ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು: ಜಿಟಿಡಿ ಸಲಹೆ
ಮೈಸೂರು, ಆ.೨೦- ಮೊದಲಿನಂತೆ ಈಗ ಶಿಪಾರಸ್ಸು ನಡೆಯುವುದಿಲ್ಲ. ಮೇರಿಟ್ ಬಂದರಷ್ಟೇ ಅವಕಾಶ. ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು. ಗಿಡ-ಮರ ಬೆಳಸುವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪೂನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಮೈಸೂರಿನ ಯಲಚನಹಳ್ಳಿ(ಕೆಹೆಚ್‌ಬಿ ಕಾಲೋನಿ)ಯಲ್ಲಿರುವ ಎಸ್.ಎಲ್.ಡಿ. ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ‘ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟ’ದ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಹೋಬಳಿ ಮಟ್ಟದ ಕೀಡಾಕೂಟದಲ್ಲಿ ಗೆದ್ದವರು ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಗೆಲ್ಲಬೇಕು. ಹಾಗೆಯೇ ಸೋತವರು ಮತ್ತೆ ಮತ್ತೆ ಗೆಲ್ಲುವ ಪ್ರಯತ್ನ ನಡೆಸಿ ಗೆಲ್ಲಬೇಕು ಎಂದು ಪ್ರೊತ್ಸಾಹ ನೀಡಿದರು.
ವಿದ್ಯಾರ್ಥಿಗಳು ಸುಳ್ಳು ಹೇಳಬಾರದು. ನಿತ್ಯ ದೇವರಿಗೆ ನಮಸ್ಕಾರ ಮಾಡುವಂತೆ ತಂದೆ-ತಾಯಿಯAದಿರಿಗೆ ನಮಸ್ಕರಿಸಿ ಶಾಲೆಗೆ ಬರಬೇಕು. ಉತ್ತಮ ಪ್ರಜೆಗಳಾಗಿ ತಂದೆ-ತಾಯಂದಿರಿಗೆ, ನಾಡಿಗೆ ಕೀರ್ತಿ ತರಬೇಕು ಎಂದರಲ್ಲದೆ ಶಾಲೆ ಬಿಟ್ಟಿರುವ ಮಕ್ಕಳನ್ನು ಕರೆದುಕೊಂಡು ಬರಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಸ್ವಚ್ಛತೆ ಕಾಪಾಡಿ: ಶಾಲೆ ಆವರಣದಲ್ಲಿ ಸ್ವಚ್ಛತೆ ಕಾಪಾಡವುದು ಮುಖ್ಯವಾಗಿದೆ. ಈ ನಿಟ್ಟನಲ್ಲಿ ಆಯಾ ಗ್ರಾಪಂನ ಪಿಡಿಓಗಳು, ಶಾಲಾ ಮುಖ್ಯಸ್ಥರು ಗನ ಹರಿಸಬೇಕು ಎಂದು ಸೂಚಿಸಿ, ಪ್ರತೀಯೊಂದು ಶಾಲೆಗಳಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.


ಕ್ರೀಡಾಕೂಟ ಉದ್ಘಾಟಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತ್ಯಂತ ಮುಖ್ಯವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕವಾಗಿದೆ. ಸೋಲು-ಗೆಲುವವನ್ನು ಸಮಚಿತ್ತದಿಂದ ಸ್ವೀಕರಿಸುವ ಭಾವನೆಯೂ ಕ್ರೀಡೆಯಿಂದ ದೊರೆಯುತ್ತದೆ. ಸಮೂಹಿಕ ಗುಣವನ್ನು ಸಹ ಕ್ರೀಡೆಯೂ ನಮಗೆ ಕಲಿಸಿಕೊಡುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಹಾರೈಸಿದರು.


೧೨೦೦ ವಿದ್ಯಾರ್ಥಿಗಳು ಬಾಕಿ: ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹೋಬಳಿ ವ್ಯಾಪಿಯ ಸರ್ಕಾರಿ ಹಾಗೂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳಿಂದ ಸುಮಾರು ೧೨೦೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು.ಅಂತರಾಷ್ಟೀಯ ಮಟ್ಟದ ಕ್ರೀಡಾಪಟು ರಕ್ಷಿತ್ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಜಿಪಂ ಸದಸ್ಯರಾದ ಶಿವಮೂರ್ತಿ, ಅರುಣ್‌ಕುಮಾರ್, ಎಸ್‌ಎಲ್‌ಡಿ ಎಕ್ಸಲೆಂಟ್ ಪಬ್ಲಿಕ್ ಶಾಲೆ ಅಧ್ಯಕ್ಷ ಜಯರಾಮೇಗೌಡ, ಕಾರ್ಯದರ್ಶಿ ಕವಿತಾ, ಖಜಾಂಚಿ ರಾಘವ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಹದೇವ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎ.ಮಲ್ಲೇಶ್ವರಿ, ಯೋಗ ಶಿಕ್ಷಕ ಡಾ.ಪಿ.ಎನ್.ಗಣೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.