ನಗರದ ವಿವೇಕಾನಂದ ವ್ರತ್ತದಲ್ಲಿ ನಡೆದ ಕರ್ನಾಟಕ ಸೇನಾಪಡೆಯ ವತಿಯಿಂದ 65ನೇ ಕರ್ನಾಟಕ ಏಕೀಕರಣ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಉಗ್ರಾಣ ನಿಗಮದ ರಾಜ್ಯ ನಿರ್ದೇಶಕರಾದ ಡಾ.ಜಿ.ರವಿರವರು ಮಾತನಾಡುತ್ತ ಮುಂಬರುವ ದಿವಸಗಳಲ್ಲಿ ನಮ್ಮ ರಾಜ್ಯವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಅದರಲ್ಲೂ ಕನ್ನಡ ನಾಡು-ನುಡಿ-ನೆಲ-ಜಲ ಈ ವಿಚಾರಗಳಿಗೆ ಸಂಬಂದಪಟ್ಟಂತೆ ಕನ್ನಡ ಭುವನೇಶ್ವರಿಯ ಮಕ್ಕಳು ಇನ್ನು ತೀರ್ವತರವಾದ ಹೋರಾಟಕ್ಕೆ ಸಜ್ಜುಗೊಳ್ಳಬೇಕಿದೆ. ರಾಜ್ಯದ ರಕ್ಷಣೆಗೋಸ್ಕರ ನಾವು ಯಾರನ್ನೂ ನಂಬುವ ಸ್ಥೀತಿಯಲ್ಲಿರಬಾರದು. ಹಾಗೇನಾದರು ಅಪಾಯ ಬಂದಲ್ಲಿ ಹೆಗಲಮೇಲಿನ ಶಾಲನ್ನು ಸೊಂಟಕ್ಕೆ ಬಿಗಿದು ಭುವನೇಶ್ವರಿಯ ವೀರ ಪುತ್ರರಂತೆ ಹೋರಾಡಿ ನಾಡು-ನುಡಿ-ಜಲವನ್ನು ರಕ್ಷಿಸಲು ಪಣತೊಡಬೇಕು, ಅದಕ್ಕೆ ನಮ್ಮ ತನು,ಮನ,ಧನ ಹೋದರು ಚಿಂತಿಸಬಾರದು. ರಾಜ್ಯದ ಮೂಲೆ ಮೂಲೆಗಳಲ್ಲಿ ಕರ್ನಾಟಕ ಸೇನಾ ಪಡೆಯಂತ ಸೇನಾನಿಗಳು ರಾಜ್ಯದ ರಕ್ಷಣೆಗೆ ನಿಲ್ಲಬೇಕು ಎಂದು ಮುಂಬರುವ ರಾಜ್ಯದ ಸಂಕಷ್ಟಗಳನ್ನು ಎಳೆ ಎಳೆಯಾಗಿ ವಿವರಿಸಿದರು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿದ ಮೈಸೂರು ನಗರ ಉಪ ಪೋಲಿಸ್ ಆಯುಕ್ತರಾದ ಡಾ. ಎ ಎನ್ ಪ್ರಕಾಶ್ ಗೌಡ ರವರು ಮಾತನಾಡಿ ಬಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಕನ್ನಡ ಮಾತನಾಡುವ ಜನರನ್ನೆಲ್ಲ ಸೇರಿಸಿ ಹರಿದು ಹಂಚಿ ಹೋಗಿದ್ದ ಮಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ & ಹೈದರಾಬಾದ್ ಕರ್ನಾಟಕ ಗಳನ್ನೆಲ್ಲ ಒಗ್ಗೂಡಿಸಿ 1953 ರ ನವೆಂಬರ್ 1 ರಂದು ಮೈಸೂರು ರಾಜ್ಯ ವಾಗಿ, ನಂತರ 1973 ರ ನವೆಂಬರ್ , ಅಂದಿನ ಮುಖ್ಯಮಂತ್ರಿ ಗಳಾಗಿದ್ದ ಡಿ. ದೇವರಾಜ್ ಅರಸು ರವರ ಸಮಯದಲ್ಲಿ ಕರ್ನಾಟಕ ಎಂದು ಮರುನಾಮಕರಣ ವಾಯಿತು. ಕರ್ನಾಟಕ ಏಕೀಕರಣ ಕ್ಕಾಗಿ ಶ್ರಮಿಸಿದವರಲ್ಲಿ ಮೊದಲಿಗರು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸಾಹಿತಿಗಳಾದ ದ ರಾ ಬೇಂದ್ರೆ, ಕುವೆಂಪು, ಆಲೂರು ವೆಂಕಟರಾಯರು, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ್ ಅರಸು, ಅನಕೃ ರವರುಗಳು ಏಕೀಕರಣ ಕ್ಕಾಗಿ ಶ್ರಮಿಸಿದವರು. ಕನ್ನಡವನ್ನು ಎಲ್ಲಾರೂ ಹೆಚ್ಚು ಹೆಚ್ಚು ಬಳಸಬೇಕು ಎಂದರು, ಈ ನಿಟ್ಟಿನಲ್ಲಿ ಕರ್ನಾಟಕ ಸೇನಾ ಪಡೆ ಬಹಳ ಉತ್ತಮ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಮುಡಾ ಅಧ್ಯಕ್ಷರಾದ ರಾಜೀವ್ ರವರು ವಹಿಸಿದ್ದರು.

