ಲಕ್ಷ ಖರ್ಚಾಗಿದೆ.ನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳು ಸೇರಿದಂತೆ 25 ಲಕ್ಷ ರೂ ಖರ್ಚಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ,ಉಪಾಧ್ಯಕ್ಷೆ ಸೌಮ್ಯಾ , ಸದಸ್ಯ ಇಮ್ರಾನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಇದ್ರಿಸ್ ,ನರೇಗಾ ಯೋಜನೆಯ ಸಹಾಯಕ ಅಭಿಯಂತರೆ ಪಲ್ಲವಿ ,ಲೆಕ್ಕ ಸಹಾಯಕ ಗಣೇಶ್ ,ಹಾಗೂ ಸಾರ್ವಜನಿಕರು ಹಾಜರಿದ್ದರು .