ಮುಖ್ಯ ಅತಿತಿಗಳಾಗಿ ಡಾ. ಬಿ.ಆರ್.ನಟರಾಜ್ ಜೋಯಿಸ್ ರವರು,ಕುವೆಂಪು ನಗರ ಪಾಲಿಕೆ ಸದಸ್ಯರಾದ ಎಂ ಸಿ ರಮೇಶ್ ಹಾಜರಿದ್ದು, ಸಮಾಜ ಸೇವಕರಾದ ಶಿವೇಗೌಡರು ಸುಮಾರು 40 ಜನರಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ ಅನ್ನು ವಿತರಿಸಿದರು. ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಕಾರ್ಯಕ್ರಮದ ಸ್ವಾಗತ & ಪ್ರಾಸ್ತಾವಿಕ ನುಡಿದರು.

ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ, ಸಾಧ್ವಿ ದಿನಪತ್ರಿಕೆಯ ಶ್ರೀ ಸಿ. ಮಹೇಶ್ವರನ್ -ಪತ್ರಿಕೋದ್ಯಮ, ಕೆ ಎಸ್ ಆರ್ ಟಿ ಸಿ ಭದ್ರತಾ ಅಧಿಕಾರಿ ಶ್ರೀ ಶಿವರಾಜೇ ಗೌಡ- ಸರ್ಕಾರಿ ಸೇವೆ, ಸಮಾಜ ಸೇವಕ ಶ್ರೀ ಎನ್. ಎಂ ನವೀನ್ ಕುಮಾರ್- ಸಂಘಟನೆ, ಶ್ರೀಮತಿ ವೈದೇಹಿ ಅಯ್ಯಂಗಾರ್-ಧಾರ್ಮಿಕ, ಶ್ರೀಮತಿ ಪುಷ್ಪಾ ಎ ಅಯ್ಯಂಗಾರ್-ಸಾಹಿತ್ಯ, ಭಾರತೀಯ ಜೀವವಿಮಾ ದ ಕೊರೊನಾ ವಾರಿಯರ್ ಶ್ರೀ ಡಿ. ದಿವ್ಯಾನಂದ್-ಜನಸೇವೆ, ಡಾ. ಯೋಗಣ್ಣ- ವೈದ್ಯಕೀಯ, ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಬ್ಲಿಕ್ ಟಿವಿ ಹಿರಿಯ ವರದಿಗಾರ ಶ್ರೀ ಕೆ. ಪಿ. ನಾಗರಾಜ್- ದೃಶ್ಯ ಮಾಧ್ಯಮ, ನೃತ್ಯ ಕಲಾವಿದೆ ಶ್ರೀಮತಿ ಪ್ರಸನ್ನ ಲಕ್ಷ್ಮೀ ಕಳಾಧರ್, ಹಿರಿಯ ಕನ್ನಡ ಆಟೋ ಚಾಲಕ ಕೊವಾ ರಾಜಣ್ಣ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

By admin